Friday, April 26, 2024
spot_img
More

    Latest Posts

    ಮಂಗಳೂರು: ಜಾನುವಾರು ಕಳ್ಳತನ- ಓರ್ವನ ಬಂಧನ

    ಮಂಗಳೂರು :ನಗರದ ಮರವೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋಶಾಲೆಯ ಮೂರು ಜಾನುವಾರುಗಳನ್ನು ಕಳವುಗೈದ ಆರೋಪಿಯೊಬ್ಬನನ್ನು ಬಜ್ಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಮಹಮ್ಮದ್ ರಾಝಿಕ್ (19), ಬಂಧಿತ ಆರೋಪಿ. ನಗರದ ಮರವೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋಶಾಲೆಯ ಮೇಯಲು ಬಿಟ್ಟ ಜಾನುವಾರುಗಳಲ್ಲಿ ಒಂದು ಹೋರಿ ಹಾಗೂ 2 ಕಪಿಲ ತಳಿಯ ಹಸುಗಳನ್ನು ಗೋಕಳ್ಳರು ಕಳವುಗೈಯ್ಯಲಾಗಿತ್ತು. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಓರ್ವ ಆರೋಪಿ ಮಹಮ್ಮದ್ ರಾಝಿಕ್ ನನ್ನು ಕೆಂಜಾರು ಮರವೂರಿನಲ್ಲಿ ಬಂಧಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ. ತಕ್ಷಣ ಅವರನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss