- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ದಿನಾಂಕ 16-08-2025 ರಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರನ್ನು ಮಂಗಳೂರಿನ ಕೇಂದ್ರೀಯ ಮಂಡಳಿ ಕಚೇರಿಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಜೊತೆ ಭೇಟಿ ಮಾಡಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆ ಗುರುತಿಸಿ. ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದು. ತುಳುನಾಡ ರಕ್ಷಣಾ ವೇದಿಕೆ ಸೇರ್ಪಡೆ ಗೊಂಡ ಬಳಿಕ ತುಳುನಾಡಿನ ದೈವ ದೇವರುಗಳ ದಯೆಯಿಂದ ಬಹಳಷ್ಟು ಗೆಲುವು ಮತ್ತು ಪ್ರಶಸ್ತಿಗಳು ನನ್ನ ಹುಡುಕಿಕೊಂಡು ಬಂದಿವೆ. ಹೆಚ್ಚಿನ ಬೆಂಬಲ ಕೂಡ ದೊರೆಯುತ್ತಿದೆ. ಬಹಳಷ್ಟು ಜನರು ಸಂಘಟನೆಗೆ ಸೇರುತ್ತಿದ್ದಾರೆ. ಈ ಹಿಂದೆ ನನ್ನ ಏಳಿಗೆಗೆ ತನ್ನ ಜೊತೆ ನಿಂತು ಬೆಂಬಲಿಸಿ, ಪ್ರೋತ್ಸಾಹಿಸಿ, ಆಶೀರ್ವಾದಿಸಿದೀರಿ ಇನ್ನೂ ಮುಂದಕ್ಕೂ ಸದಾ ಆಶೀರ್ವಾದವಿರಲಿ ಎಂದು ಸತೀಶ್ ಖಾರ್ವಿ ಯವರು ಯೋಗೀಶ್ ಶೆಟ್ಟಿ ಜಪ್ಪು ರವರ ಬಳಿ ತಿಳಿಸಿದಾಗ “ತಾವು ತಮ್ಮ ಪ್ರಾಮಾಣಿಕ ಪ್ರಯತ್ನ ದಿಂದಾಗಿ ನೀವು ಇಷ್ಟು ಎತ್ತರಕ್ಕೆ ಬೆಳೆದಿದ್ದೀರಿ ತಾವು ಇದೇ ರೀತಿ ಮುಂದುವರೆದರೆ ದೇವರ ಆಶೀರ್ವಾದ…
ಮುಂಬಯಿ: ‘ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದ ಯಕ್ಷಗಾನವಿಂದು ಜಗದಗಲ ತನ್ನ ಪ್ರಭಾವವನ್ನು ಬೀರಲು ಅಲ್ಲಲ್ಲಿ ನೆಲೆಸಿರುವ ಕಲಾಸಕ್ತರು ಮತ್ತು ಕರಾವಳಿ ಮೂಲದ ಸಂಘ – ಸಂಸ್ಥೆಗಳು ಪ್ರಮುಖ ಕಾರಣವೆನ್ನಬಹುದು. ಇದರಲ್ಲಿ ಮಠ – ಮಂದಿರಗಳ ಕೊಡುಗೆಯೂ ಅಪಾರ. ದೇಶ ವಿದೇಶಗಳಲ್ಲಿರುವ ಪ್ರಸಿದ್ಧ ಸಂಸ್ಥಾನಗಳ ಶಾಖಾಮಠಗಳು ಯಕ್ಷಗಾನಕ್ಕೆ ವಿಶೇಷ ಪ್ರೋತ್ಸಾಹ ನೀಡಿವೆ. ಈ ನಿಟ್ಟಿನಲ್ಲಿ ಚೆಡ್ಡಾನಗರ ಶ್ರೀ ಸುಬ್ರಮಣ್ಯ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಾರ್ಹವೆನಿಸಿವೆ. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ಸ್ವಾಮೀಜಿರ ಮಾರ್ಗದರ್ಶನ ಮತ್ತು ಆರಿಕ್ಕಾಡಿ ಅಶೋಕ ಭಟ್ಟರಂತಹ ಸಂಸ್ಕೃತಿ ಪ್ರಿಯರ ಕಾರ್ಯಶೀಲತೆಯಿಂದ ಇದು ಸಾಧ್ಯವಾಗಿದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಚೆಂಬೂರು ಪಶ್ಚಿಮದ ಚೆಡ್ಡಾ ನಗರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24ನೇ ತಾಳಮದ್ದಳೆ ಸರಣಿ ಅಂಗವಾಗಿ ಆಗಸ್ಟ್ 14ರಂದು ಜರಗಿದ ‘ಶ್ರೀರಾಮ…
ಅಟಲ್ ಬಿಹಾರಿ ವಾಜಪೇಯಿ ಆಟೋ ರಿಕ್ಷಾ ಪಾರ್ಕ್ ಏರ್ಪೋರ್ಟ್ ಗೇಟ್ ಕೆಂಜಾರು ಇದರ ನೂತನ ಪದಾಧಿಕಾರಿಗಳು ಅಧ್ಯಕ್ಷರಾಗಿ ರಾಕೇಶ್ ಪೂಜಾರಿ ಕೆಂಜಾರು,ಉಪಾಧ್ಯಕ್ಷರಾಗಿ ಧನರಾಜ್ ಪೂಜಾರಿ,ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ,ಜೊತೆ ಕಾರ್ಯದರ್ಶಿಯಾಗಿ ಸಂದೀಪ್ ಪೂಜಾರಿ,ಕೋಶಾಧಿಕಾರಿ ಯಾಗಿ ಚಂದ್ರಶೇಖರ್,ಖಜಾಂಚಿಯಾಗಿ ದಯಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ
79 ನೇ ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಬಜ್ಪೆ ಪಟ್ಟಣ ಪಂಚಾಯತಿನ 4ನೇ ವಾರ್ಡಿನ ಕಿನ್ನಿಪದವು ಝರಾ ಸೆಂಟರ್ ಮುಂದುಗಡೆ “ಗಾಂಧಿ ಪಾರ್ಕ್”ಹೆಸರಿನಲ್ಲಿ ಉದ್ಯಾನವನವನ್ನು ಬಜ್ಪೆ ಲೆಜೆಂಡ್ಸ್ ಟ್ರಸ್ಟ್ (ರಿ) ಇವರ ನಿರ್ವಹಣೆಯೊಂದಿಗೆ ಮುಡಾ ಆಯುಕ್ತರಾದ ಮೊಹಮದ್ ನಜೀರ್ ರವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಈ ಉದ್ಯಾನವನಕ್ಕೆ ಮುಡಾದಿಂದ ಬೇಕಾಗುವ ಮೂಲ ಸೌಕರ್ಯಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು .ವಾರ್ಡಿನ ಮಾಜಿ ಸದಸ್ಯರು,ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರು ಮತ್ತು ಈ ಉದ್ಯಾನವನದ ಮೂಲ ಕಾರಣೀಕರ್ತರಾದ ಸಿರಾಜ್ ಬಜ್ಪೆ ಮಾತನ್ನಾಡಿ,ಪಾಲು ಬಿದ್ದ ಈ ಪಾರ್ಕಿನ ಅಭಿವೃದ್ದಿಗಾಗಿ,ಈ ಭಾಗದ ಜನರ ಬೇಡಿಕೆಗೆ ಅನುಗುಣವಾಗಿ ನಿರ್ವಹಣೆ ಮಾಡಲು ಮುಂದೆ ಬಂದಿರುವ ಬಜ್ಪೆ ಲೆಜೆಂಡ್ಸ್ ಟ್ರಸ್ಟ್ (ರಿ )ರವರ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಅಭಿನಂದಿಸಿದರು.ಈ ಸಂದರ್ಭದಲ್ಲಿ ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ನ ಅಧ್ಯಕ್ಷರಾದ ಮೊಹಮದ್ ಶಾಫಿ,ಪ್ರಧಾನಕಾರ್ಯದರ್ಶಿಯಾದ ಅಖ್ತರ್ ಬ್ರೈಟ್,ಅನಿವಾಸಿ ಭಾರತೀಯ ಉದ್ಯಮಿ ಹೈದರ್ ಅಲಿ ಯುನೈಟೆಡ್ ಹಿರಿಯರಾದ ಮೊನಕ, ಬಜ್ಪೆ ಲೆಜೆಂಡ್ಸ್ ಟ್ರಸ್ಟ್ ನ ಸದಸ್ಯರಾದ ಅಲ್ತಾಫ್ ,ಹಕೀಮ್…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ 79 ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತ ರಾಮ ದೇವಾಡಿಗ ಅವರ ಸ್ಮರಣಾರ್ಥ ಕೊಡುಗೆಯಾಗಿ ನಿರ್ಮಿಸಲಾಗಿರುವ ಹೊಸ ಧ್ವಜಾಸ್ತಂಭವನ್ನು ಅವರ ಧರ್ಮಪತ್ನಿ ಸೀತಾ ದೇವಾಡಿಗರವರು ಉದ್ಘಾಟಿಸಿದರು. SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗರವರು ಧ್ವಜಾರೋಹಣ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿವಂಗತ ರಾಮ ದೇವಾಡಿಗರ ಸ್ಮರಣಾರ್ಥ ಶಾಲೆಗೆ ನೂತನ ಧ್ವಜಸ್ತಂಭವನ್ನುನಿರ್ಮಿಸಿ ಕೊಟ್ಟ ಸೀತಾ ದೇವಾಡಿಗ ಹಾಗೂ ಅವರ ಕುಟುಂಬವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಕೋರ್ದಬ್ಬು ದೈವಸ್ಥಾನ ಕರಂಬಾರು ನ ಅಧ್ಯಕ್ಷರಾದ ಜಗನಾಥ್ ಸಾಲ್ಯಾನ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಣ್ ಬಂಗೇರ, ನಮ್ಮ ಕ್ಲಿನಿಕ್ ಮಳವೂರಿನ ವೈದ್ಯಾಧಿಕಾರಿ ಡಾ! ಸಮೀಕ್ಷಾ ಡಿ. ಪಿ , ನಮ್ಮ ಜವನೆರ್ ಕರಂಬಾರು ಅಧ್ಯಕ್ಷರಾದ ರಮೇಶ್ ಸುವರ್ಣ, ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ, ಓಂಕಾರ್ ಫ್ರೆಂಡ್ಸ್ ಕ್ಲಬ್…
ಸರಕಾರಿ ಶಾಲೆಯ ವಿದ್ಯಾರ್ಥಿಯೆಂಬ ಕೀಳರಿಮೆ ಬೇಡ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭೆಯ ಆಗರ ಎಂದು ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಭಾರತೀಯ ಭೂಸೇನೆಯ ಅಧಿಕಾರಿ ಜೂನಿಯರ್ ಕಮಿಷನೇಡ್ ಶ್ರೀ ವಸಂತ ಪೂಜಾರಿಯವರು ಸರಕಾರಿ ಪ್ರೌಢಶಾಲೆ ಮಣಿನಾಲ್ಕೂರಿನಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ಹಾಗೆಯೇ ದೇಶ ಸೇವೆಯೇ ಈಶ ಸೇವೆ , ದೇಶಭಕ್ತರಾಗಿ ಬಾಳಿ ಎಂದು ಕರೆಕೊಟ್ಟರು. ಈ ಶುಭ ಸಮಾರಂಭದಲ್ಲಿ ವಿದ್ಯಾಭಿಮಾನಿಯೊಬ್ಬರು ಎಲ್ಲಾ ವಿದ್ಯಾರ್ಥಿಗಳಿಗೆ ರೂ18000 ಮೌಲ್ಯದ ಊಟದ ಬಟ್ಟಲನ್ನು ದೇಣಿಗೆ ನೀಡಿದರು. ತಮ್ಮ ಮಕ್ಕಳು ಈ ಸಂಸ್ಥೆಯಲ್ಲಿ ಕಲಿತ ಸವಿನೆನಪಿಗಾಗಿ ಊಟದ ಬಟ್ಟಲಿಡುವ ರೂ. 31000 ಮೌಲ್ಯದ ಸ್ಟಿಲ್ ಸ್ಟ್ಯಾಂಡನ್ನು ಶ್ರೀಯುತ ರಂಜಿತ್ ಕುಟುಂಬದವರು ನೀಡಿದರು. ಹಾಗೆಯೇ ನಮ್ಮ ಸಂಸ್ಥೆಯ 2024 – 25ನೇ ಸಾಲಿನ ಎಸ್.ಎಸ್.ಎಲ್. ಸಿ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮಗಳಿಗೆ ಅಗತ್ಯವಿರುವ ರೂ14000 ಮೌಲ್ಯದ ಪೋಡಿಯಂನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಅಶೋಕ ಶೆಟ್ಟಿ…
ಸ್ವಾತಂತ್ರ್ಯ ಹೋರಾಟಗಾರರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಹಾಗೂ ತುಳುನಾಡ ರಕ್ಷಣಾ ವೇದಿಕೆ ಸಹಯೋಗದೊಂದಿಗೆ ದಿನಾಂಕ 15-08-2025 ರಂದು ಬೆಳಗ್ಗೆ 10.30 ಕ್ಕೆ ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮುಂಭಾಗದಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಶಾಸಕ ವೇದವ್ಯಾಸ್ ಕಾಮತ್ ಸಮರವೀರ ರಾಮಯ್ಯರ ತ್ಯಾಗ ಬಲಿದಾನದ ಬಗ್ಗೆ ಮಾತನಾಡಿದರು. ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ಅವರು ರಾಮಯ್ಯ ಗೌಡರ ವೀರ ಮರಣದ ವಿಚಾರವನ್ನು ತಿಳಿಸಿದರು. ವಿಶ್ವ ಶ್ರೇಷ್ಠ ಕಾರು ಕಂಪನಿ ರೋಲ್ಸ್ ರೋಯ್ ಕಾರ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕು ರೀತು ಪರ್ಣಳಿಗೆ ಸನ್ಮಾನಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಅಧ್ಯಕ್ಷೆ ಸೌಮ್ಯ ಸುಕುಮಾರ್ ಭಾಗವಹಿಸಿದ್ದರು. ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಸುರೇಶ್ ಬೈಲು, ಮೋಹನ್ ಕಲ್ಮಂಜ , ಬಾಲಕೃಷ್ಣ ಬಿ, ಕೃಷ್ಣಪ್ಪ ಬಿ,…
ಮಂಗಳೂರು: ಶುಕ್ರವಾರ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸಲಾಯಿತು. ಮಂಗಳೂರಿನ ನೆಹರು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮಿಬಾಯಿ ಅವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಂಡು, ಏಕತೆ ಮತ್ತು ಪ್ರಗತಿಗೆ ಒತ್ತು ನೀಡಿದರು. ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಾದ ಗೃಹ ಲಕ್ಷ್ಮಿ (3.79 ಲಕ್ಷ ಮಹಿಳೆಯರಿಗೆ ₹1,377 ಕೋಟಿ ವಿತರಣೆ), ಯುವ ನಿಧಿ (5,283 ಯುವಕರಿಗೆ ₹9.54 ಕೋಟಿ ನೆರವು), ನೂತನ ಸೇತುವೆ ನಿರ್ಮಾಣ (₹200 ಕೋಟಿ), ಮತ್ತು ಆರೋಗ್ಯ ಯೋಜನೆಗಳಾದ ಹೃದಯ ಜ್ಯೋತಿ (33,356 ಇಸಿಜಿಗಳನ್ನು ನಡೆಸಲಾಗಿದೆ) ಬಗ್ಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಭಾಗಣ್ಣ ವಾಲಿಕರ್ ನೇತೃತ್ವದಲ್ಲಿ ಪೊಲೀಸ್, ಅಗ್ನಿಶಾಮಕ ದಳ ಮತ್ತು ತುರ್ತು ಘಟಕಗಳ ಗೌರವ ಸಮೇತ ಮೆರವಣಿಗೆ ನಡೆಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಆರು…
ಇತ್ತೀಚೆಗೆ ಕರ್ನಾಟಕ ಸರ್ಕಾರವು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಕಂಕನಾಡಿ ನಗರ ಪೊಲೀಸ್ ಠಾಣೆ ಮತ್ತು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಮರುಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಈ ಬದಲಾವಣೆಗಳು ಆಗಸ್ಟ್ 15, 2025 ರಿಂದ ಜಾರಿಗೆ ಬರಲಿವೆ.ಪ್ರಮುಖ ಬದಲಾವಣೆಗಳು:ಕಂಕನಾಡಿ ನಗರ ಪೊಲೀಸ್ ಠಾಣೆಯಿಂದ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗೆ ವರ್ಗಾವಣೆ:ಕಂಕನಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಪದವು ಗ್ರಾಮದ ಪ್ರದೇಶಗಳಾದ ಕುಲಶೇಖರ, ಸಿಲ್ವರ್‌ಗೇಟ್, ಡೈರಿ ಗೇಟ್, ಕುಲಶೇಖರ ಚೌಕಿ, ಪದವಿನಂಗಡಿ, ಗುರುನಗರ, ಮೇರಿಹಿಲ್, ಕೊಪ್ಪಲಕಾಡು, ಬಾಂದೋಟ್ಟು ಯೆಯ್ಯಾಡಿ, ದಂಡಕೇರಿ, ಶಕ್ತಿನಗರ, ನೀತಿ ನಗರ, ಪೊಲೀಸ್ ಲೇನ್, ಪ್ರೀತಿನಗರ, ಸಂಜಯ ನಗರ, ಮುಗೋಡಿ, ಕಾರ್ಮಿಕ ಕಾಲೋನಿ, ಕೆಹೆಚ್‌ಬಿ, ನಾಲ್ಯಪದವು, ಗಂಧಕಾಡು, ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯಾ, ರಾಜೀವ ನಗರ, ಮುತ್ತಪ್ಪ ಗುಡಿ, ಕಕ್ಕೆಬೆಟ್ಟು, ಮಂಜಡ್ಕ, ದತ್ತ ನಗರ, ಮತ್ತು ಸಿದ್ಧ ಪಡ್ಡು ಇನ್ನು ಮುಂದೆ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಲಿವೆ.ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್…
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ (ರಿ) ಹಾಗೂ ತುಳುನಾಡ ರಕ್ಷಣಾ ವೇದಿಕೆ (ರಿ) ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ದಿನಾಂಕ 15-08-2025 ರಂದು ಶುಕ್ರವಾರ ಪೂರ್ವಾಹ್ನ 10.30 ಕ್ಕೆ ಬಾವುಟ ಗುಡ್ಡೆ ಮುಂಭಾಗದಲ್ಲಿ ನಡೆಯಲಿದೆ. ಜಿಲ್ಲೆಯ ಸಚಿವರು, ಮಾಜಿ ಸಚಿವರು, ಸಂಸತ್ ಸದಸ್ಯರು, ಶಾಸಕರು, ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸರ್ವರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕಿರಣ್ ಬುಡ್ಲೆಗುತ್ತು ಮತ್ತು ಯೋಗೀಶ್ ಶೆಟ್ಟಿ ಜಪ್ಪು ರವರು ವಿನಂತಿಸಿದ್ದಾರೆ.
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
