ಹುಬ್ಬಳ್ಳಿ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ದರೋಡೆ,ಕಳ್ಳತನ,ಮೀಟರ್ ಬಡ್ಡಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ರಾಜ್ಯ ಸರಕಾರ ಹಾಗೂ ಪೋಲಿಸ್ ಇಲಾಖೆಯು ಕಣ್ಣುಮುಚ್ಚಿ ಕುಳಿತ್ತಂತಿದೆ.ರಾಜ್ಯದಲ್ಲಿ ಬಡ್ಡಿ ದಂಧೆಕೊರರ ಅವಳಿ ಹೆಚ್ಚಾಗಿದ್ದು ಚಾಮರಾಜನಗರ, ಮಂಡ್ಯದಲ್ಲಿ ಹಲವು ಕುಟುಂಬಗಳು ಊರು ಬಿಟ್ಟು ಹೋಗಿವೆ. ಈ ಮೀಟರ್ ಬಡ್ಡಿ ದಂಧೆಕೊರರನ್ನು ಕಡಿವಾಣ ಹಾಕದಿದ್ದರೆ ಜನರು ಇನ್ನಷ್ಟು ಪ್ರಾಣ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ .
ಮೀಟರ್‌ಬಡ್ಡಿ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಇಲ್ಲಿ ಹುಬ್ಬಳ್ಳಿ ಬೈಪಾಸ್‌ನ ಧಾರಾವತಿ ಹನುಮಪ್ಪನ ದೇವಸ್ಥಾನ ಬಳಿ ಬೈಕ್ ಬೈಕ್ ಚಲಾಯಿಸುತ್ತಿರುವಾಗಲೇ ಚಲಾಯಿಸುತ್ತಿರುವಾಗಲೇ ಲಾರಿ ಚಕ್ರದಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಉಣಕಲ್ ನಿವಾಸಿ ಸಿದ್ದಪ್ಪ ಕೆಂಚಣ್ಣವರ(43) ಮೃತ ದುರ್ದೈವಿ. ನಗರದ ಮಹೇಶ ಚಿಕ್ಕವೀರಮಠ ಎಂಬುವರ ಬಳಿ 7 ವರ್ಷ ಹಿಂದೆ ₹10 ಲಕ್ಷ ಸಾಲ ಪಡೆದಿದ್ದರು. ಬಡ್ಡಿ ಸೇರಿ ₹65 ಲಕ್ಷ ವಾಪಸ್ ಮಾಡಿದ್ದರು. ಬೆಂಬಿಡದೇ ಬಡ್ಡಿ, ಅಸಲು ನೀಡುವಂತೆ ಮಹೇಶ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಸಿದ್ದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.ಈ ಬಗ್ಗೆ ಮೃತನ ಕುಟುಂಬಸ್ಥರು ಪೊಲೀಸ್ ಕಮಿಷನರ್ ರವರಿಗೆ ದೂರು ನೀಡಿದ್ದು ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ .