Friday, April 26, 2024
spot_img
More

    Latest Posts

    ಕಾರಿಂಜ: ಶಿವನಾಮ ಸಂಕೀರ್ತನ ಯಾತ್ರೆ ಮತ್ತು ಕೋಟಿ ಶಿವನಾಮ ಜಪ

    ಕಾರಿಂಜ: ಹಿಂದು ಜಾಗರಣ ವೇದಿಕೆ ಮತ್ತು ಕಾರಿಂಜೇಶ್ವರ ಸಂರಕ್ಷಣಾ ಸಮಿತಿ ಬಂಟ್ವಾಳ ತಾಲೂಕು ಇದರ ವತಿಯಿಂದ ಎಲ್ಲಾ ಹಿಂದು ಸಂಘಟನೆಗಳ ಸಹಕಾರದೊಂದಿಗೆ ಶಿವನಾಮ ಸಂಕೀರ್ತನೆ ಯಾತ್ರೆ ಮತ್ತು ಕೊಟಿ ಶಿವನಾಮ ಜಪ ಮಹಾಶಿವರಾತ್ರಿಯ ಸಂಧರ್ಭದಲ್ಲಿ ಕಾರಿಂಜ ದೇವಸ್ಥಾನದಲ್ಲಿ ನಡೆಯಿತು. ನೂರಾರು ಶಿವ ಮಾಲಧಾರಿಗಳ ತಂಡ ಕಡಬ,ಪುತ್ತೂರು, ವಿಟ್ಲ,ಬಂಟ್ವಾಳ ಸುಳ್ಯ,ವೇಣೂರು, ಮುಂತಾದ ಕಡೆಗಳಿಂದ ಆಗಮಿಸಿ ವಗ್ಗ ಪೇಟೆಯಿಂದ ಕಾರಿಂಜ ದೇವಸ್ಥಾನದ ವರಗೆ ಪಾದಯಾತ್ರೆಯಲ್ಲಿ ಸಾಗಿ ಪವಿತ್ರ ನದಿಯಲ್ಲಿ ಮಿಂದು ಕೋಟಿ ಜಪನಾಮದಲ್ಲಿ ಭಾಗಿಯಾದರು.

    ಶಿವಮಾಲಾಧರಣೆ ಈ ಭಾರಿ ಹಿಂದು ಜಾಗರಣ ವೇದಿಕೆ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದ್ದು 27/2/2022ರಂದು ಮಾಲಧಾರಣೆ ಮಾಡಿಕೊಂಡು ಶಿವ ಭಕ್ತರು 3 ದಿನ ವೃತಚಾರಣೆಯಲ್ಲಿದ್ದು ಮಹಾಶಿವರಾತ್ರಿಯ ದಿನ ಅಹೋರಾತ್ರಿ ಜಾಗರಣೆ ಇದ್ದು ಬೆಳಿಗ್ಗೆ ಮಾಲೆ ವಿಸರ್ಜನೆ ಮಾಡಿದರು.ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಶ್ರಿ ಜಗದೀಶ್ ಕಾರಂತ್,ಪ್ರಾಂತ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ,ಪ್ರಶಾಂತ್ ಬಂದ್ಯೊಡ್ ,ವಿಭಾಗದ ಪ್ರಮುಖರಾದ ರವಿರಾಜ್ ಕಡಬ,ರತ್ನಕರ ಕಲ್ಲಡ್ಕ ಮತ್ತು ಜಿಲ್ಲಾ ಪ್ರಮುಖರು, ವಿವಿಧ ತಾಲೂಕಿನ ಪ್ರಮುಖರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss