- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಉಡುಪಿ: ಇಂದು ನಡೆದ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್ ಭರ್ಜರಿ ಜಯ ಸಾಧಿಸಿದ್ದಾರೆ. ಇವರು ಪ್ರತಿಸ್ಪರ್ಧಿ ಜಯಪ್ರಕಾಶ್ ಕೆದ್ಲಾಯ ಅವರ ಎದುರು ಜಯಗಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆರೂರು ಸುಕೇಶ್ ಶೆಟ್ಟಿ ಅವರ ಎದುರು ಚಂದ್ರಶೇಖರ ಶೆಟ್ಟಿ ಜಯಗಳಿಸಿದ್ದಾರೆ. ಉಪಾಧ್ಯಕ್ಷರಾಗಿ ದೇವದಾಸ್ ಶೆಟ್ಟಿಗಾರ್ ಜಯಗಳಿಸಿದ್ದಾರೆ.
ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪತ್ರಿಕೆಗಳ ಸಂಯುಕ್ತಾಶ್ರಯದಲ್ಲಿ ಸಹಕಾರ ಸಪ್ತಾಹ–2025ರ ಅಂಗವಾಗಿ ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ತುಳುಭವನದ ಸಿರಿ ಚಾವಡಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ವಹಿಸಿದ್ದರು. ಮೂಡಬಿದಿರೆ ಜೈನ ಮಠದ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.“ಮಾನವನು ಸಹಕಾರ ತತ್ವದಿಂದಲೇ ಬದುಕನ್ನು ಶ್ರೀಮಂತಗೊಳಿಸಿದ್ದಾನೆ. ಇಂದಿನ ಸಹಕಾರಿ ಸಂಘಗಳು ಮನುಕುಲೋದ್ಧಾರಕ್ಕೆ ಇನ್ನಷ್ಟು ಕೊಡುಗೆ ನೀಡಲಿ,” ಎಂದು ಅವರು ಆಶಿಸಿದರು. ಮಾಡೂರಿನ ಶಿವ ದುರ್ಗಾಂಬ ಮಠದ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಶುಭಾಶಯ ಕೋರಿದರು. ಶಾಸಕ ವೇದವ್ಯಾಸ್ ಕಾಮತ್ online photo ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ಸಹಕಾರಿ ಸಪ್ತಾಹ ತುಳುನಾಡ ಸೂರ್ಯ ಪ್ರತಿಕೆ ವಿಶೇಷಾಂಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳು…
ಉಡುಪಿ ಜಿಲ್ಲೆಯ ಕೋಟದ ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಓರ್ವ ಪ್ರಮುಖ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತನನ್ನು ಸುರೇಶ್ ಭಟ್ ಎಂದು ಗುರುತಿಸಲಾಗಿದೆ. ಕೋಟ ಪೊಲೀಸರು ಆರೋಪಿಯನ್ನು ಬಂಧಿಸಿ ಸದ್ಯ ವಿಚಾರಣೆ ಮುಂದುವರೆಸಿದ್ದಾರೆ. ಪ್ರಕರಣದ ಹಿನ್ನೆಲೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 205/2025, ಕಲಂ 318(3)(4), 112 ಹಾಗೂ 3(5) BNS 2023ರಡಿ ದಾಖಲಾಗಿರುವ ಪ್ರಕರಣದ ಪ್ರಕಾರ:• ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ• ಶಾಖಾ ಮ್ಯಾನೇಜರ್ ಸುರೇಶ್ ಭಟ್ (1ನೇ ಆರೋಪಿ)• ಕಿರಿಯ ಗುಮಾಸ್ತ ಹರೀಶ್ ಕುಲಾಲ್ (2ನೇ ಆರೋಪಿ) ಇವರು ಸಂಘಕ್ಕೆ ಒಟ್ಟು ₹1 ಕೋಟಿ 70 ಲಕ್ಷ ವಂಚನೆ ನಡೆಸಿದ್ದಾರೆ ಎಂಬ ಆರೋಪವಿದೆ. ಘಟನೆ ಬಳಿಕ ಇಬ್ಬರೂ ತಲೆಮರೆಸಿಕೊಂಡಿದ್ದರು. ಅವರಲ್ಲೊಬ್ಬನಾದ 38 ವರ್ಷದ ಸುರೇಶ್ ಭಟ್, ಹೆಗ್ಗುಂಜೆ ಗ್ರಾಮದ ಜಾನುವಾರಕಟ್ಟೆ ಬಳಿಯ ಗೇರು ಬೀಜ ಫ್ಯಾಕ್ಟರಿ ಪ್ರದೇಶದಲ್ಲಿ ಅಡಗಿಕೊಂಡಿದ್ದನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ…
ಉಡುಪಿ: ಸಾಯಿಬ್ರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕೋಟ್ಯಾಂತರ ರೂ. ವಂಚನೆ ಪ್ರಕರಣ ನಡೆದಿದ್ದು, ಶಾಖಾ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಸಂಘಕ್ಕೆ ಕೋಟ್ಯಾಂತರ ರೂ. ವಂಚನೆ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಎಂಬಾತನನ್ನು ನ.5ರಂದು ಸಂಘದ ಆಡಳಿತ ಮಂಡಳಿ ತೀರ್ಮಾನದಂತೆ ಬೇರೆ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಕಾವಡಿ ಶಾಖೆಗೆ ಮ್ಯಾನೇಜರ್ ಆಗಿ ವರ್ಗಾವಣೆಗೊಂಡು ಬಂದ ರಾಮ, ಹಿಂದಿನ ಮ್ಯಾನೇಜರ್ ಸುರೇಶ್ ಭಟ್ ಅವರಿಂದ ಅಧಿಕಾರ ವಹಿಸಿಕೊಳ್ಳುವ ವೇಳೆ ಕಾವಡಿ ಶಾಖೆಯಲ್ಲಿ ಸಂಗ್ರಹವಾದ ಸುಮಾರು 1.70 ಕೋಟಿ ರೂ. ವ್ಯತ್ಯಾಸ ಕಂಡುಬಂದಿತ್ತು. ಅದರಂತೆ ರಾಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಚೇರಿ ಸಿಬ್ಬಂದಿ ಜೊತೆ ತೆರಳಿ ಪರಿಶೀಲಿಸಿದ್ದು, ಈ ಸಂದರ್ಭ 1.70 ಕೋಟಿ ರೂ. ವಂಚಿಸಿರುವುದು ತಿಳಿದುಬಂದಿದೆ. ಅಲ್ಲದೇ ಹರೀಶ್ ಕುಲಾಲ್ ಈ ಹಿಂದೆ ಕಾವಡಿ ಶಾಖೆಯಲ್ಲಿ…
ಹಸಿರೇ ಉಸಿರು… ಹಸಿರೇ ಬದುಕು ಎಂದು ಜೀವಿತವನ್ನೇ ಪರಿಸರ ರಕ್ಷಣೆಗೆ ಅರ್ಪಿಸಿದ್ದ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಇಹಲೋಕ ತ್ಯಜಿಸಿದ್ದಾರೆ. 114 ವರ್ಷದ ಈ ಮಹನೀಯರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನ ಜಾವ ಅವರು ಅಂತಿಮ ಶ್ವಾಸ ನಿಲ್ಲಿಸಿದ್ದಾರೆ. ತಿಮ್ಮಕ್ಕ ಅವರ ಅಗಲಿಕೆ ಪ್ರಕೃತಿ ಪ್ರೇಮಿಗಳಿಗೆ, ಪರಿಸರ ಸಂರಕ್ಷಣಾ ಹೋರಾಟಗಾರರಿಗೆ ಮತ್ತು ನಾಡಿಗೆ ಅಸಾಧಾರಣ ನಷ್ಟವಾಗಿದೆ. ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಸಂತಾನವಾಗಿ ಕಾಣುತ್ತಿದ್ದ ಅವರು, 385 ಆಲದ ಮರಗಳನ್ನು ಒಳಗೊಂಡಂತೆ 8,000ಕ್ಕೂ ಹೆಚ್ಚು ವೃಕ್ಷಗಳನ್ನು ಪ್ರೀತಿಯಿಂದ, ತಾಯಿಯ ಮಮತೆಯೊಂದಿಗೆ ಬೆಳೆಸಿದ್ದರು. ಬರಡು ಪ್ರದೇಶಗಳನ್ನು ಹಸಿರುಗಾವಲಾಗಿ ಪರಿವರ್ತಿಸಿದ್ದ ತಿಮ್ಮಕ್ಕ, “ಒಬ್ಬ ವ್ಯಕ್ತಿಯ ಕೈಯಲ್ಲಿ ಹಸಿರು ಕ್ರಾಂತಿ ಸಾಧ್ಯ” ಎಂಬುದನ್ನು ತಮ್ಮ ಬದುಕಿನಿಂದಲೇ ಸಾಬೀತುಪಡಿಸಿದ್ದರು. ತಮ್ಮ ಮೌನ ಸೇವೆಯಿಂದ, ನಿರಂತರ ಶ್ರಮದಿಂದ, “ಹಸಿರು ಇಲ್ಲದೆ ಮಾನವ ಕುಲಕ್ಕೆ ಉಸಿರಿಲ್ಲ” ಎಂಬ ಸಂದೇಶವನ್ನು ತಲೆಮಾರುಗಳಿಗೆ ಸಾರಿದ ಅವರು ನಿಜವಾಗಿಯೂ ವೃಕ್ಷಮಾತೆ ಎಂಬ ಹೆಸರಿನ ತಾರತಮ್ಯವನ್ನು…
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರು ಸಹಕಾರ ಕ್ಷೇತ್ರದ ಸಾಧಕರಿಗೆ ಕೊಡಮಾಡುವ 2025 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಹಿರಿಯ ಸಹಕಾರಿ ನಾಯಕ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾನ್ಯ ಅಧ್ಯಕ್ಷರಾದ ಎನ್ ರಮೇಶ್ ಶೆಟ್ಟಿ ರವರಿಗೆ ಲಭಿಸಿದೆ. ನ.14ರಂದು ಬೆಂಗಳೂರಿನ ಗಾಯತ್ರಿ ವಿಹಾರ್, ಫ್ಯಾಲೆಸ್ ಗೌಂಡ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎನ್ ರಮೇಶ್ ಶೆಟ್ಟಿಯವರು ಸಾಮಾಜಿಕ, ಸಹಕಾರ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಸಹಕಾರ ಕ್ಷೇತ್ರದಲ್ಲಿ ಅವರು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘದ ಬೆಳವಣಿಗೆಯಲ್ಲಿ ಶ್ರಮಿಸಿದ್ದಾರೆ.
ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ನಿಯಮಿತ ಇದರ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ಮಣಿಪಾಲ : ನಗರದಲ್ಲಿರುವ ಪಬ್ ಒಂದರ ಹತ್ತಿರ ತಡರಾತ್ರಿ ಇಬ್ಬರು ಯುವಕರ ತಂಡಗಳ ನಡುವೆ ಗಲಾಟೆ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯರಾತ್ರಿ ವೇಳೆ ನಡು ರಸ್ತೆಯಲ್ಲೇ ಯುವಕರು ಪರಸ್ಪರ ತಳ್ಳಾಡಿಕೊಂಡು ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣವೇ ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಗಲಾಟೆಗೆ ಒಳಪಟ್ಟಿದ್ದ ಇಬ್ಬರೂ ತಂಡದ ಯುವಕರು ಪರಸ್ಪರ ಪರಿಚಿತರಾಗಿದ್ದು, ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎನ್ನುವುದು ತಿಳಿದುಬಂದಿದೆ. ಆದಾಗ್ಯೂ, ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಇಬ್ಬರೂ ಗುಂಪಿನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮರ್ ಶೆಟ್ಟಿ, ಚಂದನ್ ಸಿ. ಸಾಲ್ಯಾನ್, ಧನುಷ್ ಹಾಗೂ ಅಜಯ್ ಎಂಬ ಆರೋಪಿತರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2025, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 194(2) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.…
ಮಂಗಳೂರು, ನ. 9: ಹಿಂದೂ ಸಮಾಜದ ಪಾರಂಪರಿಕ ಆಚಾರ–ವಿಚಾರಗಳು, ಸಂಸ್ಕೃತಿ ಮತ್ತು ಆಚರಣೆಗಳು ಕಾಲಕ್ರಮೇಣ ಮಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಅವುಗಳ ಮೂಲತ್ವವನ್ನು ಉಳಿಸಿ–ಬೆಳೆಸುವ ಉದ್ದೇಶದಿಂದ ‘ಧರ್ಮಾವಲೋಕನ’ ಎಂಬ ವಿಶಿಷ್ಟ ಧಾರ್ಮಿಕ ವಿಚಾರಗೋಷ್ಠಿ ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ನವೆಂಬರ್ 9ರಂದು ಮಂಗಳೂರಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಡಿಸೆಂಬರ್ 14ರಂದು ಬಂಟ್ಸ್ ಹಾಸ್ಟೆಲ್‌ನ ರಾಮಕೃಷ್ಣ ಪಿಯು ಕಾಲೇಜು ಸಭಾಭವನದಲ್ಲಿ ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ನಡೆಯುವ ‘ಧರ್ಮಾವಲೋಕನ’ ಸಭೆಗೆ ಗುರುಪುರದ ದೋಣಿಂಜೆಗುತ್ತು ಗಡಿಕಾರ ಪ್ರಮೋದ್ ಕುಮಾರ್ ರೈ ಅವರನ್ನು ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಮೋದ್ ಕುಮಾರ್ ರೈ ಹೇಳಿದರು: ಅವರು ಮುಂದುವರಿಸಿ ಉದ್ಯಮಿ ಜಯರಾಮ ಶೆಟ್ಟಿ ಮುಂದಾಡಿಗುತ್ತು ಮಾತನಾಡಿ, ಇಂಜಿನಿಯರ್ ಕಿರಣ್ ಉಪಾಧ್ಯಾಯ ಹೇಳಿದರು: ಪೂರ್ವಭಾವಿ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಧಾರ್ಮಿಕ ಮುಖಂಡ ಗಂಗಾಧರ ಶೆಟ್ಟಿ ಬಜ್ಪೆ, ಕಮಲಾಕ್ಷ ಗಂಧಕಾಡು, ವಕೀಲ ಪ್ರಶಾಂತ್ ಮಂಗಳೂರು ಮೊದಲಾದವರು ಸಲಹೆ ನೀಡಿದರು. ಈ…
ತಮಿಳುನಾಡಿನಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳ ಎರಡು ದಿನಗಳ ಧಾರ್ಮಿಕ ಪ್ರವಾಸವು ನವೆಂಬರ್ 7 ಮತ್ತು 8ರಂದು ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು. ನವೆಂಬರ್ 7ರಂದು, ತಿರುಚನಾಪಳ್ಳಿ ಪ್ರದೇಶದ ಬಿ.ಹೆಚ್.ಇ.ಎಲ್ ನಿವೃತ್ತ ಹಿರಿಯ ಇಂಜಿನಿಯರ್ ಜೀವಣ್ಣರವರು ಸತ್ಸಂಗವನ್ನು ಆಯೋಜಿಸಿದ್ದರು. ಅಂದು ಕುಂಭಕೋಣದ ಸಮೀಪದ ಆದಿನಂ ಶೈವ ಸಂಸ್ಥಾನ ಮಠದ ಪರಮಾಚಾರ್ಯ ಶ್ರೀ ಕೈಲಾಯಿ ಮಸಿಲಮಣಿ ದೇಸಿಕ ಸ್ವಾಮೀಜಿಗಳ ಜನ್ಮದಿನ ಸುವರ್ಣ ವರ್ಷ ಮತ್ತು 27ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ನಡೆದ ಸಂತರ ಸಮಾವೇಶದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳು ಭಾಗವಹಿಸಿದರು. ಅವರು ಮಾತನಾಡಿ, “ಧರ್ಮಕ್ಷೇತ್ರಗಳು ಮತ್ತು ಪ್ರಾಚೀನ ತೀರ್ಥಕ್ಷೇತ್ರಗಳು ಸನಾತನ ಧರ್ಮವನ್ನು ಒಗ್ಗೂಡಿಸಿ ಸುಸಂಸ್ಕೃತ ಹಾಗೂ ಸಭ್ಯ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಭಾರತೀಯ ಸನಾತನ ಧರ್ಮವು ವಿಶ್ವಮಾನ್ಯವಾದ ಮಾರ್ಗದರ್ಶಕ ಶಕ್ತಿ,” ಎಂದು ನುಡಿದರು. ಈ ಸಮಾರಂಭದಲ್ಲಿ ಬೆಂಗಳೂರು ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಹರಿಹರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಬೆಳ್ಳಾರಿಯ ಕಲ್ಯಾಣ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
