ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟಿವಿ, ರೆಫ್ರಿಜಿರೇಟರ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎನ್ನಲಾಗಿದೆ.
ಅಮೆರಿಕದ ಡಾಲರ್ ಎದುರು ಭಾರತದ ಕರೆನ್ಸಿ ರೂಪಾಯಿ ದುರ್ಬಲಗೊಂಡ ಪರಿಣಾಮ ಸಾಬೂನಿಂದ ಬಿಸ್ಕತ್ ತನಕ ಎಫ್ ಎಂಸಿಜಿ ವಲಯದ ಪದಾರ್ಥಗಳ ಬೆಲೆಯಲ್ಲೂ ಏರಿಕೆಯಾಗಲಿದೆ. ಡಾಲರ್ ಎದುರು ಭಾರತದ ಕರೆನ್ಸಿ 77 ರೂ.ಗೆ ಕುಸಿದಿರುವುದರಿಂದ ಉತ್ಪನ್ನಗಳ ದರ ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ಮಾರ್ಟ್ ಫೋನ್ ಮತ್ತು ಕಂಪ್ಯೂಟರ್ ಗಳ ದರಗಳು ಈ ತಿಂಗಳಿನಿಂದಲೇ ಶೇ. 3-5 ರಷ್ಟು ಏರಿಕೆಯಾಗಲಿದೆ. ಕಾರ್ ಉತ್ಪಾದಕ ಕಂಪನಿಗಳೂ ಕಾರುಗಳ ಬೆಲೆ ಏರಿಸಲು ನಿರ್ಧರಿಸಿವೆ. ಬಿಸ್ಕತ್, ರಸ್ಕ್, ಬ್ರೆಡ್, ಕೇಕ್, ಡೇರಿ ಉತ್ಪನ್ನಳ ಬೆಲೆಯೂ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಟಿವಿಎಸ್ ಸ್ಕೂಟರ್, ಮೋಟಾರ್ ಸೈಕಲ್ ಗಳು 1000 ರೂ.ನಿಂದ 2,500 ರೂ.ಗೆ ವರೆಗೆ ಹೆಚ್ಚಳವಾಗಿವೆ. ಈಗಾಗಲೇ ಮಾರ್ಚ್, ಏಪ್ರಿಲ್ ನಲ್ಲಿ ಕೆಲವು ಪದಾರ್ಥಗಳ ದರಗಳು ಏರಿಕೆಯಾಗಿದ್ದು, ಎರಡನೇ ಹಂತದ ಹೆಚ್ಚಳವವು ಮೇ. 2-3 ನೇ ವಾರದಿಂದಲೇ ಆರಂಭವಾಗಬಹುದು ಎನ್ನಲಾಗಿದೆ.