Tuesday, April 30, 2024
spot_img
More

    Latest Posts

    ಬಂಟ್ವಾಳ: ಸಂಬಂಧಿಕನಿಂದಲೇ ಯುವತಿಗೆ ಲೈಂಗಿಕ ಕಿರುಕುಳ

    ಬಂಟ್ವಾಳ: ಯುವತಿಯೋರ್ವರ ಮೇಲೆ ಸಂಬಂಧಿಕನಿಂದಲೇ ಲೈಂಗಿಕ ಕಿರುಕುಳ ಉಂಟಾದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದ್ದು, ಸದ್ಯ ಯುವತಿಯನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

    ಸಂಬಂಧಿಕರ ಮನೆಯಲ್ಲಿ ತಮ್ಮನೊಂದಿಗೆ ಆಶ್ರಯ ಪಡೆದಿದ್ದ ಯುವತಿಯೊಬ್ಬಳಿಗೆ ಅದೇ ಮನೆಯ ಸಂಬಂಧಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಬಳಿಕ ಸಂತ್ರಸ್ತ ಯುವತಿ ಹಾಗೂ ಆಕೆಯ ತಮ್ಮನನ್ನು ಆ. 19ರಂದು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಯುವತಿ ಹಾಗೂ ಆಕೆಯ ತಮ್ಮ ಅಜ್ಜಿಯ ಜತೆ ವಾಸವಿದ್ದು, ಅಜ್ಜಿಯ ನಿಧನದ ಬಳಿಕ ಆರೋಪಿಯಾದ ಸಂಬಂಧಿಯ ಮನೆಯಲ್ಲಿ ವಾಸವಿದ್ದರು. ಆರೋಪಿಯು ಯುವತಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆದರೆ ಆಕೆಯ ಆರೋಗ್ಯದಲ್ಲಿ ಕೊಂಚ ನ್ಯೂನತೆ ಇದ್ದ ಹಿನ್ನೆಲೆಯಲ್ಲಿ ಈ ವಿಚಾರವನ್ನು ತಿಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಬಳಿಕ ಅಧಿಕಾರಿಗಳ ವಿಚಾರಣೆಯಿಂದ ವಿಷಯ ಬೆಳಕಿಗೆ ಬಂದಿದೆ.

    ಈ ಘಟನೆಯ ಕುರಿತು ಮಾಹಿತಿ ತಿಳಿದ ಸರಪಾಡಿ ಗ್ರಾ.ಪಂ.ಕಾವಲು ಸಮಿತಿಯವರು ಹಾಗೂ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯವರು ಇಬ್ಬರ ರಕ್ಷಣಾ ಕಾರ್ಯವನ್ನು ನಿರ್ವಹಿಸಿದ್ದಾರೆ. ಬಂಟ್ವಾಳ ಸಿಡಿಪಿಒ ಗಾಯತ್ರಿ ಬಾಯಿ ಎಚ್. ಅವರ ಮಾರ್ಗದರ್ಶನದಲ್ಲಿ ಮೇಲ್ವಿಚಾರಕಿ ಶೋಭಾ ಅವರು ಸಂತ್ರಸ್ತ ಯುವತಿಯನ್ನು ಮಂಗಳೂರು ಜಪ್ಪಿನಮೊಗರಿನ ಸ್ವಾಧರ ಕೇಂದ್ರ ಹಾಗೂ ಆಕೆಯ ತಮ್ಮ ಬಾಲಕನನ್ನು ಬೋಂದೆಲ್ನ ಬಾಲಕರ ಬಾಲಮಂದಿರಕ್ಕೆ ಸೇರಿಸಲಾಗಿದೆ ಎಂದು ಸಿಡಿಪಿಒ ಕಚೇರಿ ಮಾಹಿತಿ ನೀಡಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss