Monday, October 7, 2024
spot_img
More

    Latest Posts

    ವಿಟ್ಲ: ಮಹಿಳೆಗೆ ಚಾಕು ತೋರಿಸಿ ಚಿನ್ನ ಕಳ್ಳತನಕ್ಕೆ ಯತ್ನಿಸಿ ಪರಾರಿ

    ವಿಟ್ಲ: ಕುಳ ಗ್ರಾಮದ ನೀರಪಳಿಕೆಯಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ಯತ್ನಿಸಿದ ಘಟನೆ ನಡೆದಿದೆ.

    ನೀರಪಳಿಕೆ ಮಹಮ್ಮದ್ ಕುಂಞ ಅವರ ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ಇರುವ ಸಂದರ್ಭ ಮನೆಯ ಮುಖ್ಯ ದ್ವಾರದ ಮೂಲಕ ವ್ಯಕ್ತಿಯೋರ್ವ ಮುಖಕ್ಕೆ ಮಾಸ್ಕ್ ಹಾಕಿ ಒಳ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿ ಮಹಿಳೆಗೆ ಚಾಕು ತೋರಿಸಿ, ಕಿವಿಯಲ್ಲಿರುವ ಚಿನ್ನ ಕೊಡುವಂತೆ ಕೇಳಿದ್ದಾನೆ.ಇನ್ನು ಬೆದರಿದ ಮಹಿಳೆ ಹಿಂದಿನ ಬಾಗಿಲು ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಆತ ಹಿಂಬದಿಯ ತೋಟದ ದಾರಿಯಾಗಿ ಪರಾರಿಯಾಗಿದ್ದಾನೆ.112ಕ್ಕೆ ಕರೆಮಾಡಿ ಮಾಹಿತಿ ನೀಡಿದಾಗ ತುರ್ತು ಕಾರ್ಯಪಡೆಯ ಪೊಲೀಸ್‌ ತಂಡ ಸ್ಥಳಕ್ಕೆ ಆಗಮಿಸಿದ್ದು, ಬಳಿಕ ವಿಟ್ಲ ಠಾಣೆಗೆ ಮಾಹಿತಿ ನೀಡಲಾಯಿತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss