Sunday, May 19, 2024
spot_img
More

    Latest Posts

    ಒಂದೇ ದಿನದಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಬಿತ್ತು 10 ಕೋಟಿ ರೂ. ಕಾಣಿಕೆ!

    ತಿರುಪತಿ: ಅಗಾಧವಾದ ಭಕ್ತ ಸಮೂಹವನ್ನು ಹೊಂದಿರುವ ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಿ ಈ ಬಾರಿಯೂ ಸಹ ಒಂದೇ ದಿನದಲ್ಲಿ 10 ಕೋಟಿ ರೂ. ಕಾಣಿಕೆ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆದಿದೆ.

    ಹಲವು ಟ್ರಸ್ಟ್​​ಗಳಿಂದ ತಿಮ್ಮಪ್ಪನಿಗೆ ಕಾಣಿಕೆಯಾಗಿ ಒಂದೇ ದಿನದಲ್ಲಿ 10 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಮಾಹಿತಿ ನೀಡಿದೆ. ತಮಿಳುನಾಡಿನ ತಿರುನಲ್ವೇಲಿಯ ಉದ್ಯಮಿ ಹಾಗೂ ತಿಮ್ಮಪ್ಪನ ಭಕ್ತ ಗೋಪಾಲ ಬಾಲಕೃಷ್ಣನ್ ಎಂಬುವವರು ಸುಮಾರು 7 ಕೋಟಿ ರೂ. ಕಾಣಿಕೆ ದೇವರಿಗೆ ಅರ್ಪಿಸಿದ್ದಾರೆ. ಇನ್ನುಳಿದ ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್​ ಸೇರಿದಂತೆ ಇತರೆ ಎರಡು ಟ್ರಸ್ಟ್​ಗಳು ತಲಾ 1 ಕೋಟಿ ರೂ. ಕಾಣಿಕೆ ನೀಡಿವೆ. ಹಾಗಾಗಿ ದಿನದಲ್ಲೇ 10 ಕೋಟಿ ರೂ. ಸಂಗ್ರಹವಾಗಿದೆ. ಈ ಅಷ್ಟೂ ಹಣವನ್ನು ಡಿಡಿ ಮೂಲಕ ಭಕ್ತರು ನೀಡಿದ್ದಾರೆ ಎಂದು ಟಿಟಿಡಿ ಹೇಳಿಕೊಂಡಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss