ಮಂಗಳೂರು : ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಮಂಗಳೂರಿನ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ


ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಿಜೈ ಬಳಿಯ ಕಲರ್ಸ್ ಬ್ಯೂಟಿ ಪಾರ್ಲರ್ ನಲ್ಲಿ ಈ ಘಟನೆ ನಡೆದಿದೆ.
ಮಸಾಜ್ ಸೆಂಟರ್ ಗೆ ದಾಳಿ ನಡೆಸಿ ಗಲಾಟೆ ನಡೆಸಿದ್ದು, ಸ್ಪಾ ಸೆಂಟರ್ ನಲ್ಲಿ ಅನೈತಿಕ ಚಟುವಟಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಜೈ ಬಳಿಯ ಕಲರ್ಸ್ ಹೆಸರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಇಲ್ಲಿ ಅನೈತಿಕ ಚಟುವಟಿಕೆ ಬೆಳಕಿಗೆ ಬಂದಿದೆ.
ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಿದೆ ಮಂಗಳೂರಿನ ಕೆಎಸ್ಆರ್ಟಿಸಿ ಬಳಿ ಇರುವ ಮಸಾಜ್ ಸೆಂಟರ್ ಗೆ ಕಾರ್ಯಕರ್ತರು ನುಗ್ಗಿದ್ದಾರೆ.

ಮಸಾಜ್ ಪಾರ್ಲರ್ನ ಪೀಠೋಪಕರಣ, ಕಂಪ್ಯೂಟರ್ ಸೆಟ್, ಟೇಬಲ್ಗಳನ್ನು ಪುಡಿ ಮಾಡಲಾಗಿದೆ. ಅಲ್ಲಿದ್ದ ಹುಡುಗಿಯರಲ್ಲಿ ನೀವು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದೀರಾ.? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿದ್ದ ಹುಡುಗಿಯರು ಕಿರುಚಾಡುವ ವೀಡಿಯೋ ವೈರಲ್ ಆಗಿದೆ.