PAN ಕಾರ್ಡ್ ಆದಾಯ ತೆರಿಗೆ ಇಲಾಖೆಯು ವ್ಯಕ್ತಿಯ ಎಲ್ಲಾ ವಹಿವಾಟುಗಳನ್ನು ಲಿಂಕ್ ಮಾಡಲು ಶಕ್ತಗೊಳಿಸುತ್ತದೆ. ಪ್ಯಾನ್ ಕಾರ್ಡ್ ಸಹಾಯದಿಂದ, ತೆರಿಗೆ ಪಾವತಿ, ಟಿಡಿಎಸ್ ಮತ್ತು ಟಿಡಿಎಸ್ ಕ್ರೆಡಿಟ್, ಆದಾಯ ರಿಟರ್ನ್ ಮತ್ತು ಇತರ ವಹಿವಾಟುಗಳ ಮಾಹಿತಿಯನ್ನು ಪ್ರವೇಶಿಸಬಹುದು.

ಪ್ಯಾನ್-ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಗಡುವು ನೀಡಿತ್ತು. ಮಾರ್ಚ್ 31 2023ರೊಳಗೆ ಎಲ್ಲರೂ ಆಧಾರ್-ಪ್ಯಾನ್ ಲಿಂಕ್ ಮಾಡಲು ಡೆಡ್ಲೈನ್ ನೀಡಿತ್ತು.
ಇದೀಗ ಕೇಂದ್ರ ಸರ್ಕಾರ ಈ ಗಡುವನ್ನು ವಿಸ್ತರಣೆ ಮಾಡಿದೆ. ಆಧಾರ್ ಜೋಡಣೆ ಅವಧಿಯನ್ನು ಮುಂದಿನ ವರ್ಷ ಅಂದರೆ ಮಾರ್ಚ್ 31 2024ರವರೆಗೂ ವಿಸ್ತರಣೆ ಮಾಡಲಾಗಿದೆ.
ಪ್ಯಾನ್ ಕಾರ್ಡ್‌ನಲ್ಲಿನ ವಿಳಾಸವನ್ನು ಆಧಾರ್ ಸಹಾಯದಿಂದ ಬದಲಾಯಿಸಬಹುದು. ಕೆಲವು ಸಂದರ್ಭಗಳಲ್ಲಿ, ಜನರಿಗೆ ಈ ಸೌಲಭ್ಯವನ್ನು ನೀಡಲಾಗಿದೆ. ಮಾನ್ಯ ಆಧಾರ್ ಹೊಂದಿರುವವರು ತಮ್ಮ ಪ್ಯಾನ್ ಕಾರ್ಡ್‌ನಲ್ಲಿ ತಮ್ಮ ನಿವಾಸದ ವಿಳಾಸವನ್ನು ಬದಲಾಯಿಸಲು ಅಥವಾ ನವೀಕರಿಸಲು ಸರ್ಕಾರವು ಸುಲಭಗೊಳಿಸಿದೆ.
ಯಾರಾದರೂ ಪ್ಯಾನ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಬದಲಾಯಿಸಲು ಅಥವಾ ನವೀಕರಿಸಲು ಬಯಸಿದರೆ, ಅವರು ಯುಟಿಐ ಇನ್‌ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಮತ್ತು ಸರ್ವಿಸಸ್ ಲಿಮಿಟೆಡ್‌ನ ಪೋರ್ಟಲ್‌ಗೆ ಭೇಟಿ ನೀಡಬೇಕು.