- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಬೆಂಗಳೂರು ತುಳುಕೂಟ (ರಿ.) ಅಧ್ಯಕ್ಷರಾದ ಶ್ರೀ ಸುಂದರರಾಜ ರೈ ರವರ ನಿಧನದಿಂದ ತುಳು ಸಮುದಾಯದಲ್ಲಿ ಆಳವಾದ ದುಃಖವಿದೆ. ಶ್ರೀ ಸುಂದರರಾಜ ರೈ ಅವರು ತುಳು ಭಾಷೆಯ ಸಂರಕ್ಷಣೆಗೆ, ಕರಾವಳಿ ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗೆ ಮತ್ತು ಬೆಂಗಳೂರು ಕಂಬಳದ ಯಶಸ್ಸಿಗಾಗಿ ಅನೇಕ ವರ್ಷಗಳ ಶ್ರಮ ಮತ್ತು ಸೇವೆಯನ್ನು ನಿಭಾಯಿಸಿದ್ದರು. ಅವರ ನಾಯಕತ್ವ, ಧೈರ್ಯ ಮತ್ತು ನಿರಂತರ ಸೇವಾಭಾವ ಹೊಂದಿರುವವರಾಗಿದ್ದಾರೆ. ನಮ್ಮಲ್ಲಿ ಒಬ್ಬ ನಿಜವಾದ ಕ್ರಿಯಾಶೀಲ ನಾಯಕರೊಬ್ಬರನ್ನು ಕಳೆದುಕೊಂಡಿದ್ದೇವೆ — ಅವರು ತುಳು ಮತ್ತು ಕರಾವಳಿ ಪ್ರದೇಶದ ಜನರ ಹಕ್ಕುಗಳು, ಭಾವನೆಗಳು ಮತ್ತು ಹಿತಾಸಕ್ತಿಗಳನ್ನು ಸದಾ ಹೋರಾಟಮಾಡಿ ಕಾಪಾಡಿದರು. ಶ್ರದ್ಧಾಂಜಲಿ ಸಭೆ:ದಿನಾಂಕ: 30-10-2025 ಸಮಯ: 4.00ಸ್ಥಳ: ಉರ್ವ ತುಳು ಭವನ ಶ್ರೀ ಸುಂದರ ರಾಜ್ ರೈ ಅವರ ಬಂಧುಮಿತ್ರರು, ಗೆಳೆಯರು ಹಾಗೂ ಸಮುದಾಯದ ಪ್ರತಿಯೊಬ್ಬರೂ ಸಭೆಯಲ್ಲಿ ಭಾಗವಹಿಸಿ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವಂತೆ ವಿನಂತಿಸಲಾಗುತ್ತಿದೆ.
ಬಜಪೆ: ಬಂಟರ ಸಂಘ ಬಜಪೆ ವಲಯದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೇಣುಗೋಪಾಲ್ ಶೆಟ್ಟಿ, ಪಡುಮನೆ ಕರಂಬಾರು ರವರಿಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣದಿಂದ ಪೋರ್ಕೊಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನವರೆಗೆ ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಸಂಭ್ರಮದ ನಾದ, ಬಣ್ಣದ ಹೂವಿನ ಅಲಂಕಾರ, ಮತ್ತು ಅಭಿಮಾನಿಗಳ ಘೋಷಣೆಗಳು ಕಂಗೊಳಿಸಿತು. ಈ ಸಂದರ್ಭದಲ್ಲಿ ಶ್ರೀ ಜಯಶಂಕರ್ ಶೆಟ್ಟಿ ಕರಂಬಾರು ಗುತ್ತು, ಶ್ರೀಮತಿ ವಿಜಯ ಶೆಟ್ಟಿ ಗಂಡೋಟ್ಟು, ಕಿಶನ್ ಶೆಟ್ಟಿ ಮರವೂರು, ಮಂಜು ಪ್ರಸಾದ್ ಶೆಟ್ಟಿ ಕೆಂಜಾರು, ದಿನೇಶ್ ಶೆಟ್ಟಿ ಚಿಕ್ಕ ಪರಾರಿ, ಜಗನಾಥ್ ಸಾಲ್ಯಾನ್ ಕರಂಬಾರು, ಸೂರ್ಯ ಕಾಂತ್ ರೈ, ರಮೇಶ್ ಸುವರ್ಣ, ರಫೀಕ್ ಕೆಂಜಾರು, ಯತೀಶ್ ಪೂಜಾರಿ ಕೆಂಜಾರು, ಚಿತ್ತರಂಜನ್ ರೈ ಕೆಂಜಾರು, ನಿತಿನ್ ಪಕ್ಕಳ ಕೆಂಜಾರು, ರವಿ ಶೆಟ್ಟಿ ಕೆಂಜಾರು ಹಾಗೂ ಬಜಪೆ ಬಂಟರ ಸಂಘದ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ವೇಣುಗೋಪಾಲ್ ಶೆಟ್ಟಿ ಅಭಿಮಾನಿಗಳು ಉಪಸ್ಥಿತರಿದ್ದರು. ಈ ಸ್ವಾಗತ ಸಮಾರಂಭವು ಬಂಟರ…
ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಪಿಎಂಇಜಿಪಿ (PMEGP) ಯೋಜನೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆದಿದ್ದು, ಈ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಬ್ರಹ್ಮಾವರದ ಕೌಶಲ್ಯ ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯಂತೆ, 2023ರ ನವೆಂಬರ್‌ನಲ್ಲಿ ಕೌಶಲ್ಯಳು ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರನ್ನು ಸಂಪರ್ಕಿಸಿ, ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿದ್ದರು. ಆ ನಂತರ ಲೋನ್ ಪ್ರಕ್ರಿಯೆ ಮುಂದುವರಿಸಲು ಬೇರೆ ಬೇರೆ ಕಾರಣಗಳನ್ನು ಹೇಳಿ ಸರಿತಾ ಲೂವಿಸ್ ಅವರಿಂದ ಹಂತ ಹಂತವಾಗಿ ಹಣ ಪಾವತಿಸುವಂತೆ ಕೇಳಿದ್ದಳು. ಅದರಂತೆ ಸರಿತಾ ಲೂವಿಸ್ ಕೌಶಲ್ಯಳ ಖಾತೆಗೆ ಹಾಗೂ ಆಕೆಯ ತಿಳಿಸಿದ ವ್ಯಕ್ತಿಗಳಾದ ಸಂದೇಶ್, ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಇವರ ಖಾತೆಗಳಿಗೆ ಒಟ್ಟು ₹80,72,000 ಹಣ ವರ್ಗಾಯಿಸಿದ್ದಾಗಿ ದೂರು ನೀಡಲಾಗಿದೆ. ಇದೇ ರೀತಿಯಲ್ಲಿ, ಕೌಶಲ್ಯಳು ಅಂಜಲಿನ್ ಡಿಸಿಲ್ವಾ ಎಂಬ ಮಹಿಳೆಗೆ ಸಹ…
ಮುಂಬೈ:ಹಾಸ್ಯನಟನಾಗಿ ಭಾರತದ ಸಿನಿಮಾ ಮತ್ತು ದೂರದರ್ಶನ ಲೋಕದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಹಿರಿಯ ನಟ ಸತೀಶ್ ಶಾ (74) ಇಂದು ನಿಧನರಾದರು. ಅವರು ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗಷ್ಟೇ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಇಂದು ಮಧ್ಯಾಹ್ನ ಅಸ್ವಸ್ಥರಾದ ಅವರನ್ನು ತುರ್ತು ಚಿಕಿತ್ಸೆಗೆ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರ ಪ್ರಯತ್ನಗಳ ಫಲವಾಗದೇ ಮಧ್ಯಾಹ್ನ 2:30 ಕ್ಕೆ ಅವರು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಪವನ್ ಹನ್ಸ್ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ದುಃಖದ ಸುದ್ದಿಯನ್ನು ಅವರ ಆಪ್ತ ಮಿತ್ರ ಹಾಗೂ ಹಿರಿಯ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ದೃಢಪಡಿಸಿದ್ದಾರೆ. ನಾಲ್ಕು ದಶಕಗಳಿಗೂ ಅಧಿಕ ಕಾಲದ ತಮ್ಮ ವೃತ್ತಿಜೀವನದಲ್ಲಿ ಸತೀಶ್ ಶಾ ಅವರು ಭಾರತೀಯ ಸಿನಿಮಾ ಮತ್ತು ಟಿವಿ ಕ್ಷೇತ್ರದಲ್ಲಿ ಅಸಂಖ್ಯಾತ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು ನಂತರ ಪುಣೆಯ…
ಮಂಗಳೂರು:ಮಂಗಳೂರು ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ (ಎಮ್‌ಸಿಸಿ ಬ್ಯಾಂಕ್) ಆಡಳಿತ ಕಛೇರಿಯಲ್ಲಿ ಮಂಗಳವಾರ ದೀಪಾವಳಿ ಹಬ್ಬವನ್ನು ಸಂಭ್ರಮಭರಿತವಾಗಿ ಆಚರಿಸಲಾಯಿತು. ಬೆಳಕಿನ ಹಬ್ಬವಾದ ದೀಪಾವಳಿ, ಕತ್ತಲೆಯ ಮೇಲೆ ಬೆಳಕಿನ ಗೆಲುವಿನ ಹಾಗೂ ಒಳ್ಳೆಯತನದ ವಿಜಯದ ಸಂಕೇತವಾಗಿ, ಉತ್ಸಾಹಪೂರ್ಣ ವಾತಾವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೋ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಶ್ರೀ ಪ್ರತಾಪ್ ಸಿಂಗ್ ಥೋರಟ್ ಹಾಗೂ ಮಂಗಳೂರು ನಗರ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವು ದೀಪ ಬೆಳಗಿಸುವ ವಿಧಿಯೊಂದಿಗೆ ಆರಂಭವಾಯಿತು. ಅಧ್ಯಕ್ಷರಾದ ಅನಿಲ್ ಲೋಬೋ ಹಾಗೂ ಎಸಿಪಿ ನಜ್ಮಾ ಫಾರೂಕ್ ಅವರು ಸಂಭ್ರಮದ ದೀಪವನ್ನು ಬೆಳಗಿಸಿ ಹಬ್ಬದ ಶುಭಾರಂಭಕ್ಕೆ ಚಾಲನೆ ನೀಡಿದರು. ಇದರೊಂದಿಗೆ ಬ್ಯಾಂಕಿನ ಸಿಬ್ಬಂದಿ ಮತ್ತು ಗ್ರಾಹಕರು ಬೆಳಕು ಮತ್ತು ಸಕಾರಾತ್ಮಕತೆಯ ಸಂದೇಶ ಹರಡುವಂತೆ ಶಾಖೆಯಲ್ಲಿ ದೀಪ ಬೆಳಗಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೋ ಅವರು, ದೀಪಾವಳಿ ಕೇವಲ ಬೆಳಕಿನ…
ಮಂಗಳೂರು: ‘ಸಮಾಜದ ಸಂಕಷ್ಟದ ಸಮಯದಲ್ಲಿ ಸ್ವಯಂ ಸ್ಫೂರ್ತಿಯಿಂದ ಮುನ್ನುಗ್ಗಿ ಕಾರ್ಯಪ್ರವೃತ್ತರಾಗುವ ತೀರಾ ಅಪರೂಪದ ವ್ಯಕ್ತಿಗಳಲ್ಲಿ ದಿ| ಜಲಂಧರ ರೈ ಪ್ರಮುಖರು. ಅವರು ಓರ್ವ ನಿಸ್ಪೃಹ ಸರ್ವ ಸಮರ್ಪಿತ ಕಾರ್ಯಕರ್ತ. ಕಾರ್ಕಳದ ಅಜೆಕಾರು ಮತ್ತು ಕೋಟೆಕಾರಿನ ಆನಂದಾಶ್ರಮ ಪ್ರೌಢ ಶಾಲೆಗಳಲ್ಲಿ ಜನಮನ ಗೆದ್ದ ಅಧ್ಯಾಪಕರಾಗಿ, ಸಾಮಾಜಿಕ ಸಂಘಟಕರಾಗಿ, ಕ್ರೀಡಾ ತರಬೇತುದಾರರಾಗಿ, ಯಕ್ಷಗಾನ ಕಲಾವಿದರಾಗಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹುಮುಖೀ ಸಾಧಕರಾಗಿ ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿದ್ದ ಅವರು ನಾಡಿನಾದ್ಯಂತ ಸಂಚರಿಸಿದ ಧೀಮಂತ ನಾಯಕ; ಶ್ರೇಷ್ಠ ಮಾನವತಾವಾದಿ’ ಎಂದು ದಿ| ಜಲಂಧರ ರೈ ಅವರ ನಿಕಟವರ್ತಿ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೀರಿ ಕೋಟೆಕಾರ್ ಮತ್ತು ಶ್ರೀ ಗಣೇಶ ಭಜನಾ ಮಂದಿರ ಬೀರಿ ಆಶ್ರಯದಲ್ಲಿ ಆನಂದಾಶ್ರಮ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಹಿತೈಷಿಗಳ ಸಹಕಾರದೊಂದಿಗೆ ದಿ| ಎಸ್.ಜಲಂಧರ ರೈ ಅವರ 25 ನೇ ವರ್ಷದ ಪುಣ್ಯ ಸ್ಮರಣೆಗಾಗಿ ಸಂಕೊಳಿಗೆಯ ಶಕ್ತಿ ಮೈದಾನದಲ್ಲಿ…
ತುಳುನಾಡ ರಕ್ಷಣಾ ವೇದಿಕೆ (ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರು ಯೋಗಿಶ್ ಶೆಟ್ಟಿ ಜಪ್ಪು ಅವರು,ಬೆಂಗಳೂರು ತುಳುಕೂಟ (ರಿ) ಅಧ್ಯಕ್ಷರಾದ ಶ್ರೀ ಸುಂದರರಾಜ ರೈ ಅವರ ನಿಧನಕ್ಕೆ ಆಳವಾದ ಸಂತಾಪ ಸೂಚಿಸಿದ್ದಾರೆ. ಶ್ರೀ ಸುಂದರರಾಜ ರೈ ಇವರು ಇಂದು ನಮ್ಮನ್ನಗಲಿರುವುದು ತುಂಬಾ ದುಃಖದ ಸಂಗತಿ.ಅವರು ಬೆಂಗಳೂರು ಕಂಬಳದ ಯಶಸ್ಸಿಗಾಗಿ ಅಪಾರ ಶ್ರಮವಹಿಸಿ, ತುಳು ಭಾಷೆ ಮತ್ತು ಕರಾವಳಿ ಭಾಗದ ಆಚಾರ–ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ನಾವು ಜನಪರವಾಗಿ ನಿಲ್ಲುವ, ಜನಮನ ಗೆದ್ದ ನಿಜವಾದ ಕ್ರಿಯಾಶೀಲ ನಾಯಕನನ್ನು ಕಳೆದುಕೊಂಡಿದ್ದೇವೆ.ಅವರು ತುಳು ಹಾಗೂ ಕರಾವಳಿ ಪ್ರದೇಶದ ಜನರ ಹಕ್ಕುಗಳು, ಭಾವನೆಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸದಾ ಧ್ವನಿಯಾಗಿದ್ದರು.ಅವರ ಧೈರ್ಯ, ಸೇವಾಭಾವ ಮತ್ತು ನಿಸ್ವಾರ್ಥ ಹೋರಾಟ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಶ್ರೀ ಸುಂದರರಾಜ ರೈ ಅವರ ನಿಧನವು ಅತ್ಯಂತ ದುಃಖವನ್ನು ತಂದಿದ್ದು,ಅವರ ಕುಟುಂಬದವರು ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಯೋಗಿಶ್ ಶೆಟ್ಟಿ…
ಮಣಿಪಾಲ, ಅಕ್ಟೋಬರ್ 21 – ಮಸಾಜ್ ಪಾರ್ಲರ್ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಮಣಿಪಾಲ ಪೊಲೀಸರು ಕೊಡುಗೆ ನೀಡಿದ್ದಾರೆ. ಬಾಡಿ ಮಸಾಜ್ ಹೆಸರಿನಲ್ಲಿ ಮಹಿಳೆಯರನ್ನು ಬಳಸಿಕೊಂಡು ಅಕ್ರಮ ಲಾಭ ಗಳಿಸುತ್ತಿದ್ದೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು: ಇಮ್ರಾನ್ ಜೈಬಾಯ್ ಅಲಿಯಾಸ್ ಎಲಿಸಾ ದಾಳಿಯಲ್ಲಿ ನೊಂದ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದು, ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 190/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಭಾರತ ದಂಡ ಸಂಹಿತೆ 143 BNS ಕಲಂ, ಹಾಗೂ ITP (Immoral Traffic Prevention) ಕಾಯ್ದೆ ಅಡಿಯಲ್ಲಿ 3, 4, 5 ಮತ್ತು 6ನೇ ಸೆಕ್ಷನ್‌ಗಳು ಅನ್ವಯಿಸಲಾಗಿದೆ. ಮುಖ್ಯ ಆರೋಪಿಗಳು ಮಹೇಶ್ ಮತ್ತು ಅಶೋಕ್ ಎಂಬವರು, ತಮ್ಮ ಲಾಭಕ್ಕಾಗಿ “ಸೆಲೂನ್ & ಸ್ಪಾ ಬಾಡಿ ಮಸಾಜ್ ಸೆಂಟರ್” ನಡೆಸುತ್ತಿದ್ದು, ಇಮ್ರಾನ್ ಮತ್ತು ಎಲಿಸಾ ಅವರೊಂದಿಗೆ ಒಟ್ಟಾಗಿ ಈ ದಂಧೆಗೆ ಸಹಕರಿಸುತ್ತಿದ್ದರು ಎಂಬ ಮಾಹಿತಿ ದೊರೆತಿದೆ.…
ಬೆಂಗಳೂರು: ವೈದ್ಯಕೀಯ ತಪಾಸಣೆಯ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಚರ್ಮರೋಗ ತಜ್ಞನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶನಿವಾರ ಸಂಜೆ ಅಶೋಕನಗರದ ಖಾಸಗಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಯುವತಿ ತನ್ನ ತಂದೆಯೊಂದಿಗೆ ಚರ್ಮದ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು ಭೇಟಿ ನೀಡಿದ್ದ ವೇಳೆ, ವೈದ್ಯ ಡಾ. ಪ್ರವೀಣ್ (ವಯಸ್ಸು 56) ತಪಾಸಣೆ ಸಂದರ್ಭದಲ್ಲಿ ಅನುಚಿತ ವರ್ತನೆ ನಡೆಸಿದ್ದಾರೆ ಎಂಬ ಆರೋಪ ದಾಖಲಾಗಿದೆ. ಪೊಲೀಸರ ಪ್ರಕಾರ, ತಪಾಸಣೆ ಸಮಯದಲ್ಲಿ ವೈದ್ಯರು ಸುಮಾರು 30 ನಿಮಿಷಗಳ ಕಾಲ ಯುವತಿಗೆ ಅಸಭ್ಯವಾಗಿ ವರ್ತಿಸಿದ್ದು, ವೈದ್ಯಕೀಯ ತಪಾಸಣೆಯ ಹೆಸರಿನಲ್ಲಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಯುವತಿ ವಿರೋಧಿಸಿದರೂ ವೈದ್ಯರು ಕಿರುಕುಳ ಮುಂದುವರಿಸಿದ್ದು, ನಂತರ ಖಾಸಗಿಯಾಗಿ ಭೇಟಿಯಾಗಲು ಹೋಟೆಲ್ ರೂಮ್ ಬುಕ್ ಮಾಡುವ ಮಾತು ಸಹ ನುಡಿದರೆಂದು ದೂರು ತಿಳಿಸುತ್ತದೆ. ಘಟನೆಯ ನಂತರ ಯುವತಿ ತನ್ನ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳೀಯ ನಿವಾಸಿಗಳೊಂದಿಗೆ ಕ್ಲಿನಿಕ್ ಮುಂದೆ…
ಪುತ್ತೂರು (ದಕ್ಷಿಣ ಕನ್ನಡ):ಈಶ್ವರಮಂಗಳದಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಷರ್ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ದಾಳಿ ಮಾಡಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಸೆರೆಹಿಡಿದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಗುಂಡೇಟಿಗೆ ಒಳಗಾದ ಆರೋಪಿ ಕಾಸರಗೋಡು ಮೂಲದ ಅಬ್ದುಲ್ಲಾ (40) ಎಂದು ಗುರುತಿಸಲಾಗಿದೆ. ಅವನ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಅಬ್ದುಲ್ಲಾ ಐಷರ್ ವಾಹನದಲ್ಲಿ ಸುಮಾರು 10 ಜಾನುವಾರುಗಳನ್ನು ಅನಧಿಕೃತವಾಗಿ ಸಾಗಿಸುತ್ತಿದ್ದಾನೆ. ಪೊಲೀಸರು ನಿಲ್ಲಿಸಲು ಸೂಚಿಸಿದಾಗ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಸುಮಾರು 10 ಕಿ.ಮೀ.ವರೆಗೆ ನಡೆದ ಚೇಸ್ ವೇಳೆ, ಆರೋಪಿಯು ಪೊಲೀಸರ ಜೀಪಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಪಿಎಸ್‌ಐ ಅವರು ಆತ್ಮರಕ್ಷಣೆಗೆ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ವಾಹನಕ್ಕೆ ತಗುಲಿದ್ದು, ಮತ್ತೊಂದು ಅಬ್ದುಲ್ಲಾ ಕಾಲಿಗೆ ತಗುಲಿದೆ. ಗುಂಡೇಟಿನ ಬಳಿಕ ವಾಹನ ನಿಂತಾಗ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಅಬ್ದುಲ್ಲಾ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
