Tuesday, June 25, 2024
spot_img
More

  Latest Posts

  1989 ಕಾಯ್ದೆ ಯಡಿ ದೌರ್ಜನ್ಯ ಪ್ರಕರಣ : ಆರೋಪಿ ಖುಲಾಸೆ

  ಮಂಗಳೂರು: ಕೇಸಿನ ಸಾರಾಂಶ ವೇನೆಂದರೆ, ನೊಂದ ಬಾಲಕಿಯವರು, ಆರೋಪಿಯಾದ ಎಮ್. ಡಿ. ಇಬ್ರಾರ್ @ ಮುನ್ನ
  ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 376 (2) ಅತ್ಯಾಚಾರ, ಕಲಂ 366 ಅಪಹರಣ, ಕಲಂ 363
  ಅಪಹರಣಕ್ಕೆ ಶಿಕ್ಷೆ, ಕಲಂ 417 ಮೋಸ ಹಾಗೂ, ಕಲಂ 6 ಪೋಕ್ಲೋ ಕಾಯ್ದೆ 2012 ಅಡಿ ಲೈಂಗಿಕ ದೌರ್ಜನ್ಯ
  ಮತ್ತು ಕಲಂ 3 (2) (V), 3(1) (ಡಬ್ಲ್ಯೂ) (1), ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ
  (ದೌರ್ಜನ್ಯ ತಡೆ) 1989 ಕಾಯ್ದೆ ಯಡಿ ದೌರ್ಜನ್ಯವನ್ನು ಎಸಗಿರುವುದಾಗಿ ದಿನಾಂಕ 25/3/2019 ರಂದು
  ಉಳ್ಳಾಲ ಪೊಲೀಸ್ ಠಾಣೆಗೆ ದೂರು ದಾಖಲಾಗಿರುತ್ತದೆ. ಅದರಂತೆ ಅಪರಾಧ ಸಂಖ್ಯೆ 34 / 2019 ಅಡಿ
  ಎಫ್.ಐ. ಆರ್. ಆರೋಪಿಯ ವಿರುದ್ಧ ದಾಖಲಾಗಿರುತ್ತದೆ. ಆರೋಪಿಯನ್ನು ಉಳ್ಳಾಲ ಪೊಲೀಸ್
  ಠಾಣೆಯವರು ದಸ್ತಗಿರಿ ಮಾಡಿ ಅವನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಯಿತು.
  ಈ ಕೇಸಿಗೆ ಸಂಬಂಧಿಸಿದಂತೆ, ಸ್ಪೆಷಲ್ ಕೇಸ್ ಸಂಖ್ಯೆ 68 / 2019 ಕೇಸ್ ಮಾನ್ಯ ಮೊದಲನೇ ಫಾಸ್ಟ್ ಟ್ರ್ಯಾಕ್
  ವಿಶೇಷ ನ್ಯಾಯಾಲಯ ಮಂಗಳೂರು ಸಮ್ಮುಖದಲ್ಲಿ ಕೇಸಿನ ವಿಚಾರಣೆ ನಡೆದಿರುತ್ತದೆ. ಪಿರ್ಯಾಧಿದಾರರ
  ಪರವಾಗಿ, ಸಾಕ್ಷಿ ವಿಚಾರಣೆಗೆ16 ಸಾಕ್ಷಿಗಳು ವಿಚಾರಣೆಗೆ ಒಳಪಟ್ಟು ಅದೇ ರೀತಿ EX P1 to Ex P16
  ದಾಖಲೆಗಳನ್ನು ಗುರುತಿಸಲಾಗಿದೆ. ಈ ಪ್ರಕರಣದ ವಿಚಾರಣೆ ಕೈಗೊಂಡ ಉಳ್ಳಾಲ ಠಾಣೆ ತನಿಖಾಧಿಕಾರಿಯು
  ತನಿಖೆ ನಡೆಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸತ್ರ ನ್ಯಾಯಾಲಯ ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ.
  ಆರೋಪಿಯ ಪರವಾಗಿ ಹಾಗೂ ಅಭಿಯೋಜಕರ ಪರವಾಗಿ ನ್ಯಾಯಾಲಯದಲ್ಲಿ ವಾದ ಹಾಗೂ ವಿವಾದ
  ಮಂಡನೆ ಆಗಿದ್ದು, ಅದರಂತೆ ಮಾನ್ಯ ಮೊದಲನೇ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಮಂಗಳೂರು
  ಆರೋಪಿ ಹಾಗೂ ಅಭಿಯೋಜಕರ ವಾದ ವಿವಾದ ಬಳಿಕ ಎಲ್ಲಾ ಸಾಕ್ಷಿ ಆಧಾರಗಳನ್ನು ಪರಿಶೀಲಿಸಿ ದಿನಾಂಕ
  19/12/2023 ರಂದು ಅಂತಿಮ ತೀರ್ಪು ನೀಡಿದೆ.
  ಮಾನ್ಯ ನ್ಯಾಯಾಲಯವು ವಾದ ಪ್ರತಿವಾದ ಆಳಿಸಿ ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಕೊರತೆಯಿಂದ
  ಆರೋಪಿಯನ್ನು ಈ ಪ್ರಕರಣದಿಂದ ದಿನಾಂಕ19/12/2023 ರಂದು ಮಾನ್ಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸತ್ರ
  ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಮಂಜುಳ ಇಟ್ಟಿ ರವರು ಈ ಪ್ರಕರಣದಿಂದ ಆರೋಪಿಯನ್ನು
  ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ನೀಡಿರುತ್ತಾರೆ.
  ಈ ತೀರ್ಪಿನ ಪ್ರಕಾರ ಮಾನ್ಯ ನ್ಯಾಯಾಲಯವು ಆರೋಪಿಗೆ ಎಲ್ಲಾ ಆರೋಪ ಪ್ರತ್ಯಾರೋಪ ಗಳಿಂದ ದೋಷ
  ಮುಕ್ತಗೊಳಿಸಿ, ಆರೋಪಿಯನ್ನು ಬಿಡುಗಡೆಗೊಳಿಸಿದೆ .ಪ್ರಕರಣದ ವಿಚಾರಣೆಯನ್ನು ಕೈಗೊಂಡ ಮಾನ್ಯ
  ನ್ಯಾಯಾಲಯವು ಸಂತ್ರಸ್ತೆ ಪರವಾಗಿ ಸರಕಾರಿ ವಕೀಲರು ವಾದಿಸಿದರು, ಆರೋಪಿಯ ಪರವಾಗಿ ವೆರಿಟಾಸ್
  ಲೆಗೀಸ್ ಅಸೋಸಿಯೇಟ್ಸ್ ವಕೀಲರಾದ ಶ್ರೀ ರಾಘವೇಂದ್ರ ರಾವ್, ಶ್ರೀಮತಿ ಗೌರಿ ಶೆಣೈ ಮತ್ತು ಶ್ರೀಮತಿ ನವ್ಯ
  ಸಚಿನ್ ವಾದಿಸಿದರು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss