Tuesday, April 23, 2024
spot_img
More

    Latest Posts

    ಮಂಗಳೂರು: ಚಾರ್ಜ್ ಹಾಕಿದ್ದ ಇ-ಸ್ಕೂಟರ್ ಸ್ಪೋಟಗೊಂಡು ಬೆಂಕಿಗಾಹುತಿ

    ಮಂಗಳೂರು: ತೈಲ ಬೆಲೆಯೇರಿಕೆ, ಪರಿಸರ ಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೆಚ್ಚಿನವರು ಇ-ಸ್ಕೂಟರ್ ನತ್ತ ಒಲವು ತೋರಿಸುತ್ತಿದ್ದಾರೆ. ಆದರೆ ದೇಶದಲ್ಲಿ ಹಲವೆಡೆ ಚಾರ್ಜ್ ಗೆ ಇಟ್ಟಲ್ಲೇ ಇ-ಸ್ಕೂಟರ್ ಸ್ಪೋಟಗೊಂಡು ಬೆಂಕಿ ಹತ್ತಿರುವುದು ಸುದ್ದಿಯಾಗುತ್ತಲೇ ಇತ್ತು. ಇದೀಗ ಮಂಗಳೂರಿನ ಬೋಂದೆಲ್ ನಲ್ಲಿ ಚಾರ್ಜ್ ಗೆ ಇಟ್ಟಲ್ಲೇ ಇ-ಸ್ಕೂಟರ್ ಸ್ಪೋಟಗೊಂಡು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

    ನಗರದ ಬೋಂದೆಲ್ ಸಮೀಪದ ಕೆ.ಎಚ್.ಕಾಲನಿಯಲ್ಲಿ ಚಾರ್ಜ್ ಗೆ ಇಟ್ಟಿರುವ ಇ-ಸ್ಕೂಟರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಇ-ಸ್ಕೂಟರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾರ್ಜ್ ಗೆ ಇಟ್ಟ ಕೆಲವೇ ಹೊತ್ತಿನಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

    ಸ್ಕೂಟರ್ ನ ಹಿಂಬದಿಯ ಯಂತ್ರಗಳು ಸಂಪೂರ್ಣ ಸುಟ್ಟುಕರಕಲಾಗಿದೆ. ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss