Saturday, May 11, 2024
spot_img
More

    Latest Posts

    ಬಂಟ್ವಾಳ: ಪ್ರಧಾನಿ ಹುಟ್ಟುಹಬ್ಬಕ್ಕೆ ಫ್ಯಾನ್ಸಿ ನಂಬರ್ ನೋಟುಗಳ ಸಂಗ್ರಹದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಯಾಸೀರ್

    ಬಂಟ್ವಾಳ: ಫ್ಯಾನ್ಸಿ ನಂಬರ್ ಗಳ ನೋಟುಗಳ ಸಂಗ್ರಹದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಯಾಸೀರ್ ಕಲ್ಲಡ್ಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದಕ್ಕೊಂದು ವಿಶೇಷ ಸಂಗ್ರಹ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

    ಪ್ರಧಾನಿ ಎಂಬ ಗೌರವ- ಅಭಿಮಾನದಿಂದ ನಾನು ಈ ವಿಶೇಷ ಸಂಗ್ರಹ ನಡೆಸಿದ್ದೇನೆ, ಇಲ್ಲಿ ರಾಜಕೀಯದ ಯಾವುದೇ ಹಿತಾಸಕ್ತಿ ಇಲ್ಲ. ಸಂಗ್ರಹಗಳು ಮುಂದಿನ ತಲೆಮಾರುಗಳಿಗೂ ಜ್ಞಾನವನ್ನು ನೀಡಬೇಕೆನ್ನುವುದು ನನ್ನ ಪ್ರತೀ ಸಂಗ್ರಹದ ಉದ್ದೇಶ ಎನ್ನುತ್ತಾರೆ ಯಾಸಿರ್. 17/09/1950 ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾಗಿದ್ದು, ಈ ಸಂಖ್ಯೆಯ ನೋಟಿನ ಜೊತೆಗೆ “ಕಲೆಕ್ಷನ್ ಆಫ್ 100 ಬರ್ತ್ ಡೇಟ್ ನೋಟ್ಸ್” ಎನ್ನುವ ಡೈರಿಯನ್ನು ಯಾಸಿರ್ ಸಿದ್ಧಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಚಲಾವಣೆಗೆ ಬಂದಿರುವ ಇಪ್ಪತ್ತು ರೂಪಾಯಿಯ ಹೊಸನೋಟಿನಲ್ಲೇ ಪ್ರಧಾನಿ ಮೋದಿಯವರ ಜನ್ಮದಿನಾಂಕದ ಸಂಖ್ಯೆ ಯನ್ನು ಹುಡುಕಿ ಸಂಗ್ರಹಿಸಿರುವ ಯಾಸೀರ್ , 100 ಹುಟ್ಟುಹಬ್ಬದ ಪರಿಕಲ್ಪನೆಯನ್ನು ಡೈರಿಯಲ್ಲಿ ನೀಡಿದ್ದಾರೆ. ಪ್ರತಿ ಪುಟದಲ್ಲಿ 5 ನೋಟಿನಂತೆ ಇಪ್ಪತ್ತು ಪುಟಗಳ ಈ ಡೈರಿಯಲ್ಲಿ ಮೋದಿ ಜೀವನದ ಪ್ರಮುಖ ಘಟ್ಟಗಳನ್ನು ಆಯಾ ವರ್ಷಕ್ಕೆ ಸಂಬಂಧಿಸಿದ ಪುಟಗಳಲ್ಲಿ ದಾಖಲಿಸಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss