Author: Tulunada Surya

ಉಳ್ಳಾಲ: ಛಾಯಾಗ್ರಹಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯ ಛಾಯಾಗ್ರಹಕ ಅಶೋಕ್ ಅವರನ್ನು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.), ಉಳ್ಳಾಲ ವಲಯವು ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಸನ್ಮಾನಿಸಿತು. 1956ರ ಅಕ್ಟೋಬರ್ 8ರಂದು ಜನಿಸಿದ ಅವರು, ಕಳೆದ 30 ವರ್ಷಗಳಿಂದ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ಅಹೋರಾತ್ರಿ ಶ್ರಮವಹಿಸಿದ್ದಾರೆ. 1975ರಲ್ಲಿ ಮುಂಬೈನಲ್ಲಿ ತಮ್ಮ ಮೊದಲ ಕ್ಯಾಮೆರಾವನ್ನು ಖರೀದಿಸಿ ಹವ್ಯಾಸಿ ಛಾಯಾಗ್ರಹಕರಾಗಿ ಆರಂಭಿಸಿದ ಅವರು, ನಂತರ ಊರಿನಲ್ಲಿ ಪೂರ್ಣಕಾಲಿಕ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿದರು. ಅನೇಕ ಶುಭ ಕಾರ್ಯಕ್ರಮಗಳ ಅವಿಸ್ಮರಣೀಯ ಕ್ಷಣಗಳನ್ನು ತಮ್ಮ ಕ್ಯಾಮೆರಾ ಕಣ್ಗಳಲ್ಲಿ ಸೆರೆಹಿಡಿದು ಅನೇಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಡಿಯೋಗ್ರಾಫರ್ ಆಗಿ ಅಪಾರ ಅನುಭವವನ್ನು ಸಂಪಾದಿಸಿರುವ ಅವರು, ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಕೌಶಲ್ಯ ಮತ್ತು ನಿಷ್ಠೆಯಿಂದ ಗುರುತಿಸಿಕೊಂಡಿದ್ದಾರೆ. ಪತ್ನಿ ತಾರಾ, ಮಗ ಅಖಿಲೇಶ್, ಸೊಸೆ ಶ್ರುತಿ ಹಾಗೂ ಮೊಮ್ಮಕ್ಕಳಾದ ಆರಾಧ್ಯ ಮತ್ತು ಸಾನಿಧ್ಯ ಅವರೊಂದಿಗೆ ಸುಖೀ ಜೀವನ ಸಾಗಿಸುತ್ತಿರುವ ಇವರಿಗೆ ಈ ಸನ್ಮಾನ ದೊರೆತಿರುವುದು ಛಾಯಾಗ್ರಹಣ ಕ್ಷೇತ್ರದ…

Read More

ಉಡುಪಿ :ರಜತ ಸಂಭ್ರಮದಲ್ಲಿರುವ ಯುವ ವಿಚಾರ(ರಿ) ಉಪ್ಪೂರು ಕೊಳಲಗಿರಿ ಗೆ 2025-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಳೆದ 25 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವುದನ್ನು ಗುರುತಿಸಿ “ಸಾಮಾಜಿಕ ಸೇವೆ” ವಿಭಾಗದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ರವರು ನಮ್ಮ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿಯವರಿಗೆ ಪ್ರಧಾನ ಮಾಡಿದರು. ಜಿಲ್ಲಾಧಿಕಾರಿಯವರಾದ ಶ್ರೀಮತಿ ಸ್ವರೂಪ ಟಿ.ಕೆ., ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ SP ಶ್ರೀ ‌ಹರಿರಾಮ್ ಶಂಕರ್, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್, ರಾಜಕೀಯ ಮುಖಂಡರಾದ ರಮೇಶ್ ಕಾಂಚನ್, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಎಂ.ಎ ಗಪೂರ್, ಅಶೋಕ್ ಕೊಡವೂರು, ದಿನಕರ್ ಹೇರೂರು, ಪ್ರಸಾದ್…

Read More

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಹಾಗೂ ತಾಳಮದ್ದಳೆ ಅರ್ಥಧಾರಿ ವಿಟ್ಲ ಶಂಭು ಶರ್ಮ (74) ಶನಿವಾರ (ನವೆಂಬರ್ 1) ಬೆಳಗಿನ ಜಾವ ನಿಧನರಾದರು. ಅವರ ನಿಧನಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ತೀವ್ರ ಸಂತಾಪ ಸೂಚಿಸಿದ್ದಾರೆ. ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿಯಲ್ಲಿ ಕೃಷ್ಣ ಭಟ್ಟ – ಹೇಮಾವತಿ ದಂಪತಿಗಳ ಪುತ್ರನಾಗಿ 1951 ಅಕ್ಟೋಬರ್ 13ರಂದು ಜನಿಸಿದ ಶಂಭು ಶರ್ಮ ಅವರು ತಾಳಮದ್ದಳೆ ಅರ್ಥ ಹೇಳುವ ಮೂಲಕ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಇದೇ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೊಡಗಿಸಿಕೊಂಡು ಖ್ಯಾತ ಅರ್ಥಧಾರಿಯಾಗಿ ಹೆಸರು ಮಾಡಿದರು. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಅವರು ಯಕ್ಷಗಾನದ ಲೋಕದಲ್ಲಿ ತರ್ಕಪೂರ್ಣ ಅರ್ಥಗಾರಿಕೆ, ವಿಶಿಷ್ಟ ಸ್ವರಶಕ್ತಿ, ಹಾಗೂ ಸಮಗ್ರ ಪಾಠಭಾವನೆಗಳಿಂದ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು. ಸುಬ್ರಹ್ಮಣ್ಯ ಮೇಳ, ಕದ್ರಿ ಮೇಳ ಮೊದಲಾದ ಖ್ಯಾತ ಯಕ್ಷಗಾನ ಮಂಡಳಿಗಳಲ್ಲಿ ಅತಿಥಿ ಕಲಾವಿದರಾಗಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.…

Read More

ಉಡುಪಿಬೇರೆ ದೇಶಗಳಲ್ಲಿ ಉದ್ಯೋಗ ಪಡೆಯಲು ಬಯಸಿದ ಅನೇಕ ಜನರನ್ನು ವಂಚಿಸಿರುವ ಆರೋಪ ಎದುರಿಸುತ್ತಿರುವ ಬಂಗಲೂರಿನ ವಿವರ್ಸ್ ಕಾಲೋನಿ, ಅಂಕಲ್ ನಿವಾಸಿ ಶ್ರೀ ಎಲ್ಟನ್ ರೆಬೆಲೊ ಅವರ ಪತ್ನಿ ಪ್ರಕೃತಿ ವಿರುದ್ಧ ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸಿದೆ. ಸಂತ್ರಸ್ತರಿಂದ ಬಂದ ದೂರುಗಳ ಪ್ರಕಾರ, ಆರೋಪಿಗಳು ಆಸ್ಟ್ರೇಲಿಯಾ ಹಾಗೂ ಲಂಡನ್ ದೇಶಗಳಿಗೆ ಕೆಲಸದ ವೀಸಾ ಒದಗಿಸುವ ಭರವಸೆ ನೀಡಿ ಅನೇಕ ಜನರಿಂದ ಕೋಟಿಗಟ್ಟಲೆ ಹಣ ವಸೂಲು ಮಾಡಿದರೂ, ಯಾವುದೇ ವೀಸಾ ನೀಡದೆ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕೃತ್ಯ ನಂಬಿಕೆ ಭಂಗ (Breach of Trust), ವಂಚನೆ (Cheating), ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA) ಹಾಗೂ ಸೈಬರ್ ಅಪರಾಧ (Online Fraud) ವಿಭಾಗಗಳಿಗೆ ಒಳಪಟ್ಟಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.ತುಳುನಾಡ ರಕ್ಷಣಾ ವೇದಿಕೆಯ ಮುಖಂಡರು ಹಾಗೂ ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ ಶಂಕರ್ ರವರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದು,ತನಿಖೆಗಾಗಿ ವಂಚನೆಗೊಳ್ಳಗಾದ ದಾಖಲೆಗಳನ್ನು ಒದಗಿಸಿದ್ದಾರೆಪೊಲೀಸ್ ಅಧೀಕ್ಷಕರು…

Read More

ಉಡುಪಿ :ಶ್ರೀ ಎಲ್ಟನ್ ರೆಬೆಲೊ ಅವರ ಪತ್ನಿ ಪ್ರಕೃತಿ, ವಿಳಾಸ: Vivers Colony, Ankal, Bangalore, ಇವರು ಆಸ್ಟ್ರೇಲಿಯಾ ಹಾಗೂ ಲಂಡನ್ ದೇಶಗಳಿಗೆ ಕೆಲಸದ ವೀಸಾ ನೀಡುವ ಭರವಸೆ ನೀಡಿ ಅನೇಕ ಜನರನ್ನು ನಂಬಿಸಿದ್ದಾರೆ. ವೀಸಾ ಪ್ರಕ್ರಿಯೆಗೆ ಸಹಾಯ ಮಾಡುವ ಹೆಸರಿನಲ್ಲಿ ಇವರು ಸಂತ್ರಸ್ತರಿಂದ ಕೋಟಿಗಟ್ಟಲೆ ರೂಪಾಯಿಗಳನ್ನು ಸಂಗ್ರಹಿಸಿ ನಂತರ ಯಾವುದೇ ವೀಸಾ ನೀಡದೇ ಮೋಸ ಮಾಡಿದ್ದಾರೆ.ಸಂತ್ರಸ್ತರು ಹಲವು ಬಾರಿ ಅವರೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಯಾವುದೇ ಸ್ಪಷ್ಟ ಉತ್ತರ ನೀಡದೆ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಈ ಕೃತ್ಯವು ನಂಬಿಕೆ ಭಂಗ (Breach of Trust), ವಂಚನೆ (Cheating), ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA act) ಮತ್ತು ಸೈಬರ್ ಮೋಸದ (Online Fraud) ವಿಭಾಗಕ್ಕೆ ಸೇರುತ್ತದೆ.ಆರೋಪಿಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದಲ್ಲಿ ನಮ್ಮಲ್ಲಿ ಸಹಾಯ ಯಾಚಿಸಿದ ಸಂತ್ರಸ್ತರಂತೆ ವಿದೇಶಗಳಲ್ಲಿ ವೀಸಾ ಪಡೆಯಲು ಪ್ರಯತ್ನಿಸಿದ್ದ ನೂರಾರು ಜನರಿಂದ ಕೋಟಿಗಟ್ಟಲೆ ಹಣ ಪಡೆದು ವಂಚಿಸಿದ ವಿಷಯವು ಬಯಲಿಗೆ ಬರಬಹುದು. ಇಂತಹ ವೀಸಾ…

Read More

ಬೆಂಗಳೂರು:ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್, ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2025ರ ಅಕ್ಟೋಬರ್ 16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಕನ್ನಡ ಕವಿಗಳ ಪ್ರಥಮ ಸಮ್ಮೇಳನದಲ್ಲಿ,ಗಾಯನ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆ ಹಾಗೂ ಬಹುಮುಖ ಪ್ರತಿಭೆ ಪ್ರದರ್ಶನಕ್ಕಾಗಿ ಶ್ರೀ ಎನ್. ನಾಗೇಂದ್ರ ರವರಿಗೆ ಗೌರವಾನ್ವಿತ “ವಿಶ್ವೇಶ್ವರಯ್ಯ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಮಾಜಿ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಡಾ. ಎನ್. ಸಂತೋಷ್ ಹೆಗ್ಡೆ ರವರು ಪ್ರಧಾನ ಮಾಡಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷರು ಡಾ. ಸಿ. ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಡಾ. ಎಂ. ಎಸ್. ಮುತ್ತುರಾಜ್, ಕರ್ನಾಟಕ ಸವಿತಾ ಸಮಾಜ ಅಧ್ಯಕ್ಷರು, ಶ್ರೀ ಶ್ರೀ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು (ಅಥಣಿ), ಶ್ರೀ ಶ್ರೀ ರಮಾನಂದ ಗುರೂಜಿ…

Read More

ಮಂಗಳೂರು : ತುಳು ಕೂಟದ ಅಧ್ಯಕ್ಷರಾಗಿ, ಸಾಮಾಜಿಕ, ರಾಜಕೀಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ಸುಂದರರಾಜ್ ರೈ ಅವರು ರಾಜಧಾನಿಯಲ್ಲಿ ತುಳುವರ ಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸುವುದರ ಮೂಲಕ ಸಮಾಜಕ್ಕಾಗಿ ಅನನ್ಯ ಸೇವೆ ಸಲ್ಲಿಸಿದ ಸಮಾಜಮುಖಿ ವ್ಯಕ್ತಿಯಾಗಿದ್ದರು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.ಇತ್ತೀಚಿಗೆ ನಿಧನರಾದ ಕೆ.ಸುಂದರರಾಜ್ ರೈ ಅವರಿಗೆ ಮಂಗಳೂರಿನ ತುಳುಭವನದಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು.ಸುಂದರರಾಜ್ ರೈ ಅವರ ಆಶಯಗಳನ್ನು ಮುಂದುವರಿಸುವ ಮೂಲಕ ಅವರಿಗೆ ಗೌರವ ಅರ್ಪಣೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರ ಮಾತನಾಡಿ , ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಸುಂದರರಾಜ್ ರೈ ಅವರು ಬೆಂಗಳೂರಿನಲ್ಲಿ ನೆಲೆಯಾಗಿ ತುಳು ಸಂಘಟನೆ , ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ ಅಪಾರವಾದ ಜನಪ್ರಿಯತೆಯನ್ನು ಪಡೆದಿದ್ದರೂ, ತನ್ನ ವೈಯುಕ್ತಿಕ ಲಾಭ ಉದ್ದೇಶಕ್ಕಾಗಿ ಏನನ್ನು ಮಾಡದೆ ಸರ್ವಸ್ವವೂ ಸಮಾಜಕ್ಕಾಗಿ ಎಂಬ ರೀತಿಯಲ್ಲಿ…

Read More

ಮಂಗಳೂರು:ನಗರದ ಕಾವೂರು ಸಮೀಪ ವಿದೇಶ ಉದ್ಯೋಗದ ಹೆಸರಿನಲ್ಲಿ ಹಣ ವಸೂಲಿಸಿ ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರಕೃತಿ ಯು (34) ಹಾಗೂ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೂಲದ ಆಲ್ಡನ್ ರೆಬೇರೋ (42) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಕಾವೂರು ಠಾಣಾ ವ್ಯಾಪ್ತಿಯ ಹಲವರಿಗೆ “ವಿದೇಶದಲ್ಲಿ ಉತ್ತಮ ವೇತನದ ಉದ್ಯೋಗ ಕೊಡಿಸುತ್ತೇವೆ” ಎಂದು ನಂಬಿಸಿ, ಒಟ್ಟು ₹1 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ವಂಚನೆ ನಡೆಸಿದ್ದರು. ಅವರು ಜನರಿಂದ ಪಾಸ್‌ಪೋರ್ಟ್‌ಗಳನ್ನು ಕೂಡ ಸಂಗ್ರಹಿಸಿ ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಕಾವೂರು ಪೊಲೀಸರು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ 24 ಪಾಸ್‌ಪೋರ್ಟ್‌ಗಳು, 43 ಗ್ರಾಂ ಚಿನ್ನ ಮತ್ತು 2 ಮೊಬೈಲ್‌ಫೋನ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ನಂತರ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆಯನ್ನು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಎಂ.…

Read More

ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಪೇಜಾವರ ಪೊರ್ಕೋಡಿಯ ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ದಕ್ಷಿಣ ಕನ್ನಡ ಜಿಲ್ಲಾ ಮಾಸಿಕ ಸಭೆ ಭಾನುವಾರ ಮಧ್ಯಾಹ್ನ 2.30 ಗಂಟೆಗೆ ಜರುಗಿತು. ಸಭೆಗೆ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಅವರು ಮುಖ್ಯ ಅತಿಥಿಯಾಗಿ ಹಾಜರಾಗಿ ಮಾರ್ಗದರ್ಶನ ನೀಡಿದರು. ಸಭೆಯ ಅಧ್ಯಕ್ಷತೆ ಜಿಲ್ಲಾ ಅಧ್ಯಕ್ಷ ಗೋಪಾಲ್ ಮುತ್ತೂರು ವಹಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಭಾಗವಹಿಸಿದರು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿಗಳಾದ ನಾರಾಯಣ್ ಬೋಧ್, ದೇವಪ್ಪ ಬೋಧ್, ಉಪಾಧ್ಯಕ್ಷ ಶಿವಪ್ಪ ಗರ್ಡಾಡಿ, ಖಜಾಂಚಿ ಶಿವರಾಮ ಪೇಜಾವರ, ಹಾಗೂ ಬಿವಿಫ್ ಸಂಯೋಜಕ ನಿತಿನ್ ಮುತ್ತೂರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಅವರು, ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಎಸ್ಪಿ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಜಿಲ್ಲೆಯಾದ್ಯಂತ ಪಕ್ಷದ ಚಟುವಟಿಕೆಗಳು ಈಗಾಗಲೇ ಚುರುಕುಗೊಂಡಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ದೃಢ ನಂಬಿಕೆಯನ್ನು ವ್ಯಕ್ತಪಡಿಸಿದರು.…

Read More

ಉಡುಪಿ: ಕಟಪಾಡಿಯ ಫಾರೆಸ್ಟ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೌಸ್ತುಬಾ ರೆಸಿಡೆನ್ಸಿ ಕಟ್ಟಡವಿರುತ್ತದೆ ಇದು ಸದಾಕಾಲ ರಾಜ್ಯದ ಹೊರ ರಾಜ್ಯದ ಪ್ರವಾಸಿಗರು ನಿಲ್ಲುವ ತಲವಾಗಿದೆ ಇದು ಜನಜಂಗುಳಿಯಿಂದ ಕೂಡಿದ ತಡವಾಗಿದೆ ಆದರೆ ಇಲ್ಲೇ ಇರುವ ರೆಸಿಡೆನ್ಸಿ ಯವರು ಪರಿಸರದ ಸ್ವಚ್ಛತೆಗೆ ಸಂಬಂಧಿಸಿದ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಕೊಳಚೆ ನೀರು ಹೋಗಲು ಸರಿಯಾದ ಯಾವುದೇ ವ್ಯವಸ್ಥೆ ಕಲ್ಪಿಸದೆ ರಸ್ತೆಯಲ್ಲಿ ಹರಿಯ ಬಿಡುತ್ತಿದ್ದಾರೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ತ್ಯಾಜ್ಯ ವಸ್ತುಗಳನ್ನು ಕಂಡ ಕಂಡಲ್ಲಿ ಹಾಕುತ್ತಿದ್ದು ಪರಿಸ್ಥಿತಿ ಅಸಹನೀಯವಾಗಿದೆ ಕಟ್ಟಡದ ಬದಿಯಲ್ಲಿಯೇ ಪ್ರವಾಸಿಗರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಈ ಬಗ್ಗೆ ಸ್ಥಳೀಯರು ಮೌಖಿಕವಾಗಿ ಪಂಚಾಯಿತಿಗೆ ದೂರಿ ನೀಡಿದ್ದು ಯಾವುದೇ ಕ್ರಮ ಎರಗಿಸಿರುವುದಿಲ್ಲ ಆದ್ದರಿಂದ ತುಳುನಾಡ ರಕ್ಷಣಾ ವೇದಿಕೆ ನಿಯೋಗ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ನೇತೃತ್ವದಲ್ಲಿ ದಿನಾಂಕ 28-10-2025 ರಂದು ಕಟಪಾಡಿ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ನೀಡಿ ಒತ್ತಾಯಿಸಿದ್ದಾರೆ ಕ್ರಮ ಕೈಗೊಳ್ಳುವಲ್ಲಿ…

Read More