Monday, July 15, 2024
spot_img
More

  Latest Posts

  ಪುತ್ತೂರು: ಸರಣಿ ಕಳ್ಳತನದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

  ಪುತ್ತೂರು: ಕೆದಿಲದಲ್ಲಿ ನ. 22ರಂದು ನಡೆದ ಸರಣಿ ಕಳ್ಳತನದ ಆರೋಪಿಯನ್ನು ಸ್ಥಳೀಯರು ಡಿ. 4ರಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಲತಃ ವಿಟ್ಲ ಸಮೀಪದ ಕಡಂಬು ನಿವಾಸಿ ಹಾಲಿ ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಅಬೂಬಕ್ಕರ್‌ ಯಾನೆ ಇತ್ತೆ ಬರ್ಪೆ ಅಬೂಬ್ಬಕರ್‌ ಬಂಧಿತ.

  ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಡಿ. 19ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

  ಕೆದಿಲದ ರಮ್ಲ ಕುಂಞಿ ಮನೆಯಲ್ಲಿ ಕಳ್ಳತನಗೈದಿದ್ದ ಆರೋಪಿ ಕೋಡಿ ನಿವಾಸಿ ಉಮ್ಮರ್‌ ಫಾರೂಕ್‌ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದಿದ್ದ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss