Sunday, April 28, 2024
spot_img
More

    Latest Posts

    ಪುತ್ತೂರು :ತಾಯಿಗೆ ಕಡಿದ ನಾಗರ ಹಾವಿನ ವಿಷ ಬಾಯಿಯಲ್ಲಿ ಕಚ್ಚಿ ಹೊರ ತೆಗೆದ ಮಗಳು.!

    ಪುತ್ತೂರು : ಅಮ್ಮ ಎಂದರೆ ಕಣ್ಣಿಗೆ ಕಾಣುವ ದೇವತೆ. ಜೀವನದುದ್ದಕ್ಕೂ ಜೊತೆಯಾಗಿ ನಿಲ್ಲುವ ತಾಯಿ, ಸದಾ ಮಕ್ಕಳ ಯೋಗ ಕ್ಷೇಮವನ್ನೇ ಬಯಸುತ್ತಾಳೆ. ಹುಟ್ಟುವ ಮೊದಲೆ ನಮ್ಮನ್ನು ಪ್ರೀತಿಸುವ ಯಾವುದಾದರೂ ಜೀವ ಇದ್ದರೆ ಅದು ಅಮ್ಮ ಮಾತ್ರ ಇದೀಗ ಅಮ್ಮನ ಜೀವಕ್ಕಾಗಿ ಮಗಳೊಬ್ಬಳು ಸಾಹಸ ಮೆರೆದ ಘಟನೆಯೊಂದು ಕರಾವಳಿ ನಡೆದಿದ್ದು ಬೆಳಕಿಗೆ ಬಂದಿದೆ.

    ಪುತ್ತೂರು ತಾಲೂಕಿನ ಮಾಡಾವು ಎಂಬ ಗ್ರಾಮದಲ್ಲಿ ಶ್ರಮ್ಯ ರೈ ಎಂಬ ಯುವತಿಯೊಬ್ಬಳು ಹಾವು ಕಡಿದ ತನ್ನ ಅಮ್ಮನಿಗೆ ಧೈರ್ಯ ತುಂಬಿ ಬಾಯಿಂದ ಕಚ್ಚಿ ವಿಷ ತೆಗೆದು ಅಮ್ಮನ ಜೀವವನ್ನು ಕಾಪಾಡಿದ್ದಾಳೆ. ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕೆಯ್ಯೂರು ಗ್ರಾಮ ಪಂಚಾಯತ್‌ ಸದಸ್ಯೆ ಮಮತಾ ರೈ ಎಂಬವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ವೇಲೆ ಆಕಸ್ಮಿಕವಾಗಿ ನಾಗರ ಹಾವೊಂದು ಕಡಿದಿದೆ. ಅಮ್ಮನ ಅಳುತ್ತಿದ್ದ ಶಬ್ಧ ಕೇಳಿ ಓಡೋಡಿ ಹೋಗಿ ಮಗಳು ಶ್ರಮ್ಯ ಧೈರ್ಯ ತುಂಬಿ ಕೊಂಚವೂ ಭಯಪಡದೆ ಹಾವು ಕಚ್ಚಿದ ದೇಹದ ಭಾಗದಿಂದ ಬಾಯಿಯಿಂದ ಕಚ್ಚಿ ವಿಷವನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿ ತಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಬಳಿಕ ಸ್ಥಳೀಯ ಆಸ್ಪತ್ರೆ ತಾಯಿಯನ್ನು ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಯಿತು. ಇದೀಗ ಕೊಂಚ ಮಮತಾ ರೈ ಚೇತರಿಸಿಕೊಂಡಿದ್ದಾರೆ. ಈಕೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರೋವರ್ಸ್‌ ಆಂಡ್‌ ರೇಂಜರ್ ವಿದ್ಯಾರ್ಥಿನಿಯೂ ಆಗಿದ್ದರು ಅಲ್ಲಿ ಕಲಿತ ಪ್ರಥಮ ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ತಾಯಿಯ ಪ್ರಾಣವನ್ನು ರಕ್ಷಿಸಿದ್ದಾರೆ.

    ಅಷ್ಟೇ ಅಲ್ಲದೇ ಮಗಳ ಧೈರ್ಯವನ್ನು ಸ್ಥಳೀಯರು, ಸೇರಿದಂತೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಆರೋಗ್ಯ ವಿಚಾರಿಸಿದಲ್ಲದೇ ಮಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಶ್ರಮ್ಯ ರೈ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss