ವಿಶ್ವದ ಏಕೈಕ ಜಾನಪದ ವಿಶ್ವ ವಿದ್ಯಾಲಯ ಎಂದು ಪ್ರಸಿದ್ದ ವಾದ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ
ಗೂಟಗೂಡಿ, ಶಿಗ್ಗಾವಿ ತಾಲೂಕು ಹಾವೇರಿ ಜಿಲ್ಲೆ ಇದರ ಕುಲಪತಿ ಡಾ. ಟಿ. ಎಂ ಭಾಸ್ಕರ್ ರವರು ಅಹ್ವಾನ ಮಾಡಿ 21.1.2025 ಅಪರಾಹ್ನ 3.00 ಗಂಟೆಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಯವರಿಗೆ ವಸ್ತು ಸಂಗ್ರಹಾಲಯ ವಿವಿಧ ಚಟುವಟಿಕೆ ಗಳ ಬಗ್ಗೆ ತಿಳಿಸಿ ದರು ಈ ಸಂಧರ್ಭ ವಿಶ್ವ ವಿದ್ಯಾಲಯ ದ ಅಧ್ಯಾಪಕ ವೃoದ ದವರಾದ ಡಾ. ಪ್ರೇಮ್ ಕುಮಾರ್, ಡಾ. ವೆಂಕನ್ ಗೌಡ, ಡಾ. ರಾಜ ಶೇಖರ್, ಷಹಾಜನ್ ಮುದ ಕವಿ, ಅಸಿಸ್ಟೆಂಟ್ ಪ್ರೋ ಭುವನ್ ಅಕ್ಕೋಳೆ ಇದ್ದರು ಹಾಗೂ ಸ್ವಾಮೀಜಿ ಜತೆಗೆ ಸೋಮಶೇಖರ್, ಪ್ರಮೋದ್ ಎಸ್ ಡಿ ಯಂ ಉಜಿರೆ ಕಾಲೇಜುಪ್ರಾಂಶುಪಾಲರು,ಮೂಡು ಬಿದಿರೆ ಲೆಕ್ಚರ್ ಮಹಾವೀರ ಜೈನ್ ಉಪಸ್ಥಿತರಿದ್ದರು ಮುಂದಿನ ದಿನಗಳಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಆಶ್ರಮ ದಲ್ಲಿ ರಾಜ್ಯ ಮಟ್ಟದ ಜಾನಪದ ಕಮ್ಮಟ ಹಮ್ಮಿಕೊಳ್ಳಲು ಸ್ವಾಮೀಜಿ ಕುಲಪತಿ ಗಳೊಂದಿಗೆ ಚರ್ಚಿಸಿದರು ವಿಶ್ವ ವಿದ್ಯಾಲಯ ವತಿಯಿಂದ ಪೂಜ್ಯ ಸ್ವಾಮೀಜಿ ಯವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸ ಲಾಯಿತು
