Tuesday, April 30, 2024
spot_img
More

    Latest Posts

    ಭಾರತದ ಮುಂದಿನ ಮಿಷನ್‌ ಮಂಗಳ-2ಕ್ಕೆ ಆರ್ಬಿಟರ್: ಇಸ್ರೋ

    ನವದೆಹಲಿ: ಮಂಗಳನ ಅಂಗಳದ ಅಧ್ಯಯನಕ್ಕಾಗಿ ನಾಸಾದ ಪರ್ಸೀವರೆನ್ಸ್ ರೋವರ್ ಯಶಸ್ವಿ ಲ್ಯಾಂಡಿಂಗ್ ಬಳಿಕ ಇಸ್ರೋ ತನ್ನ ಮುಂದಿನ ಮಿಷನ್ ಮಂಗಳದ ಬಗ್ಗೆ ಮಾತನಾಡಿದೆ. 

    ನಾಸಾ ರೋವರ್ ನ್ನು ಕಳಿಸಿದ್ದು, ಇಸ್ರೋ ಎರಡನೇ ಬಾರಿಗೆ ಕೆಂಪು ಗ್ರಹಕ್ಕೆ ಆರ್ಬಿಟರ್ ಕಳಿಸಲಿದೆ. ಪರ್ಸೀವರೆನ್ಸ್ ನೌಕೆ ನಾಸಾ ಕಳಿಸಿರುವ ಅತ್ಯಾಧುನಿಕ ಹಾಗೂ ಅತಿ ದೊಡ್ಡ ನೌಕೆಯಾಗಿದ್ದು, ಜೆಝೀರೋ’ ಕುಳಿ ಮೇಲೆ ನಾಸಾ ರೋವರ್ ಲ್ಯಾಂಡ್  ಇಳಿದಿದೆ. 

    ಮಾರ್ಸ್ ಆರ್ಬಿಟರ್ ಮಿಷನ್ ನ ಯಶಸ್ಸು ಕಂಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾರ್ಸ್ ಆರ್ಬಿಟರ್ ಮಿಷನ್-2 ರ ಘೋಷಣೆಯ ಅವಕಾಶಗಳ ಬಗ್ಗೆ ಮಾತನಾಡಿದೆ. 

    ಮಿಷನ್‌ ಮಂಗಳ-2 ಇಸ್ರೋ ಮುಂದಿನ ಯೋಜನೆಯ ಘೋಷಣಾ ಪಟ್ಟಿಯಲ್ಲಿದೆ. ಆದರೆ ಅದಕ್ಕೂ ಮುನ್ನ ಆದ್ಯತೆಯ ಯೋಜನೆಗಳಿವೆ ಮಾರ್ಸ್ ಆರ್ಬಿಟರ್ ಮಿಷನ್ ಯಶಸ್ಸಿನ ನಂತರ ಇಸ್ರೋ ಶುಕ್ರ ಗ್ರಹದ ಅನ್ವೇಷಣೆಗೂ ಮುಂದಾಗಿದೆ. 

    ಆದರೆ ಇಸ್ರೋ ಸಂಸ್ಥೆ ಅತಿ ಹೆಚ್ಚು ಆದ್ಯತೆಯನ್ನು ಚಂದ್ರಯಾನ-3 ಹಾಗೂ ಗಗನ್ಯಾನ್ ಗೆ ನೀಡಿದೆ. ಈ ಎರಡೂ ಯೋಜನೆಗಳು 2020 ರಲ್ಲೇ ಜಾರಿಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿವೆ. 2022 ರ ವೇಳೆಗೆ ಗಗನ್ ಯಾನ್ ಯೋಜನೆಯಡಿ ಇಸ್ರೋ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವ ಯೋಜನೆ ಹೊಂದಿದೆ. 

    ಇದೇ ವೇಳೆ ಭಾರತ ಹಾಗೂ ಫ್ರಾನ್ಸ್ ಜಂಟಿ ಬಾಹ್ಯಾಕಾಶ ಸಹಕಾರ ಮಂಗಳನ ಅನ್ವೇಷಣೆಗೂ ಬಳಕೆಯಾಗುವ ನಿರೀಕ್ಷೆ ಇದೆ. 

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss