ಉಡುಪಿ: ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣಾ ನಿರೀಕ್ಷಕ ರಾಗಿ ವರ್ಗಾವಣೆಗೊಂಡಿದ್ದಾರೆ.
ತುಳುನಾಡು ತುಳು ಭಾಷೆಯ ತುಳು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದ ಉಡುಪಿ ನಗರ ಠಾಣಾ ವೃತ್ತ ನಿರೀಕ್ಷಕರ ವರ್ಗಾವಣೆಗೆ ತುಳುನಾಡ ರಕ್ಷಣಾ ವೇದಿಕೆಗೆ ಬೇಸರ ವ್ಯಕ್ತಪಡಿಸಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉಡುಪಿ ನಗರವನ್ನು ಶಾಂತವಾಗಿರಿಸಿ ನಮ್ಮಂತಹ ಅದೆಷ್ಟೋ ಜನರಿಗೆ ಮಾದರಿಯಾಗಿರುವ ಉಡುಪಿ ನಗರ ಠಾಣಾ ವೃತ್ತ ನಿರೀಕ್ಷಕರಾದ ಪ್ರಮೋದ್ ಕಮಾರ್ ರವರ ವರ್ಗಾವಣೆ ಉಡುಪಿ ಜಿಲ್ಲೆಗೆ ಆದ ನಷ್ಟ.
ಅಪರಾಧಿ ಅಪರಾಧವನ್ನು ಮಾಡುವ ಮೊದಲು ಸಾವಿರ ಸಲ ಯೋಚಿಸುವ ವಾತಾವರಣವನ್ನು ಸೃಷ್ಟಿಸಿದ ತಾಕತ್ತು ಪ್ರಮೋದ್ ಕುಮಾರ್ ರವರದ್ದು. ಅವರ ಗದರಿಕೆಯಲ್ಲೂ ಪ್ರೀತಿ ವಾತ್ಸಲ್ಯವಿದ್ದು ಎಂತಹ ಯುವಕರನ್ನೂ ತಿದ್ದುವಂತಹ ಶಕ್ತಿ ಅವರಲ್ಲಿದೆ. ಆದರೆ ಪ್ರಮೋದ್ ಕುಮಾರ್ ಅವರು ಉಡುಪಿ ನಗರದಲ್ಲಿ ಅಕ್ರಮ ಚಟುವಟಿಕೆ ಮಾಡುವವರಿಗೆ, ರೌಡಿಗಳಿಗೆ ಸಿಂಹ ಸ್ವಪ್ನವಾಗಿದ್ದರು. ಲಂಚ ವಿರೋದಿಯಾಗಿದ್ದ ಇವರು ಎಲ್ಲರಿಗೂ ಮೆಚ್ಚುಗೆಯಾಗಿದ್ದರು.
ಇಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಎಲ್ಲಾ ಇಲಾಖೆಗಳಲ್ಲಿ ಉಳಿಸಿಕೊಳ್ಳುವುದು ಅತಿ ಅಗತ್ಯ ಎಂದು ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಆಗ್ರಹಿಸಿದೆ.