- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಾಖಲಾಗಿದ್ದ ಒಟ್ಟು ಒಂಬತ್ತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳಾ ಆರೋಪಿತೆಯನ್ನು ಬರ್ಕೆ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬರ್ಕೆ ಪೊಲೀಸ್ ಠಾಣೆಯ ಮೊಕದ್ದಮೆ ನಂ. 77/2025 (ಕಲಂ 316(2), 318(2), 3(5) BNS–2023) ಅಡಿಯಲ್ಲಿ ನಡೆದ ಪ್ರಕರಣದಲ್ಲಿ, ಮಂಗಳೂರಿನ ಎಂಪೈರ್ ಮಾಲ್‌ನಲ್ಲಿರುವ ಲ್ಯಾಪ್‌ಟಾಪ್ ಬಜಾರ್ ಅಂಗಡಿ ಮಾಲೀಕ ಜಯರಾಯ ಅವರು ಪಿರ್ಯಾದಿ ಆಗಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿತೆ ಫರಿದಾ ಬೇಗಂ @ ಫರಿದಾ (28), ಪತಿ ರಮಿಜ್ ರಾಜ್, ಮುತ್ತೂರು ಗ್ರಾಮ, ಮಂಗಳೂರು ತಾಲೂಕು ನಿವಾಸಿ — ತಮ್ಮ ಪರಿಚಿತನ ಮೂಲಕ ಮಾನ್ಯತೆ ಇಲ್ಲದ ಬ್ಯಾಂಕ್ ಚೆಕ್‌ಗಳನ್ನು ನೀಡಿ, ರೂ. 1,98,000 ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ಪಾವತಿಸದೇ ವಂಚನೆ ನಡೆಸಿದ್ದಾಳೆ. ತನಿಖಾಧಿಕಾರಿ ವಿನಾಯಕ ತೊರಗಲ್ ಹಾಗೂ ಮಹಿಳಾ ಸಿಬ್ಬಂದಿಯವರಿಂದ, ಪೊಲೀಸ್ ನಿರೀಕ್ಷಕ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ, ಆರೋಪಿತೆಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆಕೆಯನ್ನು ಅಕ್ಟೋಬರ್ 19,…
ಮಂಗಳೂರಿನಲ್ಲಿ ಜನಿಸಿದರೂ, ಮುಂಬೈಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವ ಪ್ರಭಾ ನಾರಾಯಣ್ ಸುವರ್ಣ ಅವರು ನಿಜವಾದ ಅರ್ಥದಲ್ಲಿ “ಬುಹುಮುಖ ಪ್ರತಿಭೆ” ಎಂದರೆ ಹೇಗಿರಬೇಕು ಎಂಬುದಕ್ಕೆ ಜೀವಂತ ಉದಾಹರಣೆ. ಬಾಲ್ಯದಿಂದಲೇ ಸಮಾಜಸೇವೆಯ ಹಂಬಲ ಬೆಳೆಸಿಕೊಂಡು, ಕಷ್ಟದ ಪರಿಸ್ಥಿತಿಯಲ್ಲಿಯೂ ತಂದೆ-ತಾಯಿ ಹಾಗೂ ಹಿರಿಯರ ಮೌಲ್ಯಾಧಾರಿತ ಸಂಸ್ಕಾರವನ್ನು ಅಳವಡಿಸಿಕೊಂಡು ಜೀವನ ಪಥದಲ್ಲಿ ಮುನ್ನಡೆದಿದ್ದಾರೆ. ತಂದೆ-ತಾಯಿಯ ಸುಕೃತಫಲದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ ಪಡೆದ ಅವರು, 35 ವರ್ಷಗಳ ಯಶಸ್ವಿ ಸೇವೆ ನಂತರ ವಾಲೆಂಟರಿ ರಿಟೈರ್ಮೆಂಟ್ ಪಡೆದು, ಇನ್ನಷ್ಟು ಉತ್ಸಾಹದಿಂದ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಸಮಾಜಸೇವೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಭಾ ಸುವರ್ಣ ಅವರು —• ಯಂಗ್ ಮೆನ್ಸ್ ನೈಟ್ ಹೈಸ್ಕೂಲ್‌ನಲ್ಲಿ ಗ್ರ್ಯಾಂಡ್ ಪ್ಯಾಟ್ರನ್,• ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ಸೇವಾಧಾರಿಯಾಗಿ,• ಜಾಗೃತಿ ಬಳಗ ಫೋರ್ಟ್ ಚಾಪ್ಟರ್ ಚೇರ್ ಪರ್ಸನ್ ಆಗಿ,• ಡಿಗ್ನಿಟಿ ಫೌಂಡೇಶನ್ ಗೌವರ್ನಿಂಗ್ ಕೌನ್ಸಿಲ್ ಸದಸ್ಯೆಯಾಗಿ,• ಮುಂಬೈ ಹಾಗೂ ಮಾತುಂಗ ಕನ್ನಡ ಸಂಘಗಳು,• ಸಾಯನ್ ಮೆಸಾನಿಕ್ ಲೇಡೀಸ್ ಆರ್ಗನೈಜೇಶನ್ನಲ್ಲಿ ಉಪಾಧ್ಯಕ್ಷೆಯಾಗಿ ಹಾಗೂ ಆಜೀವ ಸದಸ್ಯೆಯಾಗಿ,• ಟಾಟಾ ಮೆಮೋರಿಯಲ್ ಕ್ಯಾನ್ಸರ್…
ಉಳ್ಳಾಲ: ಇಂದು ನಾಟೆಕಲ್ ತಾಲೂಕು ಆಫೀಸ್ ಎದುರಗಡೆ ಇರುವ ಖದೀಜಾ ಕಾಂಪ್ಲೆಕ್ಸ್ ವಟಾರದಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮ ಮತ್ತು ಬಾಲ ಪ್ರತಿಭೆ ಫಾತಿಮಾ ರಂಸೀನಾ ಅವರಿಗೆ ಸನ್ಮಾನ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಫ್ತಿಕಾರ್ ಫರೀದ್ ವಹಿಸಿದ್ದು, ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ವಿಭಾಗ-1 ರ ಕಾರ್ಮಿಕ ಅಧಿಕಾರಿ ಶ್ರೀ ಕುಮಾರ್ ಅವರು ಉದ್ಘಾಟಿಸಿದರು. ಅವರು ಅಸಂಘಟಿತ ಕಾರ್ಮಿಕರ ಕಾರ್ಡ್ ಹೇಗೆ ಮಾಡುವುದು ಮತ್ತು ಅದರ ಉಪಯೋಗಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬಾಸ್ ಅಲಿ ಅವರು ಅಧಿಕೃತವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸಂಘಟಿತ ಕಾರ್ಮಿಕ ಘಟಕ ಮತ್ತು ನೌಕರರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ನಾಟೆಕಲ್ ಕಾರ್ಯಕ್ರಮದ ಸ್ವಾಗತ ಭಾಷಣ ನೀಡಿದರು. ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ತಾ.ಪಂ. ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ರಾಜ್ಯ ಮಹಿಳಾ ಕಾಂಗ್ರೆಸ್…
ಮಂಗಳೂರು:ತುಳು ಭಾಷೆ ಮತ್ತು ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ದಿಟ್ಟ ಪರಿಚಯವನ್ನು ತುಳು ಸಾಹಿತ್ಯ ಓದಿನ ಮೂಲಕ ಪಡೆಯಬಹುದು ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ತಲಪಾಡಿಯ ಶಾರದಾ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಅಭಿಯಾನದ ಹತ್ತನೇ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ರಾಮಾಯಣ ಕಾಲದಿಂದ ಇಂದಿನ ಆಧುನಿಕ ದಿನಗಳವರೆಗೆ ತುಳು ಭಾಷೆ ಮತ್ತು ಜ್ಞಾನ ಪರಂಪರೆಯ ಸರಣಿಯನ್ನು ಈ ಸಾಹಿತ್ಯಗಳಲ್ಲಿ ಕಾಣಬಹುದು. ಓದಿನ ಮೂಲಕ ಇವುಗಳನ್ನು ಅರ್ಥೈಸಿಕೊಂಡು ನಮ್ಮದಾಗಿಸಿಕೊಳ್ಳಬಹುದು,” ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾರದಾ ಕಾಲೇಜಿನ ಪ್ರಾಂಶುಪಾಲ ಡಾ. ಮೀನ ಜೆ. ಪಣಿಕ್ಕರ್ ಮಾತನಾಡಿ, “ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೆಚ್ಚುಗೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ದೃಷ್ಟಿಯಿಂದ ಈ ಕಾರ್ಯಕ್ರಮ ವಿಶಿಷ್ಟವಾದ ಪರಿಕಲ್ಪನೆಯಾಗಿದೆ,” ಎಂದು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು…
ಮಂಗಳೂರು, ಅ.18: ಕೆಲಸಗಳು ಸುಲಭದಲ್ಲಿ ನೆರವೇರುವುದಿಲ್ಲ. ನಿರಂತರ ಹೋರಾಟ, ಪ್ರಯತ್ನ ಹಾಗೂ ಎಲ್ಲರ ಒಗ್ಗಟ್ಟು ಇದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಅವರು ಶುಕ್ರವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ನಿವೃತ್ತ ನೌಕರರ ವೇದಿಕೆ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಭೆಯನ್ನು ಬೆಂಗಳೂರು ಕೇಂದ್ರ ಸಮಿತಿಯು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಜಂಟಿಯಾಗಿ ಆಯೋಜಿಸಿತ್ತು. ಸಿಎಂ ಮನೆ ಮುಂದೆ ಧರಣಿಗೆ ಚಿಂತನೆ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ. ಎಂ.ಪಿ.ಎ. ಷಣ್ಮುಖಯ್ಯ ಮಾತನಾಡಿ, “7ನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಅನುಗುಣವಾಗಿ ನಿವೃತ್ತರಾದ ನೌಕರರಿಗೆ ನ್ಯಾಯ ದೊರೆಯದ ಸ್ಥಿತಿಯು ಉಂಟಾಗಿದೆ. ಇದೊಂದು ಸರಕಾರದಿಂದ ಮಾಡಿದ ಅನ್ಯಾಯ” ಎಂದು ವಿಷಾದ ವ್ಯಕ್ತಪಡಿಸಿದರು. “ಈ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಮೈಸೂರಿನ ಸಿಎಂ ನಿವಾಸ ಎದುರು ಧರಣಿ, ಮತ್ತು ಡಿಸೆಂಬರ್‌ನಲ್ಲಿ ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಪಾದಯಾತ್ರೆ ಮಾಡುವ ಯೋಜನೆಯಿದೆ” ಎಂದರು. “ಆರ್ಥಿಕವಾಗಿ ವಂಚನೆ ನಡೆಯುತ್ತಿದೆ”…
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 31ನೇ ಬಿಜೈ ವಾರ್ಡಿನ ಬಿಜೈ ನ್ಯೂ ರೋಡ್‌ನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಶಾಸಕರಾದ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಶನಿವಾರ ಶಿಲಾನ್ಯಾಸ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ಬಿಜೈ ಕಾಪಿಕಾಡ್‌ನಿಂದ ಆನೆಗುಂಡಿಯವರೆಗೆ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದು ಹೋಗಲು ಅನುಕೂಲವಾಗುವಂತಹ ಉತ್ತಮ ಚರಂಡಿ ಮತ್ತು ಫುಟ್‌ಪಾತ್ ಅಗತ್ಯವಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ಪಕ್ಷದ ಕಾರ್ಯಕರ್ತರು ಹಲವು ಬಾರಿ ಮನವಿ ಮಾಡಿದ್ದರು. ಈ ಬೇಡಿಕೆಗೆ ಸ್ಪಂದನೆ ನೀಡಿದ ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಗಾಗಿ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿತ್ತು,” ಎಂದು ಹೇಳಿದರು. “ಆದರೆ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅನೇಕ ಅಭಿವೃದ್ಧಿ ಕಾಮಗಾರಿಗಳ ಅನುದಾನಗಳನ್ನು ತಡೆಹಿಡಿದ ಕಾರಣ ಈ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಸಚಿವ ಸತೀಶ್ ಜಾರಕಿಹೊಳಿಯವರನ್ನು ಹಲವು ಬಾರಿ…
ಉಡುಪಿ ಜಿಲ್ಲೆಯ ಅಂಬಲಪಾಡಿ ಕಾಳಿಕಾಂಬನಗರದ ಲೇಬರ್ ಕಾಲೋನಿಯಲ್ಲಿ ದುಃಖದ ಘಟನೆ ನಡೆದಿದೆ. ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪವಿತ್ರ (17) ಮತ್ತು ಮಲ್ಲೇಶ (23) ಎಂದು ಗುರುತಿಸಲಾಗಿದೆ. ಇಬ್ಬರೂ ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದವರು. ಪವಿತ್ರ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಮಲ್ಲೇಶ ಕಾಯಕಮಗಾರನಾಗಿದ್ದಾನೆ. ತಾಯಿ ಕೆಲಸಕ್ಕಿದ್ದು, ಮನೆಯಲ್ಲಿಲ್ಲದ ಸಮಯದಲ್ಲಿ, ಬಾಡಿಗೆ ಜೋಪಡಿಯಲ್ಲಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸ್ ಠಾಣೆಯ ಎಸ್‌ಐ ಭರತೇಶ್, ಎಎಸ್‌ಐ ಪರಮೇಶ್ವರ ಕೆ, ಎಎಸ್‌ಐ ರಮೇಶ್ ಹಾಗೂ ಮುಖ್ಯ ಆರಕ್ಷಕ ಜಯಕರ ಭೇಟಿ ನೀಡಿ ಕಾನೂನು ಕ್ರಮ ಜರಗಿಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಮೃತದೇಹಗಳನ್ನು ನೇಣಿನಿಂದ ಇಳಿಸಿ, ಅಂಬುಲೆನ್ಸ್ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣವನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಂಗಳೂರು, ಅ.16 – ಶ್ರೀ ಬಾರ್ಕೂರು ಮಹಾ ಸಂಸ್ಥಾನ ಭಾರ್ಗವ ಬೀಡು ಸಂಸ್ಥಾನದ ದಶಮ ಸಂಭ್ರಮದ ಅಂಗವಾಗಿ “ಬಂಟ ಸಂಸ್ಕೃತಿ ಪರಂಪರೆ ಅನಾವರಣ” ಕಾರ್ಯಕ್ರಮ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭವು ಅಕ್ಟೋಬರ್ 19, ಭಾನುವಾರ ಸಂಜೆ 3 ಗಂಟೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿನ ವಿ.ಕೆ. ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ ಎಂದು ಮಹಾಮಂಡಲದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದ್ದಾರೆ. ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಮಹತ್ವದ ಕಾರ್ಯಕ್ರಮದಲ್ಲಿ ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಪರಮಪೂಜ್ಯ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರ ದಿವ್ಯ ಉಪಸ್ಥಿತಿ ಇರಲಿದೆ ಎಂದು ತಿಳಿಸಿದ್ದಾರೆ. ಪ್ರಮುಖ ಅತಿಥಿಗಳು:• ಉದ್ಘಾಟನೆ: ಡಾ. ಕೆ. ಪ್ರಕಾಶ್ ಶೆಟ್ಟಿ, ಆಡಳಿತ ನಿರ್ದೇಶಕರು, ಎಂಆರ್‌ಜಿ ಗ್ರೂಪ್, ಬೆಂಗಳೂರು• ಅಧ್ಯಕ್ಷತೆ: ಡಾ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಸಿಎಂಡಿ, ಹೇರಂಭಾ ಇಂಡಸ್ಟ್ರೀಸ್, ಮುಂಬೈ• ದಶಮ ಸಂಭ್ರಮ ಸಂಕಲ್ಪ ಅನಾವರಣ: ಶಶಿಧರ ಶೆಟ್ಟಿ ಬರೋಡ,…
ಮಂಗಳೂರು: ಧ್ವನಿ ಬೆಳಕು ಮಾಲಕರ ಸಂಘ, ಮಂಗಳೂರು ತಾಲೂಕು, ಕಾವೂರ್ ವಲಯದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೇ ನಡೆದ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಸಂಘದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಲು ನೂತನ ತಂಡ ತಾವು ಸಜ್ಜು ಎಂಬುದಾಗಿ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳ ವಿವರ ಹೀಗಿದೆ:• ಗೌರವ ಅಧ್ಯಕ್ಷರು: ದಾಮೋದರ್ ಭಾಗವತ್• ಅಧ್ಯಕ್ಷರು: ಒಸ್ವಾಲ್ಡ್ ಪಿಂಟೋ ಬೊಂದೆಲ್• ಉಪಾಧ್ಯಕ್ಷರು: ಶೇಖರ್ ಸಪಲಿಗ ಬಜ್ಪೆ• ಕಾರ್ಯದರ್ಶಿ: ಪ್ರಶಾಂತ್ ಮುಲ್ಲಕಾಡ್• ಸಹ ಕಾರ್ಯದರ್ಶಿ: ಕೀರ್ತನ್ ಕೊಂಚಾಡಿ• ಕೋಶಾಧಿಕಾರಿ: ಪ್ರಸಾದ್ ರೈ ಕಾವೂರ್ ಸಂಘಟನ ಕಾರ್ಯದರ್ಶಿಗಳಾಗಿ ಈ ಮಂದಿ ಆಯ್ಕೆಯಾಗಿದ್ದಾರೆ:• ರಮೇಶ್ ಶೆಟ್ಟಿ ಎಕ್ಕಾರ್• ರಂಜಿತ್ ದಾಸ್ ಬಜ್ಪೆ• ತೇಜಸ್ ಬಜ್ಪೆ• ಗುರುನಂದನ್ ಕೋಡಿಕಲ್• ಸರ್ವೋತ್ತಮ ಶೆಣೈ ಗೌರವ ಸಲಹೆಗಾರರು:• ಅನಿಲ್ ಮಿಸ್ಕಿತ್• ಲೋಕನಾಥ್• ಮಾದವ ಪರಿಮಳ ಪ್ರಸಾದ್ ಸಂಘದ ಪದಾಧಿಕಾರಿಗಳಿಗೆ ಹಾರೈಕೆಗಳನ್ನು ತಿಳಿಸಿ, ಸಮುದಾಯದ ಉತ್ತಮ ಸೇವೆಗೆ ಮುಂದಾಗುವಂತೆ ಸ್ಥಳೀಯರು ಆಶಿಸಿದ್ದಾರೆ.
ದುಬೈ: ಯುಎಇಯಲ್ಲಿ ಹಲವು ವರ್ಷಗಳಿಂದ ನಾಟಕಾಭಿಮಾನಿಗಳಿಗೆ ಮನರಂಜನೆಯ ಪ್ಲಾಟ್‌ಫಾರ್ಮ್ ನೀಡುತ್ತಿರುವ ‘ಗಮ್ಮತ್ ಕಲಾವಿದೆರ್ ದುಬೈ’ ತಂಡದ 14ನೇ ವಾರ್ಷಿಕೋತ್ಸವದ ಅಂಗವಾಗಿ ಹೊಸ ತುಳು ನಾಟಕ “ಪೋನಗ ಕೊನೊಪರಾ..?” ಅಕ್ಟೋಬರ್ 11ರಂದು ನಗರದ ಎಮಿರೇಟ್ಸ್ ಥೀಯೇಟರ್, ಉಮ್ ಅಲ್ ಸೈಫ್ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಮೊದಲ ಪ್ರದರ್ಶನದಲ್ಲೇ ಈ ನಾಟಕವು “ಹೌಸ್ ಫುಲ್ ಶೋ” ಆಗಿ ವಿಶೇಷ ಶ್ಲಾಘನೆಗೆ ಪಾತ್ರವಾಯಿತು. ನಾಟಕದ ಕಥೆಯನ್ನು ದಿನಕರ್ ಭಂಡಾರಿ ಕಣಂಜರ್ ಅವರು ಬರೆದು, ನಿರ್ದೇಶನವನ್ನು ರಂಗ ನಿರ್ದೇಶಕ ವಿಶ್ವನಾಥ ಶೆಟ್ಟಿ ಮಾಡಿದ್ದು, ರಂಗಪಟು ಜಗದೀಶ್ ಶೆಟ್ಟಿ ಕೆಂಚನಕೆರೆ ಅವರ ರಚನೆ ಈ ನಾಟಕಕ್ಕೆ ಹೊಸಬಗೆಯ ಸೃಜನಾತ್ಮಕತೆಯನ್ನು ನೀಡಿದೆ. ಕಾರ್ಯಕ್ರಮದ ಪ್ರಮುಖ ಅತಿಥಿಗಳು: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು. ಇವರಲ್ಲಿ:• ಪ್ರಖ್ಯಾತ ಉದ್ಯಮಿ ಡಾ. ಬಿ.ಆರ್. ಶೆಟ್ಟಿ• ಮುಂಬೈನ ಖ್ಯಾತ ಜ್ಯೋತಿಷ್ಯರು• ಸೈನ್ ಕನ್ನಡ ಸಂಘದ ಅಧ್ಯಕ್ಷ ಡಾ. ಎಂ.ಜೆ. ಪ್ರವೀಣ್ ಭಟ್• ಖ್ಯಾತ ಮುಳುಗು ತಜ್ಞ, ಸಮಾಜಸೇವಕ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
