Tuesday, April 30, 2024
spot_img
More

    Latest Posts

    ಮಂಗಳೂರು: ಶತಾಯುಷಿ, ಸೀನಿಯರ್‌ ಮೋಸ್ಟ್‌ ಡ್ರೈವಿಂಗ್‌ ಲೈಸನ್ಸ್‌ ಹೊಂದಿದ್ದ ಮೈಕಲ್ ಇನ್ನಿಲ್ಲ

    ಮಂಗಳೂರು: ವಯಸ್ಸು 100 ರಾದರು ಅತ್ಯಂತ ಸಲೀಸಾಗಿ ಡ್ರೈವ್‌ ಮಾಡುತ್ತಿದ್ದ, ಮಂಗಳೂರಿನ ನಿವೃತ್ತ ಸೈನಿಕ, ಶತಾಯುಷಿ ಮೈಕಲ್ ಡಿಸೋಜ (108) ನಿನ್ನೆ ನಿಧನರಾದರು.

    ಮಕ್ಕಳಿಲ್ಲದ ಅವರು ಪರ್ಕಳದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮದ್ರಾಸ್‌ ಸರ್ಕಾರದಲ್ಲಿ ಮೆಕ್ಯಾನಿಕಲ್ ಕಮ್ ಡ್ರೈವರ್ ಆಗಿ ಸೇನೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಲೋಕೋಪಯೋಗಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ಕಾಂಕ್ರೀಟ್ ರಸ್ತೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಮಂಗಳೂರಿನ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು, ಉಭಯ ಜಿಲ್ಲೆಗಳ ಅನೇಕ ಹಳೆಯ ಸೇತುವೆಗಳನ್ನು ನಿರ್ಮಿಸುವಾಗ ತಮ್ಮನ್ನು ತೊಡಗಿಸಿಕೊಂಡಿದ್ದರು. ಶತಾಯುಷಿ ಆಗಿದ್ದರೂ ಅವರ ಕಣ್ಣಿನ ದೃಷ್ಟಿ ಉತ್ತಮವಾಗಿತ್ತು. 2024ರ ತನಕ ಮಂಗಳೂರಿನ ಆರ್‌ಟಿಒ ಅವರಿಗೆ (ನಾಲ್ಕು ಚಕ್ರ) ವಾಹನ ಚಾಲನೆ ಪರವಾನಗಿ ನೀಡಿತ್ತು. ಎರಡು ದಿನಗಳಿಂದ ಅವರು ಅಸ್ವಸ್ಥರಾಗಿದದ್ದು, ನಿನ್ನೆ ತೀರಿಕೊಂಡರು. ಮೃತರ ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಮೈಕಲ್ ಅವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು.
    ಮಂಗಳೂರಿನ ಚರ್ಚ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss