- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಆಡಳಿತ ಮಂಡಳಿ ರಚನೆಯಾಗಿದೆ. ಹಿರಿಯ ಪತ್ರಕರ್ತ ಹಾಗೂ ವಿಜಯ ಕರ್ನಾಟಕ ವರದಿಗಾರ ಸುಬ್ರಹ್ಮಣ್ಯ ಜಿ.ಭಟ್ (ಸುಜಿ ಕುರ್ಯ) ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರೊಂದಿಗೆ ನಝೀರ್ ಪೊಲ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹರೀಶ್ ಕುಂದರ್ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ವಾರ್ತಾಧಿಕಾರಿ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಪ್ರಭಾಕರ ಆಚಾರ್ಯ ಚಿತ್ತೂರು, ಉದಯ ಕುಮಾರ್ ಮುಂಡ್ಕೂರು ಮತ್ತು ಉದಯ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಗಳಾಗಿ ಉಮೇಶ್ ಮಾರ್ಪಳ್ಳಿ, ಸುರೇಶ್ ಎಮಾರ್ಳ್ ಮತ್ತು ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ ಅವಿರೋಧವಾಗಿ ಆಯ್ಕೆಯಾದರು. ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮೂವರು ಸ್ಪರ್ಧಿಸಿದ್ದರು. ಅದರಲ್ಲಿ ಉದಯವಾಣಿ ಫೋಟೋ ಜರ್ನಲಿಸ್ಟ್ ಆಸ್ಟ್ರೋ ಮೋಹನ್ ಅವರು 44 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಪ್ರಜ್ವಲ್ ಅಮೀನ್, ಜನಾರ್ದನ ಕೊಡವೂರು, ಚೇತನ್ ಮಟಪಾಡಿ, ಮುಹಮ್ಮದ್ ಶರೀಫ್, ರಮಾನಂದ ಅಜೆಕಾರು, ಯೋಗೀಶ್…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ರವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯನಿರತ ಪತ್ರಕರ್ತರ ಸಂಘ ದ.ಕ ಜಿಲ್ಲೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಪಡೆದ ಮತಗಳು ಈ ಕೆಳಗಿನಂತಿವೆ: 🗳️ ಆಡಳಿತ ಮಂಡಳಿ ಸದಸ್ಯರ ಫಲಿತಾಂಶ 🏅 ಉಪಾಧ್ಯಕ್ಷರಾಗಿ ಆಯ್ಕೆಯಾದವರು ಮುಹಮ್ಮದ್ ಆರೀಫ್ ವಿಲ್ಪ್ರೆಡ್ ಡಿಸೋಜ ರಾಜೇಶ್ ಶೆಟ್ಟಿ 📰 ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಪುಷ್ಪರಾಜ್ ಬಿ.ಎನ್ – 187 ಮತಗಳು ಶ್ರವಣ್ – 144 ಮತಗಳು ➡️ ಈ ಮೂಲಕ ಪುಷ್ಪರಾಜ್ ಬಿ.ಎನ್ ಅವರು ಅತಿ ಹೆಚ್ಚು ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ✍️ ಕಾರ್ಯದರ್ಶಿ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಸಿದ್ದೀಕ್ ನೀರಾಜೆ – 165 ರಾಜೇಶ್ ಕುಮಾರ್ ಡಿ. – 139 ಸುರೇಶ್ ಡಿ. ಪಳ್ಳಿ – 218 ಸತೀಶ್ ಇರಾ – 256 ಸತೀಶ್ ಇರಾ ಅವರು ಅತಿ…
ಮ.ನ.ಪಾ. ವ್ಯಾಪ್ತಿಯ 58 ನೇ ಬೋಳಾರ ವಾರ್ಡಿನ ಮುಳಿಹಿತ್ಲುವಿನಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ಇಲ್ಲಿನ ರಸ್ತೆ ಅಗಲೀಕರಣದ ಅವಶ್ಯಕತೆ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರು, ಸಾರ್ವಜನಿಕರು, ಹಲವು ಸಮಯದಿಂದ ಬೇಡಿಕೆಯಿಟ್ಟಿದ್ದರು. ಆ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ ಪಾಲಿಕೆಯ ಪ್ರೀಮಿಯಂ ಎಫ್.ಎ.ಆರ್ ಅನುದಾನವನ್ನು ಬಳಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಶೀಘ್ರದಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದೇನೆ ಎಂದರು. ಮಾಜಿ ಉಪ ಮೇಯರ್ ಭಾನುಮತಿ ಪಿ.ಎಸ್, ನಿಕಟಪೂರ್ವ ಪಾಲಿಕೆ ಸದಸ್ಯೆ ರೇವತಿ ಶೆಟ್ಟಿ, ಸ್ಥಳೀಯ ಬಿಜೆಪಿ ಪ್ರಮುಖರಾದ ದೀಪಕ್ ಪೈ, ಅಮಿತ್ ಶೆಟ್ಟಿ, ಪ್ರಸಾದ್ ಬೋಳಾರ, ಉಮಾನಾಥ ಕೋಟೆಕಾರ್, ಗಿರೀಶ್ ಶೆಟ್ಟಿ, ದಿನೇಶ್ ಶೆಟ್ಟಿ, ಕೇಶವ ಶೆಟ್ಟಿ, ಸುಜಾತ ಆಳ್ವ, ಜಯಶ್ರೀ, ಶಬರಿ ಶೆಟ್ಟಿ, ಜಯಶ್ರೀ ಕೊಟ್ಟಾರಿ, ಗಾಯತ್ರಿ, ವಿವೇಕ್ ಶೆಟ್ಟಿ, ಬಿಜೆಪಿ…
ಮಂಗಳೂರು: ಬಹುಕೋಟಿ ಸಾಲ ವಂಚನೆ ಹಗರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ED) ಹೊಸ ಹೆಜ್ಜೆ ಇಟ್ಟಿದೆ. ಮಂಗಳೂರು ಮೂಲದ ಉದ್ಯಮಿ ರೋಶನ್ ಸಲ್ದಾನಾ ಅವರ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ, ಸುಮಾರು ₹2.85 ಕೋಟಿ ಮೌಲ್ಯದ ಆಸ್ತಿಗಳನ್ನು ಇಡಿ ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ವಾರದ ಆರಂಭದಲ್ಲಿ ಮಂಗಳೂರು ಉಪವಲಯ ಕಚೇರಿಯ ಇಡಿ ಅಧಿಕಾರಿಗಳು ಸಲ್ದಾನಾ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿದ್ದ ವಸತಿ ಆಸ್ತಿ ಮತ್ತು ಅನೇಕ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಗಳಲ್ಲಿ, ಸಲ್ದಾನಾ ದೇಶದ ವಿವಿಧ ಭಾಗಗಳಲ್ಲಿ ಶ್ರೀಮಂತ ಹೂಡಿಕೆದಾರರು ಹಾಗೂ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು “ಹೆಚ್ಚು ಮೌಲ್ಯದ ವಿಶೇಷ ಸಾಲಗಳು” ನೀಡುವುದಾಗಿ ಭರವಸೆ ನೀಡಿ, ನೂರಾರು ಕೋಟಿಗಳ ವಂಚನೆ ನಡೆಸಿದ್ದಾರೆ ಎಂಬ ಆರೋಪಗಳು ದೃಢಪಟ್ಟಿವೆ. ಇಡಿ ಮೂಲಗಳ ಪ್ರಕಾರ, “ಆರೋಪಿಗಳು ನೂರಾರು ಕೋಟಿ ಮೌಲ್ಯದ ಸಾಲಗಳನ್ನು ಒದಗಿಸುವುದಾಗಿ ಹೇಳಿ, ಪ್ರತಿ ಗ್ರಾಹಕರಿಂದ 5 ರಿಂದ 10 ಕೋಟಿ ರೂ.ಗಳ ಮುಂಗಡ ಮೊತ್ತವನ್ನು ಸಂಗ್ರಹಿಸಿದರು. ಆದರೆ ಯಾವುದೇ ಸಾಲಗಳು…
ವಾಮಂಜೂರು: ಖ್ಯಾತ ಉದ್ಯಮಿ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಹಾಗೂ ಯುವ ಉದ್ಯಮಿ ಅಭಿಷೇಕ್ ಆಳ್ವ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ನವೆಂಬರ್ 6ರಂದು ಮಧ್ಯಾಹ್ನ ಬಪ್ಪನಾಡು ಸೇತುವೆ ಬಳಿ ಅವರ ಕಾರು ಪತ್ತೆಯಾಗಿದ್ದು, ಬಳಿಕ ಅವರು ನಾಪತ್ತೆಯಾಗಿದ್ದರು. ಶೋಧ ಕಾರ್ಯ ನಡೆಸಿದ ಬಳಿಕ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಲಭ್ಯವಾಗಲಿದೆ.
“ ಸಹಕಾರ ಸಪ್ತಾಹ” ಅಂಗವಾಗಿ ತೌಳವ ಸಹಕಾರ ಮಾಣಿಕ್ಯ ಪ್ರಶಸ್ತಿ” ಹಾಗೂ “ತೌಳವ ಸಹಕಾರ ರತ್ನ ಪ್ರಶಸ್ತಿ” ಗೆ ಆರ್ಜಿ ಆಹ್ವಾನ
ಸಹಕಾರ ಕ್ಷೇತ್ರದ ಸಾಧಕರಿಗೆ “ತೌಳವ ಸಹಕಾರ ಮಾಣಿಕ್ಯ” ಮತ್ತು “ತೌಳವ ಸಹಕಾರ ರತ್ನ” ಪ್ರಶಸ್ತಿಗಳು ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪ್ರತಿಕೆ ಸಂಸ್ಥೆಗಳ ವತಿಯಿಂದ ಉರ್ವ ಸ್ಟೋರ್ ಬಳಿಯಿರುವ ತುಳು ಭವನ ದಿನಾಂಕ 16-11-2025 ರಂದು ನಡೆಯುವ “ಸಹಕಾರ ಸಪ್ತಾಹ” ಅಂಗವಾಗಿ ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಮತ್ತು ಸಾಧನೆ ತೋರಿದವರಿಗೆ “ತೌಳವ ಸಹಕಾರ ಮಾಣಿಕ್ಯ ಪ್ರಶಸ್ತಿ” ಹಾಗೂ “ತೌಳವ ಸಹಕಾರ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುವುದು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೂ ಸನ್ಮಾನ ನಡೆಯಲಿದೆ. ಈ ಕುರಿತು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುವಂತೆ, ತಮ್ಮ ತಮ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ವ್ಯಕ್ತಿಗಳ ಹೆಸರು ಮತ್ತು ವಿಳಾಸ Bio -data 2025ರ ನವೆಂಬರ್ 10 ಸೋಮವಾರ ಮುಂಚಿತವಾಗಿ ಕಳುಹಿಸಲು ವಿನಂತಿಸಲಾಗಿದೆ. ಶಿಫಾರಸು ಬಂದವರ ಪೈಕಿ ಆಯ್ದ ಕೆಲವರನ್ನು ಪ್ರಶಸ್ತಿ ಮತ್ತು…
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದ್ದು ಇನ್ನೂ ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೊನ್ನೆಯವರೆಗೆ ಇದ್ದ ಬದ್ದ ಅಧಿಕಾರಿಗಳನ್ನೆಲ್ಲಾ ಅವೈಜ್ಞಾನಿಕ ಸಮೀಕ್ಷೆಗೆ ನಿಯೋಜಿಸಿಕೊಂಡ ಪರಿಣಾಮ ಎಷ್ಟೇ ತುರ್ತು ಪರಿಸ್ಥಿತಿಯಿದ್ದರೂ ಸಾರ್ವಜನಿಕರಿಗೆ ಇ-ಖಾತಾ ಲಭಿಸಿರಲಿಲ್ಲ. ಇದೀಗ ಸಮೀಕ್ಷೆ ಮುಗಿದು ಅಧಿಕಾರಿಗಳು ಬಂದಿದ್ದಾರೆ. ಆದರೆ ಸರ್ವರ್ ಇಲ್ಲ ಎನ್ನುತ್ತಿದ್ದು ಸಾರ್ವಜನಿಕರ ತಾಳ್ಮೆಯ ಕಟ್ಟೆಯೊಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದಲೂ ಇರುವ ಈ ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ, ಸಂಬಂಧಪಟ್ಟ ಸಚಿವರಿಗೂ ಮನವಿ ಮಾಡಿದ್ದೇನೆ. ಆದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾಗರಿಕರಿಗೆ ತೊಂದರೆ ತಪ್ಪಿಲ್ಲ ಎಂದರು. ತುರ್ತು ಅಗತ್ಯವಿರುವ ಮಾರಾಟಗಾರರು, ಖರೀದಿದಾರರು, ತಮ್ಮ ಆಸ್ತಿ ನೋಂದಣಿ ಮಾಡಿಕೊಳ್ಳಲಾಗದೇ ದಿನನಿತ್ಯ ಕಚೇರಿಗಳಿಗೆ ಅಲೆದಾಡಿ, ಸಾಲುಗಟ್ಟಿ ನಿಲ್ಲುವಂತಾಗಿದೆ. ಇಷ್ಟಾದರೂ ಈ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು ಬೇಜವಾಬ್ದಾರಿಯಾಗಿ…
ಮಂಗಳೂರು : ಕೃಷಿ ಬದುಕಿಗೆ ಬೆಸೆದು ಕೊಂಡಿರುವ ದೀಪಾವಳಿ ಹಬ್ಬವು ಪ್ರೀತಿ ಮತ್ತು ಭಾವೈಕ್ಯತೆಯಿಂದ ಎಲ್ಲರನ್ನೂ ಜೊತೆಗೂಡಿಸುವ ಹಬ್ಬವಾಗಿದೆ ಎಂದು ತುಳು ಪರಿಷತ್ತು ಅಧ್ಯಕ್ಷ ಶುಭೋದಯ ಆಳ್ವ ಹೇಳಿದರು.ಅವರು ಮಂಗಳೂರಿನ ಬಿಕರ್ಣಕಟ್ಟೆ ಕಲ್ಪನೆಯ ಐಕ್ಯಂ ವಿಶೇಷ ಮಕ್ಕಳ ತರಬೇತಿ ಕೇಂದ್ರದಲ್ಲಿ ತುಳು ಪರಿಷತ್ ವತಿಯಿಂದ ಆಯೋಜಿಸಲಾದ ದೀಪಾವಳಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ತುಳು ಪರಿಷತ್ತು ಉಪಾಧ್ಯಕ್ಷ ಡಾ. ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಚಂದ್ರಕಲಾ ರಾವ್ ಶುಭಕೋರಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಐಕ್ಯಂ ಸಂಸ್ಥೆಯ ಅಧ್ಯಕ್ಷೆ ಕಮಲಾಕ್ಷಿ ಕುಂದರ್, ಕಾರ್ಯದರ್ಶಿ ಸಂತೋಷ್ ಕುಮಾರ್ , ಟ್ರಸ್ಟಿ ಪದ್ಮನಾಭ ಕೆ .ಸಾಲಿಯಾನ್ , ಸಂಸ್ಥೆಯ ಹಿತೈಷಿ ಉಮನಾಥ ಕೊಟ್ಟಾರಿ ಅವರು ಸೇರಿದಂತೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.ತುಳು ಪರಿಷತ್ ಸದಸ್ಯರಾದ ಸುಮತಿ ಹೆಗ್ಡೆ , ಅಮಿತಾ ಅಶ್ವಿನ್ , ದುರ್ಗಾ ಪ್ರಸಾದ್, ರಮೇಶ್ ಮಂಚಕಲ್, ರಾಕೇಶ್ ಕುಂದರ್, ಶಾಲಿನಿ ರೈ,…
ಬಜ್ಪೆ: ಶಾಂತಿ ನಗರದ ಜರ್ಗುಮ್ ಫೌಂಡೇಶನ್‌ನ ಸುಮಾರು 9 ಸದಸ್ಯರು ಪವಿತ್ರ ಉಮ್ರಾ ಯಾತ್ರೆಗೆ ತೆರಳಲಿದ್ದು, ಅವರನ್ನು ಗುರುತಿಸಿ ಟೀಮ್ ಕರಾವಳಿ ಬಜ್ಪೆಯ ಸ್ಥಾಪಕಾಧ್ಯಕ್ಷ ನಿಸಾರ್ ಕರಾವಳಿ ಹಾಗೂ ಅವರ ತಂಡದ ಸದಸ್ಯರು ಸೇರಿ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು. ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ, SDPI ಮುಖಂಡ ಇಸ್ಮಾಯಿಲ್ ಇಂಜಿನಿಯರ್, ಧರ್ಮಗುರುಗಳು, ಹಿರಿಯರಾದ ಮೊನಕ ಹಾಜಿ ಮತ್ತು ಸಲೀಮ್ ಹಾಜಿ, ಉದ್ಯಮಿ ಇಫ್ತಿಕಾರ್ ಹಾಜಿ, ಕೊಯಕಾ, ಹಫೀಜ್ ಕೊಳಂಬೆ, ಉದ್ಯಮಿ ಜಬ್ಬಾರ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಾತ್ರಾರ್ಥಿಗಳಿಗೆ ಶುಭಾಶಯಗಳನ್ನು ಕೋರಿ, ಅವರ ಯಾತ್ರೆ ಯಶಸ್ವಿಯಾಗಿ ನೆರವೇರಲೆಂದು ಪ್ರಾರ್ಥಿಸಲಾಯಿತು.
ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಅನಧಿಕೃತವಾಗಿ ಆಹಾರ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಎಚ್ಚರಿಸಿದ್ದಾರೆ. ರಸ್ತೆ ಚರಂಡಿ, ಶಾಲಾ ವಠಾರ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ಹಾಕುವುದು ನಿಷೇಧವಾಗಿದೆ. ಈ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಸಾಕು ನಾಯಿಗಳನ್ನು ಅಥವಾ ಅವುಗಳ ಮರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮನೆಗಳಲ್ಲಿ ನಾಯಿಗಳನ್ನು ಸಾಕುವವರು ನಾಯಿಗಳಿಗೆ ರೇಬಿಸ್ ಲಸಿಕೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಜೊತೆಗೆ ಸಾಕು ನಾಯಿಗಳಿಗೆ ಗುರುತುಪಟ್ಟಿ (ಬೆಲ್ಟ್) ಅಳವಡಿಸಬೇಕಾಗಿದೆ. ಆಹಾರ ಹಾಕಲು ಗುರುತಿಸಿದ ಸ್ಥಳಗಳು ಬೀದಿ ನಾಯಿಗಳಿಗೆ ಆಹಾರ ಹಾಕಲು ನಗರಸಭೆ ನಿಗದಿಪಡಿಸಿದ ಸ್ಥಳಗಳು —• ಬೀಡಿನ ಗುಡ್ಡೆ ಹಿಂದೂ ರುದ್ರಭೂಮಿ ಎದುರುಗಡೆ• ಆದಿ ಉಡುಪಿ ಮಾರುಕಟ್ಟೆ ಹಿಂಬದಿ• ಇಂದ್ರಾಳಿ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
