Tuesday, March 19, 2024
spot_img
More

    Latest Posts

    ಸಮಾಜದಲ್ಲಿ ನೆಮ್ಮದಿಯ ವಾತಾವರಣ ಹಾಗೂ ಶಾಂತಿ ಸಹಬಾಳ್ವೆಗೆ ಕ್ರಿಕೆಟ್ ಒಂದು ಉತ್ತಮ ಕ್ರೀಡೆ-ಯೋಗೀಶ್ ಶೆಟ್ಟಿ ಜಪ್ಪು

    ವಿಘ್ನೇಶ್ವರ ಕ್ರಿಕೆಟರ್ಸ್,ಪಡು ಪೋಸ್ಟ್ ಆಫೀಸ್ ಇದರ ಆಶ್ರಯದಲ್ಲಿ4ನೇ ವರ್ಷದ 18 ತಂಡಗಳ ನಾಕ್ ಔಟ್ ಮಾದರಿಯ ಪಂದ್ಯಾಕೂಟ ಇಂದು (ಅ.13) ನೀರು ಮಾರ್ಗ ಸಮೀಪದ ಕುಂಪ್ಲೊಟ್ಟು ಮೈದಾನದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.


    ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ನೆಮ್ಮದಿಯ ವಾತಾವರಣ ಹಾಗೂ ಶಾಂತಿ ಸಹಬಾಳ್ವೆಗೆ ಕ್ರಿಕೆಟ್ ಒಂದು ಉತ್ತಮ ಕ್ರೀಡೆಯಾಗಿದೆ ಎಂದು ಹೇಳಿದರು.ಹಾಗೂ ಈ ಮೂಲಕ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕೂಡ ಕ್ರಿಕೆಟ್ ಸಹಕಾರಿಯಾಗಲಿದೆ ಎಂದು ತಿಳಿಸಿದರು.


    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿರುವಂತಹ ಮಾಜಿ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ಪಧ್ಮನಾಭ ಕೋಟ್ಯಾನ್ ರವರು ನಾರಾಯಣ ಗುರುಗಳ ತತ್ವದಂತೆ ಒಂದೇ ದೇವರು,ಒಂದೇ ಮತ,ಒಂದೇ ಕುಲ ಎಂಬ ನೀತಿಯಂತೆ ನಾವೆಲ್ಲರೂ ಎಲ್ಲಾ ಸಮಾಜ ಭಾಂಧವರನ್ನು ಒಗ್ಗೂಡಿಸಲು ಕ್ರಿಕೆಟ್ ಒಂದು ಉತ್ತಮ ಕ್ರೀಡೆ ಎಂದು ಹೇಳಿದರೆ ತಪ್ಪಾಗಲಾರದು ಎಂದು ತಿಳಿಸಿದರು. ಈ ಮೂಲಕ ನಾವೆಲ್ಲರೂ ಇಂತಹ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮಾಣೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕುಂಞಣ್ಣ ಶೆಟ್ಟಿ, ಮಿಮಿಕ್ರಿ ಖ್ಯಾತಿಯ ಚಲನಚಿತ್ರ ನಟ ಶರಣ್ ಕೈಕಂಬ , ಗುರುಪುರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅದ್ಯಕ್ಷರಾದ ಕೀರ್ತಿರಾಜ್ ಗುರಿಹಿತ್ಲು, ಕಾರ್ಯಕ್ರಮ ಅಯೋಜಕರಾದ ಚಂದ್ರಹಾಸ್ ನೀರುಮಾರ್ಗ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

    ನಟ ಮಿಮಿಕ್ರಿ ಶರಣ್ ಕೈಕಂಬ ರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss