Wednesday, April 24, 2024
spot_img
More

    Latest Posts

    ಉಡುಪಿ;ಡಿವೈಡರ್ ಗೆ ಢಿಕ್ಕಿಹೊಡೆದು ಬೈಕ್ ನ ಮೇಲೆ‌ ಬಿದ್ದ ಕಾರು,ಯುವಕ ಮೃತ್ಯು

    ಉಡುಪಿ: ಬ್ರಹ್ಮಾವರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು, ಬಳಿಕ ಬೈಕಿನ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ಉಡುಪಿ ಹೆದ್ದಾರಿಯಲ್ಲಿ ಸಂಭವಿಸಿದೆ.

    ಮೃತಪಟ್ಟ ಬೈಕ್‌ ಸವಾರನನ್ನು ವಿಜಯಪುರದ ನಿವಾಸಿ ಸುನಿಲ್ (24) ಎಂದು ಗುರುತಿಸಲಾಗಿದೆ.

    ಮೊದಲು ರಸ್ತೆಯ ಡಿವೈಡರ್ ಗೆ ಕಾರು ಢಿಕ್ಕಿ ಹೊಡೆದು ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌‌ನ ಮೇಲೆ ಬಿದ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಬಾಗಲಕೋಟೆ ನಿವಾಸಿ ಮಂಜುನಾಥ್‌ ಗಾಯಗೊಂಡಿದ್ದಾರೆ. ಈ ಕುರಿತು ಉಡುಪಿ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss