ಪೆರ್ಲ: ಡಿವೈಎಫ್ ಐ ಎಣ್ಮಕಜೆ ವಿಲೇಜ್ ಸಮಿತಿ ಆಶ್ರಯದಲ್ಲಿ ಜ.28ರಂದು ಬೆದ್ರಂಪಳ್ಳದಲ್ಲಿ ಕಾಂ.ಭಾಸ್ಕರ ಕುಂಬಳೆ ಸ್ಮರಣಾರ್ಥ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ಪಂದ್ಯಾಟ ನಡೆಯಲಿದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ.30003,ದ್ವಿತೀಯ ರೂ.15003 ತೃತೀಯ ಹಾಗೂ ಚತುರ್ಥ ತಲಾ ರೂ 5000 ಹಾಗೂ ಶಾಶ್ವತ ಫಲಕ ನೀಡಲಾಗುವುದು. ಪಂದ್ಯಾಟದ ಯಶಸ್ವಿಗಾಗಿ ಸ್ಬಾಗತ ಸಮಿತಿ ರೂಫೀಕರಣ ಸಭೆ ಬೆದ್ರಂಪಳ್ಳ ಎಎಲ್ ಪಿ ಶಾಲಾ ಪರಿಸರದಲ್ಲಿ ಜರಗಿತು.
ಡಿವೈಎಫ್ ಐ ವಿಲೇಜ್ ಸಮಿತಿ ಅಧ್ಯಕ್ಷ ರಾಜೇಶ್ ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ಸಿಪಿಐಎಂ ಎಣ್ಮಕಜೆ ಲೋಕಲ್ ಕಾರ್ಯದರ್ಶಿ ವಿನೋದ್ ಪೆರ್ಲ, ರಾಮಕೃಷ್ಣ ರೈ,ನಾಸಿರ್ ಮಲಂಗರೆ, ಅಬ್ದುಲ್ಲ ಕುಂಞಿ ನಡುಬೈಲ್, ಚನಿಯಪ್ಪ ಪೂಜಾರಿ ಅಲಾರ್, ಪುಷ್ಪಾ ಬೆದ್ರಂಪಳ್ಳ, ವಿಶ್ವರಾಜ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. 16 ತಂಡಗಳ ಆಹ್ವಾನಿತ ಕಬ್ಬಡಿ ಪಂದ್ಯಾಟದಲ್ಲಿ ಆಖಿಲ ಭಾರತೀಯ ಹಾಗೂ ರಾಜ್ಯ ಮಟ್ಟದ ಕಬ್ಬಡಿ ಆಟಗಾರರನ್ನು ಪಾಲ್ಗೊಳ್ಳಿಸಲು ಸಭೆ ನಿರ್ಧರಿಸಿದೆ.
ಇದರ ಯಶಸ್ವಿಗಾಗಿ ರಚಿಸಿದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ವಿನೋದ್ ಪೆರ್ಲ ಉಪಾಧ್ಯಕ್ಷರುಗಳಾಗಿ ರಾಮಕೃಷ್ಣ ರೈ,ಅಬ್ದುಲ್ಲ ಕುಂಞಿ ನಡುಬೈಲ್, ಚನಿಯಪ್ಪ ಪೂಜಾರಿ ಅಲಾರ್, ಪುಷ್ಪಾ ಬೆದ್ರಂಪಳ್ಳ ಪ್ರ.ಸಂಚಾಲಕ ವಿಶ್ವರಾಜ್, ರಾಜೇಶ್,ಯುಸೂಫ್ ,ವಿನೋದ್,ಸುಕುಮಾರ ಸಹ ಸಂಚಾಲಕರುಗಳಾಗಿ ಆಯ್ಕೆ ಮಾಡಲಾಯಿತು. ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.