Tuesday, March 19, 2024
spot_img
More

    Latest Posts

    ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿ ಅನುಸರಿಸಿದ ತಂತ್ರ.!

    ರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳು ವಿವಿಧ ತಂತ್ರಗಳಿಗೆ ಮೊರೆ ಹೋಗುವುದು ಹೊಸದೇನಲ್ಲ. ‘ಮುನ್ನಾಬಾಯ್ ಎಂಬಿಬಿಎಸ್’ ಚಿತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಮಾಡುವ ದೃಶ್ಯವಿದ್ದು, ನಿಜ ಜೀವನದಲ್ಲೂ ಇದನ್ನು ಅನುಸರಿಸಿದವರಿದ್ದಾರೆ.

    ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ನಕಲು ಮಾಡಲು ವಿಭಿನ್ನ ತಂತ್ರಗಾರಿಕೆಯನ್ನು ಬಳಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅದು ವೈರಲ್ ಆಗಿದೆ. ಬಹಳ ವರ್ಷಗಳ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರೊಫೆಸರ್ ಒಬ್ಬರು ಇದರ ಫೋಟೋವನ್ನು ಈಗ ಹರಿಬಿಟ್ಟಿದ್ದಾರೆ.

    ಕಾನೂನು ಪರೀಕ್ಷೆಗೆ ಸಂಬಂಧಪಟ್ಟ ಇಡೀ ಪಠ್ಯವನ್ನೇ ಈ ವಿದ್ಯಾರ್ಥಿ 11 ಪೆನ್ನುಗಳ ಮೇಲೆ ಕೆತ್ತಿಕೊಂಡು ಪರೀಕ್ಷೆಗೆ ಹಾಜರಾಗಿದ್ದ ಎನ್ನಲಾಗಿದೆ. ಪರೀಕ್ಷೆಯಲ್ಲಿ ಪೆನ್ನುಗಳು ಅವಶ್ಯಕವಾಗಿರುವ ಕಾರಣ ಆತ ಈ ತಂತ್ರಕ್ಕೆ ಮೊರೆ ಹೋಗಿದ್ದ.

    ಆದರೆ ಇದು ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ಬಿದ್ದಿದ್ದು, ಆತನಿಂದ ಪೆನ್ನುಗಳನ್ನು ಕಸಿದುಕೊಳ್ಳಲಾಗಿತ್ತು. ಇದೀಗ ಪ್ರೊಫೆಸರ್ ಒಬ್ಬರು ಕಾಲೇಜು ಸಂಗ್ರಹದಲ್ಲಿ ಸಿಕ್ಕಿದ್ದ ಈ ಪೆನ್ನುಗಳ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss