Author: Tulunada Surya

ಉಡುಪಿ: ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ಟ (84) ಶನಿವಾರ (25. 1. 25) ನಿಧನ ಹೊಂದಿದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಕೇಶವ ಭಟ್ಟರು ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ಕಲಾ ಸಂಯೋಜಕರಾಗಿ, ಕಲಾವಿಮರ್ಶಕರಾಗಿ, ಲೇಖಕರಾಗಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ನಿವೃತ್ತಿಯ ಅನಂತರ ವಾಸುದೇವ ಸಾಮಗರ ಸಂಯಮಂ ತಂಡದಲ್ಲಿ ಕೆಲವು ವರ್ಷ ತಿರುಗಾಟ ಮಾಡಿದ್ದರು. ಅಪಾರ ಪುರಾಣ ಜ್ಞಾನ, ಭಾವಪೂರ್ಣ ಅರ್ಥಗಾರಿಕೆಯಿಂದ ಕಲಾಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದರು. ಸಂಸ್ಥೆಯ ತಾಳಮದ್ದಲೆ ಸಪ್ತಾಹದಲ್ಲಿ ಅರ್ಥಧಾರಿಯಾಗಿ, ಅವಲೋಕನಕಾರರಾಗಿ ಸಹಕರಿಸಿದ್ದರು. ಅವರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಂತಾಪ:ಬರೆ ಕೇಶವ ಭಟ್ಟ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಸಂತಾಪ ವ್ಯಕ್ತ ಪಡಿಸಿದ್ದಾರೆ

Read More

ಮಂಗಳೂರು ; ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ನಾಡಿಗೆ ಪರಿಚಯಿಸಿದ ಕೀರ್ತಿ ಇವರದ್ದು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರೀಯ ಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Read More

ಮಂಗಳೂರು : ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಮಂಗಳೂರಿನ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಿಜೈ ಬಳಿಯ ಕಲರ್ಸ್ ಬ್ಯೂಟಿ ಪಾರ್ಲರ್ ನಲ್ಲಿ ಈ ಘಟನೆ ನಡೆದಿದೆ. ಮಸಾಜ್ ಸೆಂಟರ್ ಗೆ ದಾಳಿ ನಡೆಸಿ ಗಲಾಟೆ ನಡೆಸಿದ್ದು, ಸ್ಪಾ ಸೆಂಟರ್ ನಲ್ಲಿ ಅನೈತಿಕ ಚಟುವಟಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಜೈ ಬಳಿಯ ಕಲರ್ಸ್ ಹೆಸರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಇಲ್ಲಿ ಅನೈತಿಕ ಚಟುವಟಿಕೆ ಬೆಳಕಿಗೆ ಬಂದಿದೆ. ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಿದೆ ಮಂಗಳೂರಿನ ಕೆಎಸ್ಆರ್ಟಿಸಿ ಬಳಿ ಇರುವ ಮಸಾಜ್ ಸೆಂಟರ್ ಗೆ ಕಾರ್ಯಕರ್ತರು ನುಗ್ಗಿದ್ದಾರೆ. ಮಸಾಜ್‌ ಪಾರ್ಲರ್‌ನ ಪೀಠೋಪಕರಣ, ಕಂಪ್ಯೂಟರ್‌ ಸೆಟ್‌, ಟೇಬಲ್‌ಗಳನ್ನು ಪುಡಿ ಮಾಡಲಾಗಿದೆ. ಅಲ್ಲಿದ್ದ ಹುಡುಗಿಯರಲ್ಲಿ ನೀವು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದೀರಾ.? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿದ್ದ ಹುಡುಗಿಯರು ಕಿರುಚಾಡುವ ವೀಡಿಯೋ ವೈರಲ್ ಆಗಿದೆ.

Read More

ಮಂಗಳೂರು : ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಿಜೈ ಬಳಿಯ ಕಲರ್ಸ್ ಬ್ಯೂಟಿ ಪಾರ್ಲರ್ ನಲ್ಲಿ ಈ ಘಟನೆ ನಡೆದಿದೆ. ಮಸಾಜ್ ಸೆಂಟರ್ ಗೆ ದಾಳಿ ನಡೆಸಿ ಶ್ರೀರಾಮ ಸೇನೆ ಗಲಾಟೆ ನಡೆಸಿದ್ದು, ಸ್ಪಾ ಸೆಂಟರ್ ನಲ್ಲಿ ಅನೈತಿಕ ಚಟುವಟಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಜೈ ಬಳಿಯ ಕಲರ್ಸ್ ಹೆಸರಿನ ಮಸಾಜ್ ಪಾರ್ಲರ್ ಮೇಲೆ ಶ್ರೀರಾಮ ಸೇನೆ ದಾಳಿ ಮಾಡಿದ್ದಾರೆ. ಈ ವೇಳೆ ಇಲ್ಲಿ ಅನೈತಿಕ ಚಟುವಟಿಕೆ ಬೆಳಕಿಗೆ ಬಂದಿದೆ. ಮಸಾಜ್ ಸೆಂಟರ್ ಮೇಲೆ ಶ್ರೀರಾಮ ಸೇನೆ ದಾಳಿ ಮಾಡಿದೆ ಮಂಗಳೂರಿನ ಕೆಎಸ್ಆರ್ಟಿಸಿ ಬಳಿ ಇರುವ ಮಸಾಜ್ ಸೆಂಟರ್ ಗೆ ಶ್ರೀರಾಮ ಸೇನೆ ಕಾರ್ಯಕರ್ತರು ನುಗ್ಗಿದ್ದಾರೆ. ಮಸಾಜ್‌ ಪಾರ್ಲರ್‌ನ ಪೀಠೋಪಕರಣ, ಕಂಪ್ಯೂಟರ್‌ ಸೆಟ್‌, ಟೇಬಲ್‌ಗಳನ್ನು ಪುಡಿ ಮಾಡಲಾಗಿದೆ. ಅಲ್ಲಿದ್ದ ಹುಡುಗಿಯರಲ್ಲಿ ನೀವು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದೀರಾ.? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿದ್ದ…

Read More

ವಿಶ್ವದ ಏಕೈಕ ಜಾನಪದ ವಿಶ್ವ ವಿದ್ಯಾಲಯ ಎಂದು ಪ್ರಸಿದ್ದ ವಾದ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯಗೂಟಗೂಡಿ, ಶಿಗ್ಗಾವಿ ತಾಲೂಕು ಹಾವೇರಿ ಜಿಲ್ಲೆ ಇದರ ಕುಲಪತಿ ಡಾ. ಟಿ. ಎಂ ಭಾಸ್ಕರ್ ರವರು ಅಹ್ವಾನ ಮಾಡಿ 21.1.2025 ಅಪರಾಹ್ನ 3.00 ಗಂಟೆಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಯವರಿಗೆ ವಸ್ತು ಸಂಗ್ರಹಾಲಯ ವಿವಿಧ ಚಟುವಟಿಕೆ ಗಳ ಬಗ್ಗೆ ತಿಳಿಸಿ ದರು ಈ ಸಂಧರ್ಭ ವಿಶ್ವ ವಿದ್ಯಾಲಯ ದ ಅಧ್ಯಾಪಕ ವೃoದ ದವರಾದ ಡಾ. ಪ್ರೇಮ್ ಕುಮಾರ್, ಡಾ. ವೆಂಕನ್ ಗೌಡ, ಡಾ. ರಾಜ ಶೇಖರ್, ಷಹಾಜನ್ ಮುದ ಕವಿ, ಅಸಿಸ್ಟೆಂಟ್ ಪ್ರೋ ಭುವನ್ ಅಕ್ಕೋಳೆ ಇದ್ದರು ಹಾಗೂ ಸ್ವಾಮೀಜಿ ಜತೆಗೆ ಸೋಮಶೇಖರ್, ಪ್ರಮೋದ್ ಎಸ್ ಡಿ ಯಂ ಉಜಿರೆ ಕಾಲೇಜುಪ್ರಾಂಶುಪಾಲರು,ಮೂಡು ಬಿದಿರೆ ಲೆಕ್ಚರ್ ಮಹಾವೀರ ಜೈನ್ ಉಪಸ್ಥಿತರಿದ್ದರು ಮುಂದಿನ ದಿನಗಳಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಆಶ್ರಮ ದಲ್ಲಿ ರಾಜ್ಯ ಮಟ್ಟದ ಜಾನಪದ ಕಮ್ಮಟ ಹಮ್ಮಿಕೊಳ್ಳಲು ಸ್ವಾಮೀಜಿ ಕುಲಪತಿ…

Read More

ಗಂಗೊಳ್ಳಿ : ಗ್ರಾಮ ಪಂಚಾಯತ್‌ನ ಪಿ.ಡಿ.ಓ. ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ ಪಿರ್ಯಾದಿದಾರರು ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಜಾಗದ ದಾಖಲೆಗಳೊಂದಿಗೆ 9/11 ಗಾಗಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಅಲ್ಲಿನ ಪಿ.ಡಿ.ಓ ರವರಾದ ಶ್ರೀ. ಉಮಾಶಂಕರ್ ಮತ್ತು ದ್ವಿ.ದ.ಸ ಶೇಖರ್ ಜಿ. ಇವರನ್ನು ಭೇಟಿ ಮಾಡಿ ವಿಚಾರಿಸಿದಾಗ ಸದರಿ 9/11 ನ್ನು ನೀಡಲು ರೂ. 27,000/- ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಪಿರ್ಯಾದಿದಾರರಿಗೆ ಇಚ್ಛೆ ಇಲ್ಲದ ಕಾರಣ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಈ ದಿನ ದಿನಾಂಕ 22.012025ರ ಬೆಳಿಗ್ಗೆ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಪಿ.ಡಿ.ಓ ರವರಾದ ಶ್ರೀ. ಉಮಾಶಂಕರ್ ಮತ್ತು ದ್ವಿ.ದ.ಸ ಶ್ರೀ. ಶೇಖರ್ ಜಿ. ಇವರುಗಳು ರೂ.22,000/- ಲಂಚದ ಹಣವನ್ನು ಸ್ವೀಕರಿಸುವಾಗ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಕಚೇರಿಯಲ್ಲಿ ಲೋಕಾಯುಕ್ತ…

Read More

ಹುಬ್ಬಳ್ಳಿ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ದರೋಡೆ,ಕಳ್ಳತನ,ಮೀಟರ್ ಬಡ್ಡಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯ ಸರಕಾರ ಹಾಗೂ ಪೋಲಿಸ್ ಇಲಾಖೆಯು ಕಣ್ಣುಮುಚ್ಚಿ ಕುಳಿತ್ತಂತಿದೆ.ರಾಜ್ಯದಲ್ಲಿ ಬಡ್ಡಿ ದಂಧೆಕೊರರ ಅವಳಿ ಹೆಚ್ಚಾಗಿದ್ದು ಚಾಮರಾಜನಗರ, ಮಂಡ್ಯದಲ್ಲಿ ಹಲವು ಕುಟುಂಬಗಳು ಊರು ಬಿಟ್ಟು ಹೋಗಿವೆ. ಈ ಮೀಟರ್ ಬಡ್ಡಿ ದಂಧೆಕೊರರನ್ನು ಕಡಿವಾಣ ಹಾಕದಿದ್ದರೆ ಜನರು ಇನ್ನಷ್ಟು ಪ್ರಾಣ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ . ಮೀಟರ್‌ಬಡ್ಡಿ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್‌ ನೋಟ್ ಬರೆದಿಟ್ಟು ಇಲ್ಲಿ ಹುಬ್ಬಳ್ಳಿ ಬೈಪಾಸ್‌ನ ಧಾರಾವತಿ ಹನುಮಪ್ಪನ ದೇವಸ್ಥಾನ ಬಳಿ ಬೈಕ್ ಬೈಕ್ ಚಲಾಯಿಸುತ್ತಿರುವಾಗಲೇ ಚಲಾಯಿಸುತ್ತಿರುವಾಗಲೇ ಲಾರಿ ಚಕ್ರದಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಉಣಕಲ್ ನಿವಾಸಿ ಸಿದ್ದಪ್ಪ ಕೆಂಚಣ್ಣವರ(43) ಮೃತ ದುರ್ದೈವಿ. ನಗರದ ಮಹೇಶ ಚಿಕ್ಕವೀರಮಠ ಎಂಬುವರ ಬಳಿ 7 ವರ್ಷ ಹಿಂದೆ ₹10 ಲಕ್ಷ ಸಾಲ ಪಡೆದಿದ್ದರು. ಬಡ್ಡಿ ಸೇರಿ ₹65 ಲಕ್ಷ ವಾಪಸ್‌ ಮಾಡಿದ್ದರು. ಬೆಂಬಿಡದೇ ಬಡ್ಡಿ, ಅಸಲು ನೀಡುವಂತೆ ಮಹೇಶ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು,…

Read More

ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಳ್ಳವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಬಂಟ್ವಾಳ ಪುತ್ತೂರು ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ ಸಭೆ ನಡೆಸಲಾಗಿದೆ ಸಹಕಾರಿ ಬ್ಯಾಂಕುಗಳು ಹಾಗೂ ಸೊಸೈಟಿಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳೊಂದಿಗೆ ಆಯಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಬ್ಯಾಂಕು ಮತ್ತು ಸೊಸೈಟಿಗಳ ಭದ್ರತೆ ಕುರಿತು ಸೂಚನೆ ನೀಡಲಾಗಿದ್ದು ಭದ್ರತಾ ಸಿಬ್ಬಂದಿ ನೇಮಕಾತಿ ಮತ್ತು ಸಿಸಿಟಿವಿ ಅಳವಡಿಕೆ ಸೇರಿದಂತೆ ಭದ್ರತೆ ಖಾತ್ರಿ ಪಡಿಸಲು ನಿರ್ದೇಶನ ನೀಡಲಾಗಿದೆ ಈ ಮಧ್ಯೆ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಸಂಬಂಧ ತನಿಖೆಗಾಗಿ ಎಸಿಪಿ ಧನ್ಯ ನಾಯಕ್ ನೇತೃತ್ವದಲ್ಲಿ ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಇನ್ನು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಶಯಾಸ್ಪದ ವ್ಯಕ್ತಿಗಳನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

Read More

ಬಂಟ್ವಾಳ: ಬ್ರಹ್ಮರಕೊಟ್ಲು ಟೋಲ್ ಗೇಟ್ ನಲ್ಲಿ ಡ್ರೈವರ್ ಒಬ್ಬರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಾರ್ವಜನಿಕರಲ್ಲಿ ತುಂಬಾ ಆತಂಕ ಉಂಟು ಮಾಡಿದೆ. ಸಾರ್ವಜನಿಕರಲ್ಲಿ ಉತ್ತಮ ನಡವಳಿಕೆಯಿಂದ ವ್ಯವಹಾರ ಮಾಡೋದು ಬಿಟ್ಟು ಗುಂಡಾಗಿರಿ ವರ್ತನೆ ತೋರುವುದು ಜನರಿಗೆ ಭಯಭೀತರನ್ನಾಗಿಸುವುದು ತಪ್ಪು . ಟೋಲ್ ಸಿಬ್ಬಂದಿಗಳು ಬಲವಂತವಾಗಿ ಹಣ ವಸೂಲಿ ಮಾಡುವ ವರ್ತನೆ ಸಮಾಜದಲ್ಲಿ ಯುವ ಜನರಲ್ಲಿ ಹಿಂಸಾತ್ಮಕ ಪ್ರವೃತ್ತಿ ಮೂಡಿಸಲು ಪ್ರಚೋದನೆ ನೀಡುತ್ತದೆ. ಇಂತಹ ಘಟನೆಗಳ ಕಡಿವಾಣಕ್ಕೆ ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಾಮದಪದವು ರವರು ತಿಳಿಸಿರುತ್ತಾರೆ. ಇದೇ ರೀತಿಯಲ್ಲಿ ಮುಂದುವರಿದಲ್ಲಿ ಮುಂದಿನ ದಿನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಇತರ ಘಟಕಗಳ ಬೆಂಬಲದೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು…

Read More

ಕೆ.ಸಿ.ರೋಡ್ : ಜನ ನುಗ್ಗಿ ಕೋಟೆಕಾರ್ ವ್ಯವಸಾಯ ಸಹಕಾರಿ ಸಂಘ ದಲ್ಲಿ ಹಗಲು ದರೋಡೆ, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಕೆ.ಸಿ ರೋಡ್ ಬ್ಯಾಂಕ್ ಕಳ್ಳತನ ನಡೆದಿದ್ದು 1 ಕೆ.ಜಿ ಚಿನ್ನಾಭರಣ ಲೂಟಿ ಹೊಡೆದದ್ದಾರೆಂದು ಮಾಹಿತಿ ದೊರೆತಿದೆ. ಗನ್ ಪಾಯಿಂಟ್ ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದು ಆರು ಜನ ದುಷ್ಕರ್ಮಿ ಫಿಯೆಟ್ ಕಾರಿನಲ್ಲಿ ಬಂದಿದ್ದಾರೆಂದು ತಿಳಿದಿದೆ. ದುಷ್ಕರ್ಮಿಗಳು ಸ್ಥಳದಿಂದ ಮಂಗಳೂರು ಕಡೆಗೆ ಪರಾರಿಯಾಗಿದ್ದು ಇದೀಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ಮಾಹಿತಿ ಪೋಲಿಸರು ಕಲೆ ಹಾಕುತ್ತಿದ್ದಾರೆ.

Read More