Friday, April 26, 2024
spot_img
More

    Latest Posts

    ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆ: ಜುಲೈ.18ರಂದು ಮತದಾನ, 21ರಂದು ಫಲಿತಾಂಶ

    ನವದೆಹಲಿ: ರಾಷ್ಟ್ರಪತಿ ಚುನಾವಣೆ ಸಂಬಂಧ ಇಂದು ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆಗೆ ಘೋಷಣೆ ಮಾಡಲಾಗಿದೆ. ಚುನಾವಣೆಗಾಗಿ ಅಧಿಸೂಚನೆಯನ್ನು 15-06-202ರಿಂದ ಹೊರಡಿಸಲಾಗುತ್ತಿದೆ.

    ಜುಲೈ 18, 2022ರಂದು ಮತದಾನ ನಡೆದು, ಜುಲೈ 21ರಂದು ಮತಏಣಿಕೆ ನಡೆಯಲಿದೆ.

    ಇಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.

    ದೇಶದಲ್ಲಿ ಒಟ್ಟು 776 ಎಂ.ಪಿ ಗಳಿದ್ದಾರೆ, 4,033 ಎಂ ಎಲ್ ಎ ಗಳಿದ್ದಾರೆ. ಒಟ್ಟು 4,809 ಮಂದಿ ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಲಿದ್ದಾರೆ. ದೆಹಲಿಯ ಚುನಾವಣಾ ಆಯೋಗದಲ್ಲಿ ಮಾತ್ರವೇ ರಾಷ್ಟ್ರಪತಿ ಚುನಾವಣೆಗಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸೋದಕ್ಕೆ ಅವಕಾಶ ನೀಡಲಾಗಿದೆ ಎಂದರು.

    ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷಗಳಿಂದ ಸದಸ್ಯರಿಗೆ ವಿಪ್ ಜಾರಿಗೊಳಿಸುವಂತಿಲ್ಲ. ಅಲ್ಲದೇ ಯಾವುದೇ ಸದಸ್ಯರನ್ನು ಮತದಾನಕ್ಕೆ ಆಮಿಷ ಒಡ್ಡುವಂತಿಲ್ಲ. ಯಾವುದೇ ಎಂಪಿ, ಎಂಎಲ್‌ಎಗಳ ಮೇಲೆ ಪ್ರಭಾವ ಬೀರಿ ಮತದಾನಕ್ಕೆ ಒತ್ತಾಯಿಸುವಂತಿಲ್ಲ. ಈ ಮತದಾನ ಗೌಪ್ಯವಾಗಿರಲಿದೆ ಎಂದರು.

    ಕೋವಿಡ್ ನಿಯಂತ್ರಣ ಕ್ರಮಗಳನ್ನು ಮತದಾನದ ವೇಳೆ ಪಾಲಿಸಬೇಕು. ಅಲ್ಲದೇ ಮತ ಏಣಿಕೆಯ ಸಂದರ್ಭದಲ್ಲಿಯೂ ಪಾಲಿಸಬೇಕು. ಮತದಾನದ ವೇಳೆಯಲ್ಲಿ ಎಕೋ ಫ್ರೆಂಡ್ ಲಿ ಹಾಗೂ ಬೈಯಲಾಜಿಕಲಿ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ ಎಂದರು.

    ಹೀಗಿದೆ ರಾಷ್ಟ್ರಪತಿ ಚುನಾವಣೆಯ ಪ್ರಮುಖ ದಿನಾಂಕಗಳು

    • ಚುನಾವಣಾ ಅಧಿಸೂಚನೆ 15-06-2022ರಂದು ಹೊರಡಿಸಲಾಗುತ್ತದೆ
    • ನಾಮಪತ್ರ ಸಲ್ಲಿಸಲು 29-06-2022 ಕೊನೆಯ ದಿನಾಂಕವಾಗಿದೆ
    • ದಿನಾಂಕ 30-06-2022ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ
    • ದಿನಾಂಕ 02-07-2022 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನ
    • ದಿನಾಂಕ 18-07-2022ರಂದು ಮತದಾನ ನಡೆಯಲಿದೆ.
    • ದಿನಾಂಕ 21-07-2022ರಂದು ಮತಏಣಿಕೆ ನಡೆಯಲಿದೆ.
    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss