Friday, April 26, 2024
spot_img
More

    Latest Posts

    SHOCKING NEWS : ಸ್ಮಾರ್ಟ್ಫೋನ್ ಖರೀದಿಸಲು ದೇಹದ ರಕ್ತ ಮಾರಿದ ಪಶ್ಚಿಮಬಂಗಾಳದ 16 ವರ್ಷದ ಬಾಲಕಿ

    ಪಶ್ಚಿಮಬಂಗಾಳ : ಇತ್ತಿಚಿನ ದಿನಗಳಲ್ಲಿ ಮೊಬೈಲ್‌ಗಳಿಗೆ ಮಕ್ಕಳು ಹೆಚ್ಚು ಒಲುವು ತೋರುತ್ತಿದ್ದಾರೆ. ಮೊಬೈಲ್‌ ಒಂದಿದ್ದರೇ ಸಾಕು ಬೇರೆನೂ ಬೇಡ ಅನ್ನೋ ಮಟ್ಟಿಗೆ ಅವುಗಳೊಂದಿಗೆ ಬೆರೆತುಹೋಗಿದ್ದಾರೆ. ಇದೀಗ ಮೊಬೈಲ್ ಖರೀದಿಸಲು ಹಣ ಬೇಕೆಂದು 16 ವರ್ಷದ ಹುಡುಗಿಯೊಬ್ಬಳು ರಕ್ತವನ್ನು ಮಾರಾಟ ಮಾಡಲು ಹೋದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ದಕ್ಷಿಣ ದಿನಾಜ್‍ಪುರದ ತಪನ್ ಪೊಲೀಸ್ ಠಾಣೆಯ ಕರ್ದಾ ನಿವಾಸಿಯಾಗಿರುವ ಆಕೆ 12ನೇ ತರಗತಿ ಓದುತ್ತಿದ್ದಾಳೆ. ಆಕೆ ಆನ್‍ಲೈನ್‍ಲ್ಲಿ 9,000 ರೂ. ಮೌಲ್ಯದ ಸ್ಮಾರ್ಟ್‍ಫೋನ್ ಅನ್ನು ಆರ್ಡರ್ ಮಾಡಿದ್ದಳು. ಆದರೆ ಆಕೆಯ ಬಳಿ ಅಷ್ಟೊಂದು ಹಣವಿರಲಿಲ್ಲ.ಇದರಿಂದಾಗಿ ಆಕೆ ಬಲೂರ್‍ಘಾಟ್‍ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವನ್ನು ಕೊಡಲು ನಿರ್ಧರಿಸಿದ್ದಾಳೆ. ಈ ಹಿನ್ನೆಲೆಯಲ್ಲೇ ಆಕೆ ಆಸ್ಪತ್ರೆಗೆ ತೆರಳಿ ಅಲ್ಲಿ, ರಕ್ತ ನೀಡುತ್ತೇನೆ ಅದರ ಬದಲು ಎಷ್ಟು ಹಣ ನೀಡುತ್ತೀರಿ ಎಂದು ಕೇಳಿದ್ದಾಳೆ. ಇದರಿಂದ ಅಲ್ಲಿನ ಉದ್ಯೋಗಿಗಳು ಅನುಮಾನಗೊಂಡಿದ್ದಾರೆ.

    ಕೂಡಲೇ ಆಸ್ಪತ್ರೆ ಸಿಬ್ಬಂದಿ ಚೈಲ್ಡ್ ಕೇರ್ ಇಲಾಖೆಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೈಲ್ಡ್ ಕೇರ್ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ, ಅಪ್ರಾಪ್ತೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಜವಾದ ಸಂಗತಿ ಬೆಳಕಿಗೆ ಬಂದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss