Friday, April 26, 2024
spot_img
More

    Latest Posts

    ಕಾರ್‌ನಲ್ಲೇ ಕುಳಿತು ಸಿನಿಮಾ ನೋಡುವ ದೇಶದ ಮೊಟ್ಟ ಮೊದಲ ಓಪನ್ ಥಿಯೇಟರ್‌ಗೆ ಚಾಲನೆ

    ಮುಂಬೈ: ದೇಶದ ಮೊಟ್ಟ ಮೊದಲ ರೂಫ್ ಟಾಪ್ ಡ್ರೈವ್ ಇನ್( ಓಪನ್ ಥಿಯೇಟರ್) ಸಿನಿಮಾ ಥಿಯೇಟರ್ ಮುಂಬೈನಲ್ಲಿ ಶುಕ್ರವಾರದಿಂದ ಪ್ರಾರಂಭವಾಗಿದೆ.

    ದೇಶದ ಮೊದಲ ಓಪನ್ ಥಿಯೇಟರ್ ಪ್ರಾರಂಭವಾಗಿದೆ. ಜಿಯೋ ವರ್ಲ್ಡ್ ಡ್ರೈವ್ ಇನ್ ಮಾಲ್‍ನಲ್ಲಿರುವ ಜಿಯೋ ಡ್ರೈವ್ ಇನ್ ಥಿಯೇಟರ್ ಭಾರತದ ದೊಡ್ಡ ಪರದೆ ಹೊಂದಿದ ಥಿಯೇಟರ್‌‌ಗಳಲ್ಲಿ ಒಂದಾಗಿದೆ.

    ಕೊರೊನಾ ವೈರಸ್ ಸಾಂಕ್ರಾಮಿಕದ ನಂತರ ಜಗತ್ತು ಇನ್ನೂ ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿರುವುದರಿಂದ, ಡ್ರೈವ್-ಇನ್ ಥಿಯೇಟರ್ ಅನ್ನು ಚಲನಚಿತ್ರ ಅಭಿಮಾನಿಗಳಿಗೆ ಸುರಕ್ಷಿತವಾದ ಮುಕ್ತ ಸ್ಥಳವಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸೂರ್ಯವಂಶಿ ಸಿನಿಮಾ ರೂಫ್‍ಟಾಪ್ ಡ್ರೈವ್-ಇನ್ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿರುವ ಮೊದಲ ಚಲನಚಿತ್ರವಾಗಿದೆ. ಸುಮಾರು 290 ಕಾರ್ ಪಾರ್ಕ್ ಮಾಡುವ ವ್ಯವಸ್ಥೆ. ಸ್ಥಳಾವಕಾಶ ನೀಡಬಹುದಾದ ಡ್ರೈವ್-ಇನ್ ಥಿಯೇಟರ್, ರಿಲಯನ್ಸ್ ರೀಟೈಲ್ ಸಹಭಾಗಿತ್ವದ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್ ಇದಾಗಿದೆ.

    ಇದರ ವಿಶೇಷತೆ ಏನು?
    * ರೂಪ್ ಟಾಪ್ ಡ್ರೈವ್ ಇನ್ ಥಿಯೇಟರ್‍ನಲ್ಲಿ 290 ಕಾರು ಪಾರ್ಕ್ ಮಾಡುವ ವ್ಯವಸ್ಥೆ.
    * ಕ್ರಿಸ್ಟಿ ಆರ್‌ಜಿಬಿ ಲೇಸರ್‌ ಪ್ರೊಜೆಕ್ಷನ್‍ನಿಂದ ಸಿನಿಮಾ ಪ್ರದರ್ಶನ
    * ದೇಶದಲ್ಲೇ ಅತೀ ದೊಡ್ಡ ಪ್ರದರ್ಶನ ಪರದೆ ಹೊಂದಿರುವ ಚಿತ್ರ ಮಂದಿರದಲ್ಲಿ 24 ಮೀಟರ್
    * ಪ್ರತಿ ಕಾರಿಗೆ 1,200ರೂಪಾಯಿ ಟಿಕೆಟ್ ಶುಲ್ಕವಾಗಿರುತ್ತದೆ. ನಾಲ್ಕು ಮಂದಿ ಮಾತ್ರ ವಾಹನದಲ್ಲಿ ಕುಳಿತು ಸಿನಿಮಾ ನೋಡಬಹುದಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss