Monday, May 20, 2024
spot_img
More

  Latest Posts

  ತೌಳವ ಚಕ್ರವರ್ತಿ ಕೊಡುಗೈ ದಾನಿ ಡಾ. ಡೇವಿಡ್ ಫ್ರಾಂಕ್ ಫರ್ನಾಂಡಿಸ್ ಅವರ ಬದುಕು, ಸಾಮಾಜಿಕ ಸೇವೆ ಮತ್ತು ಸಾಧನೆ, ಯುವ ಸಮೂಹಕ್ಕೆ ಮಾದರಿ.

  ಯುಎಇ : ತಮ್ಮ ಉದ್ಯಮದ ಮೂಲಕ ಸಮಾಜ ಸೇವೆಗೆ ಕೈಮಿಗಿಲಾದ ಕೊಡುಗೆ ನೀಡಿದ ಡಾ.ಡೇವಿಡ್ ಫ್ರಾಂಕ್ ಫರ್ನಾಂಡಿಸ್ ಅವರಿಗೆ ಈ ಬಾರಿಯ ದಿ ಟೈಮ್ಸ್ ಆಫ್ ಇಂಡಿಯಾ ದ “ಇಟಿ ಬಿಸಿನೆಸ್ ಎಕ್ಸಲೆನ್ಸ್ 2020 ಪ್ರಶಸ್ತಿ” ಘೋಷಿಸಲಾಗಿದೆ. ಇವರು ಒರ್ವ ಅಭೂತಪೂರ್ವ ಸಾಧಕ ,ಸಂಸ್ಕೃತಿ ಸಂವರ್ಧನೆಯ ಸಂವಾಹಕ. ಮೂಲತಃ‌ ದಕ್ಷಿಣ ಕನ್ನಡ ಜಿಲ್ಲೆ ಅರ್ಥಾತ್ ಕರಾವಳಿಯ ಭಾಷಾ ಪ್ರೇಮಿ ಡಾ.ಡೇವಿಡ್ ಫ್ರಾಂಕ್ ಫರ್ನಾಂಡಿಸ್ ಅವರು ವಿದೇಶದಲ್ಲಿದ್ದುಕೊಂಡು ಉದ್ಯಮದ ಮೂಲಕ ಸಾಮಾಜಿಕ-ಸಾಂಸ್ಕ್ರತಿಕ ರಂಗಕ್ಕೆ ಪ್ರೋತ್ಸಾಹ ನೀಡಿದ ಒರ್ವ ಮಹಾನ್ ಸಾಧಕ.

  ವಿದೇಶದಲ್ಲಿ ಉದ್ಯೋಗದ ಮೂಲಕ ಸ್ವದೇಶ ದಕ್ಷಿಣ ಭಾರತೀಯ ಚಿತ್ರಗಳ ಹಾಗೂ ಮಂಗಳೂರು ಮೂಲದ ಉದ್ಯಮಿ ಡಾ. ಡೇವಿಡ್ ಫ್ರಾಂಕ್ ಫರ್ನಾಂಡಿಸ್ ಅವರು ಅಪ್ಪಟ ಕ್ರೈಸ್ತ ಕುಟುಂಬದಲ್ಲಿ ಜನಿಸಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಮೆರೆದ ಭಾರತೀಯ ಸಂಸ್ಕೃತಿಯ ವಾರೀಸುದಾರರಾಗಿದ್ದಾರೆ.ಕೇವಲ 10 ನೇ ಕ್ಲಾಸ್ ಕಲಿತ ಅವರು ಬೈಬಲ್, ಭಗವದ್ಗೀತೆ,ಕುರಾನ್ ನಂತಹ ವಿವಿಧ ಧಾರ್ಮಿಕ ಗ್ರಂಥಗಳ ಬಗ್ಗೆ ಅಪಾರ ಜ್ಞಾನವನ್ನು ಗಳಿಸಿ ಅದನ್ನು ಜೀವನದಲ್ಲಿ ಪರಿಪಾಲಿಸಿಕೊಂಡು ಆದರ್ಶಪ್ರಾಯರಾಗಿದ್ದಾರೆ.ಸಂಸ್ಕೃತ ಶ್ಲೋಕಗಳು ಮತ್ತು ಉಪನಿಷತ್ತುಗಳನ್ನು ಅರ್ಜಿಸಿ ಉಪದೇಶಿಸಬಲ್ಲ,ಕನ್ನಡ, ತುಳು, ಕೊಂಕಣಿ ಇಂಗ್ಲೀಷ್ ನಿರರ್ಗಳವಾಗಿ ಮಾತನಾಡಬಲ್ಲ ಧೀಮಂತ ವ್ಯಕ್ತಿ.ಭಾಷಾಭಿಮಾನದ ತುಡಿತದಿಂದ ಕನ್ನಡ-ತುಳು-ಕೊಂಕಣಿ ಹೀಗೆ ಮೂರು ಭಾಷೆಯ ಚಿತ್ರಗಳನ್ನು ನಿರ್ಮಿಸುವ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಅಭಿವೃದ್ಧಿಗೆ ಕಾರಣೀಭೂತರಾದವರು.

  ಉಡುಪಿ ಸಮೀಪದ ತೋಟಮ್ ಎಂಬಲ್ಲಿ1951 ರಲ್ಲಿ ಜನಿಸಿದ ಇವರು ಯುಎಇಯಲ್ಲಿ 1989ರಲ್ಲಿ ಅವರು ಮೊಸಕೋ ಶಿಪ್ಪಿಂಗ್ ಮತ್ತು ಫಾರ್ವರ್ಡ್ ಇನ್ ಕಂಪನಿಯನ್ನು ಎಲ್ಲಿ ಎಲ್ ಸಿ 8 ಸಿಬ್ಬಂದಿಗಳೊಂದಿಗೆ ಸ್ಥಾಪಿಸಿದರು ನಂತರ 2001ರಲ್ಲಿ “ಫೇರ್ನ್ ಶಿಫ್ಟಿಂಗ್ “ಕಂಪನಿ ಸ್ಥಾಪನೆ ಮಾಡಿದರು. ಅದು 100 ಕೂ ಹೆಚ್ಚು ಸಿಬಂದಿಗಳ ಕೆಲಸ ಮಾಡುವ ಯೂನಿಟ್ ಆಗಿ ಅಭಿವೃದ್ಧಿಗೊಂಡವು ಇವರ ಪ್ರಾಮಾಣಿಕತೆ ಮತ್ತು ಉತ್ತಮ ಸೇವೆಯ ಸಫಲತೆಯಿಂದ ಅವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಕೈಗೂಡಿ ಬಂದವು. ಗ್ರಾಹಕರ ಜಾಗತಿಕ ಲಾಜಿಸ್ಟಿಕ್ಸ್ ಅವಶ್ಯಕತೆಗಳಿಗೆ ಸಾಬೀತಾದ ಮೌಲ್ಯದೊಂದಿಗೆ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಸೇವೆಗಳ ಸಂಪೂರ್ಣ ವರ್ಣಪಟಲದಲ್ಲಿ ವೈವಿಧ್ಯಮಯ ಗ್ರಾಹಕರ ನೆಲೆಯನ್ನು ಉಳಿಸಿಕೊಳ್ಳುವಲ್ಲಿ ಇವರ ಕಂಪನಿಯು ಯಶಸ್ವಿಯಾಗಿದೆ.

  ತನ್ನಸ್ವದೇಶದ ಭಾಷಾಭಿಮಾನದಿಂದ ಚಿತ್ರೋದ್ಯಮಕ್ಕೆ ಪ್ರವೇಶ ಪಡೆದ ಅವರ ಮೊದಲ ಚಲನಚಿತ್ರ 2009ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. ಪಾರ್ನ್ ಮೂವಿ ಇಂಟರ್ನೇಷನಲ್ ನ ಕನ್ನಡ ಎರಡನೇ ಚಿತ್ರ 2009 “ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ” ಇದನ್ನು ರಿಚರ್ಡ್ ಕ್ಯಾಸ್ಟಲಿನೋ ನಿರ್ದೇಶಿಸಿರುತಾರೆ. ಅದು 2011 ರಲ್ಲಿ ಬಿಡುಗಡೆಗೊಂಡವು. ವಾಲ್ಟರ್ ಸ್ಟೀಫನ್ ಮೆಂಡೆಸ್ ಅವರನ್ನು ನಿರ್ಮಾಪಕರಾಗಿ ಮತ್ತು ಫ್ರಾಂಕ್ ಫರ್ನಾಂಡಿಸ್, ರಾಜೇಶ್ ಮೆಂಡೆಸ್, ಜಗದೀಶ್ ಶೆಟ್ಟಿ ದೇವಿಡಯಾಲ್, ಅಲ್ವಿನ್ ಡಿಸೋಜ ಮತ್ತು ವಿಲಿಯಂ ರೆಬೆಲ್ಲೊ ಅವರು ಸಹ-ನಿರ್ಮಿಸಿದ ‘ಕಾರ್ಕಳದ ಪವಾಡ ಪುರುಷ ಸಾಂತಾ ಲಾರೆನ್ಸ್’ ಎಂಬ ಧಾರ್ಮಿಕ ಕನ್ನಡ ಚಲನಚಿತ್ರ 2012 ರಲ್ಲಿ ನಿರ್ಮಿಸಿದರು.

  2016 ರಲ್ಲಿ ಫ್ರಾಂಕ್ ಫರ್ನ್ಸ್ ಮೂವಿ ಇಂಟರ್‌ನ್ಯಾಷನಲ್‌ನ ಮೊದಲ ತುಳು ಚಲನಚಿತ್ರ ‘ಜೈ ತುಳುನಾಡ್’ ಅನ್ನು ನಿರ್ಮಿಸಿದರು. ಮೊದಲ ಬಾರಿಗೆ ಫ್ರಾಂಕ್ ಫರ್ನಾಂಡಿಸ್ ಅವರು ‘ಜೈ ತುಳುನಾಡ್’ ಚಿತ್ರದಲ್ಲಿ ನಟಿಸಿದ್ದಾರೆ.ಮೇ 2016ರಲ್ಲಿ ಫ್ರಾಂಕ್ ಫರ್ನ್ಸ್ ಮೂವಿ ಇಂಟರ್‌ನ್ಯಾಷನಲ್‌ನ ಬ್ಲಾಕ್‌ಬಸ್ಟರ್ ‘ಎಕ್ ಅಸ್ಲ್ಯಾರ್ ಏಕ್ ನಾ’ ಕೊಂಕಣಿ ಚಲನಚಿತ್ರವನ್ನು ನಿರ್ಮಿಸಿದರು, ಇದು ವಿದೇಶದ ದುಬೈಯಲ್ಲಿ ಬಿಡುಗಡೆಯಾದ ಮೊದಲ ಕೊಂಕಣಿ ಚಲನಚಿತ್ರವಾಗಿದೆ. ಈ ಹೆಚ್ಚಿನ ಬಜೆಟ್ ಕೊಂಕಣಿ ಚಲನಚಿತ್ರವು ದುಬೈನಲ್ಲಿ ಇತಿಹಾಸವನ್ನು ಸೃಷ್ಟಿಸಿತು.

  ಫ್ರಾಂಕ್ ಯುಎಇಯ ಹಲವಾರು ಸಾಮಾಜಿಕ ಸಂಸ್ಥೆಗಳಲ್ಲಿ ಪ್ರಾಯೋಜಕರಾಗಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಮತ್ತು ಅವರ ಕೊಡುಗೆಗಳೊಂದಿಗೆ ದತ್ತಿ ಕಾರ್ಯಕ್ರಮಗಳನ್ನು ಉತ್ತೇಜಿಸಿದ್ದರು. ಪಿಲಿಕುಳ ದ ನಿಸರ್ಗ ಧಾಮದಲ್ಲಿ 2017 ರಲ್ಲಿ ನಡೆದ ‘ತುಳುನಾಡೋಚ್ಚಾಯ 2017’ ಬೃಹತ್ ತುಳು ಆಯನೋ ಕಾರ್ಯಕ್ರಮದ ಚುನಾಯಿತ ಅಧ್ಯಕ್ಷರಾಗಿ ಆಯ್ಕೆಗೊಂಡ ಅವರ ನಾಯಕತ್ವದಲ್ಲಿ 2 ದಿನಗಳ ಯಶಸ್ವಿ ಕಾರ್ಯಕ್ರಮವು 2 ಲಕ್ಷಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಿದೆ. ಅಲ್ಲಿನ ಸುವ್ಯವಸ್ಥೆಯ ಖರ್ಚು-ವೆಚ್ಚಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  ಫ್ರಾಂಕ್ ಫರ್ನಾಂಡಿಸ್ ಅವರ ವ್ಯವಹಾರ ವೃತ್ತಿಜೀವನದ ಹಾದಿಯಲ್ಲಿ ಸಾಕಷ್ಟು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ.2015ರಕೆನಡಾದ ಸಂಸತ್ ಸದಸ್ಯರಿಂದ ವರ್ಸೇಲ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಕೆನಡಿಯನ್ ಕೆನರಾ ವಿಷನ್ ಅವರಿಂದ ‘ಯೆಮೆನ್ ಸೇವಾ ಪ್ರಶಸ್ತಿ’ .ಕೌಲಾಲಂಪುರ್ ಮಲೇಷ್ಯಾದಲ್ಲಿ ಇಂಟರ್ನ್ಯಾಷನಲ್ ಓಪನ್ ಯೂನಿವರ್ಸಿಟಿ ಆಫ್ ಹ್ಯುಮಾನಿಟಿ, ಹೆಲ್ತ್ ಸೈನ್ಸ್ & ಪೀಸ್ (ಯುಎಸ್ಎ) ಯಿಂದ ‘ಜಾಗತಿಕ ಶಾಂತಿ ಸ್ಥಾಪನೆ’ಯ ಪ್ರಮಾಣಪತ್ರ , 2017ರಲ್ಲಿ ಬೆಂಗಳೂರಿನ ಸೃಷ್ಠಿ ಕಲಾ ಭೂಮಿಯಿಂದ “ತುಳುನಾಡ ಬೊಳ್ಳಿ ಪ್ರಶಸ್ತಿ ” ಹಾಗೂ 2018ರಲ್ಲಿ ಮಂಗಳೂರು ಪುರಭವನದಲ್ಲಿ ಜರಗಿದ ತುಳುನಾಡ ರಕ್ಷಣಾ ವೇದಿಕೆಯ ದಶಮಾನೋತ್ಸವ ಸಮಾರಂಭ ತೌಳವ ಉಚ್ಚ ವ ( ವಿಶ್ವ ತುಳುವರ ಸಮ್ಮೇಳನ ದ ಪ್ರತಿಷ್ಟಿತ ಅಂತಾರಾಷ್ಟ್ರೀಯ “ತೌಳವ ಚಕ್ರವರ್ತಿ ಪ್ರಶಸ್ತಿ” ಲಭಿಸಿದೆ.2015ರಲ್ಲಿ ಉಡುಪಿ ಅಷ್ಟಮಠದ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರಿಂದ ‘ಪರ್ಯಾಯ ಪ್ರಶಸ್ತಿ’. 2015 ರಲ್ಲಿ ಮೂಡಬಿದ್ರೆಯ ಸಾವಿರ ಕಂಬ ಬಸದಿಯ ಜೈನ ಸ್ವಾಮೀಜಿಯವರಿಂದ ‘ಚಾರುಕೀರ್ತಿ ಭಟ್ಟಾರಕ’ ಪ್ರಶಸ್ತಿ,2016 ರಲ್ಲಿ ಯುಎಇಯ ಕರ್ನಾಟಕದ ಎಲ್ಲಾ ಪ್ರಮುಖ ಸಂಘಗಳು ತಮ್ಮ ವಾರ್ಷಿಕ ಆಚರಣೆಗಳಲ್ಲಿ ನಿರಂತರವಾಗಿ ಸನ್ಮಾನಿಸಿ ಪ್ರಶಸ್ತಿ ನೀಡಿವೆ.ಉಡುಪಿಯ ಕಿದಿಯೂರ್‌ನ ಭಾಗವತ್ ಗೀತಾ ಮಂಗಳ ಮಹೋತ್ಸವ ಸಮಾರಂಭದಲ್ಲಿ ‘ಗೀತಾ ಯೋಗಾನುಗ್ರಹ ಪ್ರಶಸ್ತಿ’ 2017 ರಲ್ಲಿ ಅನ್ನು ಕಲಾ ಜಗತ್ತು (ರಿ) ಮುಂಬೈ ಅವರಿಂದ ‘ಮೆಚ್ಚುಗೆ ಪ್ರಶಸ್ತಿ’ 2017 ರಲ್ಲಿ ಮೊಸಾಕೊ ಶಿಪ್ಪಿಂಗ್ ದುಬೈ ಸರ್ಕಾರಗಳ “ಇ-ಸರ್ವಿಸ್ ಎಕ್ಸಲೆನ್ಸ್ ಪ್ರಶಸ್ತಿ” 2017 ರಲ್ಲಿ ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್ (ಯುಎನ್‌ಒ) ಫ್ರಾಂಕ್ ಅವರಿಗೆ ಮಲೇಷ್ಯಾದಲ್ಲಿ “ಗೌರವ ಡಾಕ್ಟರೇಟ್” ನೀಡಿತು. 2017 ರಲ್ಲಿ ಮಲೇಷ್ಯಾದಲ್ಲಿ ಯುಎಇಗಾಗಿ ಯುಎನ್‌ಒ ಕಾನ್ಸುಲ್ ಜನರಲ್ ಆಗಿ ನೇಮಕ.

  2018ರಲ್ಲಿ ಉದ್ಯಮಶೀಲತೆ ಮತ್ತು ಮಾನವೀಯ ಸೇವೆಗಾಗಿ 38 ನೇ ಪೀಪಲ್ಸ್ ಚಾಯ್ಸ್ ಎಕ್ಸಲೆನ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ‘ಜಾಗತಿಕ ಶಾಂತಿ ಪ್ರಶಸ್ತಿ’ .2018 ರಲ್ಲಿ ಫಿಲಿಪೈನ್ಸ್‌ನಲ್ಲಿನ ಅಂತರರಾಷ್ಟ್ರೀಯ ರಾಜತಾಂತ್ರಿಕ ಸಂಬಂಧಗಳು, ಮಾನವ ಹಕ್ಕುಗಳು ಮತ್ತು ಶಾಂತಿಯ ಆಯೋಗವು ‘ಯುಎಇಯ ವೈಸ್ ಚೀಫ್ ಆಫ್ ಮಿಷನ್ಸ್ & ಬಿಸಿನೆಸ್ ಅಂಬಾಸಿಡರ್’ ಆಗಿ ನೇಮಕ.2018 ರಲ್ಲಿ ಇಂಟರ್ನ್ಯಾಷನಲ್ ಕಂ ನಿಂದ ಡಿಪ್ಲೊಮ್ಯಾಟಿಕ್ ಇಮ್ಯುನಿಟಿಯೊಂದಿಗೆ ‘ಇಂಟರ್ನ್ಯಾಷನಲ್ ಡ್ರೈವರ್ ಲೈಸೆನ್ಸ್’ ಪ್ರಶಸ್ತಿ, (ರಾಜತಾಂತ್ರಿಕ ಸಂಬಂಧಗಳು, ಫಿಲಿಪೈನ್ಸ್‌ನಲ್ಲಿ ಮಾನವ ಸಂಪನ್ಮೂಲ ಮತ್ತು ಶಾಂತಿ UNO),2018 ರಲ್ಲಿ ಯು.ಎಸ್. ಫೆಡರಲ್ ಪೊಲೀಸ್ ಚಾಪ್ಲೆನ್ಸಿ, ಯು.ಎಸ್.ಎ.ಯಿಂದ “ಗೌರವ ಬ್ರಿಗೇಡಿಯರ್ ಜನರಲ್” ಪ್ರಶಸ್ತಿ,2018 ರಲ್ಲಿ ಯು.ಎಸ್. ಫೆಡರಲ್ ಪೊಲೀಸ್ ಚಾಪ್ಲೆನ್ಸಿ, ಯು.ಎಸ್.ಎ.12 ಸೆಪ್ಟೆಂಬರ್, 2018 ರಂದು ಅವರು ಯು.ಎಸ್. ಫೆಡರಲ್ ಪೊಲೀಸ್ ಚಾಪ್ಲೈನ್, ಯು.ಎಸ್.ಎ.ಗೆ “ಗೌರವ ಲೆಫ್ಟಿನೆಂಟ್ ಜನರಲ್” ಆಗಿ ಭಡ್ತಿ, 2018 ರಲ್ಲಿ ಅವರನ್ನು ಯುಎನ್‌ಒ ಮಧ್ಯಪ್ರಾಚ್ಯದ ಗೌರವ ಕಮಾಂಡರ್ ಆಗಿ ನೇಮಿಸಿತು,2018 ರಲ್ಲಿ ಅವರನ್ನು ಯುಎನ್‌ಇ ಮತ್ತು ಭಾರತಕ್ಕೆ ಕುಲಪತಿಯನ್ನಾಗಿ ನೇಮಿಸಲಾಗಿದೆ. ಯುಎಇಯ ವೈಸ್ ಚೀಫ್ ಆಫ್ ಮಿಷನ್ಸ್ & ಬಿಸಿನೆಸ್ ಅಂಬಾಸಿಡರ್ ಸ್ಥಾನದೊಂದಿಗೆ ‘ಡಿಪ್ಲೊಮ್ಯಾಟಿಕ್ ಐಡೆಂಟಿಟಿ ಕಾರ್ಡ್’ ನೀಡಿದೆ.ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಹಾಗೂ 2020ರ ಪ್ರತಿಷ್ಠಿತ ದಿ ಟೈಮ್ಸ್ ಆಫ್ ಇಂಡಿಯಾ ದ “ಇಟಿ ಬಿಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.

  ಇಷ್ಟೆಲ್ಲ ತನ್ನ ಜೀವಮಾನದ ಸಾಧನೆಯನ್ನು ಆದರ್ಶವಾಗಿರಿಸಿದ ಫ್ರಾಂಕ್ ಅವರ ಮುಖ್ಯ ಧ್ಯೇಯವೆಂದರೆ ” ಮಾನವೀಯ ನೆಲೆಯಲ್ಲಿ ಮಾನವಕುಲಕ್ಕೆ ಸೇವೆ ಮಾಡುವುದು ಮತ್ತು ವ್ಯವಸ್ಥೆಯೊಂದಿಗೆ ಜಾಗತಿಕವಾಗಿ ಶಾಂತಿಯನ್ನು ನಿರ್ಮಿಸುವುದು’”. ಇದೇ ಕನಸಿನ ದೃಷ್ಟಿಕೋನದಿಂದ ಜಗತ್ತನ್ನು ಸುತ್ತಲು ತನ್ನ ಎಲ್ಲಾ ಪ್ರಯತ್ನಗಳಿಂದ ಶಾಂತಿ ಕಾರ್ಯವನ್ನು ಮುಂದುವರಿಸಲು ಇವರು ಬದ್ಧರಾಗಿದ್ದಾರೆ.
  ತನ್ನ ಸುಮಧುರ ಕುಟುಂಬದ ಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಅವರು ಧರ್ಮಪತ್ನಿ ಅಲೀಸ್ ಫರ್ನಾಂಡೀಸ್ ಪುತ್ರರಾದ ಒಲಿವರ್ ಫರ್ನಾಂಡಿಸ್, ಲ್ಯಾರಿ ಫರ್ನಾಂಡಿಸ್, ನೆಲ್ಸನ್ ಫರ್ನಾಂಡಿಸ್ ಹೆರಿಕ್ ಫರ್ನಾಂಡಿಸ್ ಮತ್ತು ಮೊಮ್ಮಕಳ ಜತೆ ಸಂತೃಪ್ತ ಸಂಸಾರ ಹೊಂದಿದ್ದಾರೆ.
  ವಿದೇಶದ ಉದ್ಯಮ ರಂಗದಲ್ಲಿದ್ದುಕೊಂಡು ಸ್ವದೇಶದ ಭಾಷೆ,ಸಂಸ್ಕೃತಿ ಸಮೂಹಕ್ಕೆ ಕೊಡುಗೆ ನೀಡುವ ಈ ದಾನವಂತ, ಹ್ರದಯವಂತ ಸಾಧಕನ ಬದುಕು ಸರ್ವರಿಗೂ ಆದರ್ಶ. ಇವರು ನೂರಾರು ವರ್ಷಗಳ ಕಾಲ ಸುಖ ಶಾಂತಿ ನೆಮ್ಮದಿ ಮತ್ತು ಸಂತೋಷ ಜೀವನ ಸಿಗಲಿ ತುಳುನಾಡ ಸೂರ್ಯ ಪತ್ರಿಕೆಯ ಶುಭ ಹಾರೈಕೆಗಳು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss