ಕೆ.ಸಿ.ರೋಡ್ : ಜನ ನುಗ್ಗಿ ಕೋಟೆಕಾರ್ ವ್ಯವಸಾಯ ಸಹಕಾರಿ ಸಂಘ ದಲ್ಲಿ ಹಗಲು ದರೋಡೆ, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ಕೆ.ಸಿ ರೋಡ್ ಬ್ಯಾಂಕ್ ಕಳ್ಳತನ ನಡೆದಿದ್ದು 1 ಕೆ.ಜಿ ಚಿನ್ನಾಭರಣ ಲೂಟಿ ಹೊಡೆದದ್ದಾರೆಂದು ಮಾಹಿತಿ ದೊರೆತಿದೆ.
ಗನ್ ಪಾಯಿಂಟ್ ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದು ಆರು ಜನ ದುಷ್ಕರ್ಮಿ ಫಿಯೆಟ್ ಕಾರಿನಲ್ಲಿ ಬಂದಿದ್ದಾರೆಂದು ತಿಳಿದಿದೆ. ದುಷ್ಕರ್ಮಿಗಳು ಸ್ಥಳದಿಂದ ಮಂಗಳೂರು ಕಡೆಗೆ ಪರಾರಿಯಾಗಿದ್ದು ಇದೀಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹೆಚ್ಚಿನ ಮಾಹಿತಿ ಪೋಲಿಸರು ಕಲೆ ಹಾಕುತ್ತಿದ್ದಾರೆ.