
ಉಡುಪಿ :ಶ್ರೀ ಎಲ್ಟನ್ ರೆಬೆಲೊ ಅವರ ಪತ್ನಿ ಪ್ರಕೃತಿ, ವಿಳಾಸ: Vivers Colony, Ankal, Bangalore, ಇವರು ಆಸ್ಟ್ರೇಲಿಯಾ ಹಾಗೂ ಲಂಡನ್ ದೇಶಗಳಿಗೆ ಕೆಲಸದ ವೀಸಾ ನೀಡುವ ಭರವಸೆ ನೀಡಿ ಅನೇಕ ಜನರನ್ನು ನಂಬಿಸಿದ್ದಾರೆ. ವೀಸಾ ಪ್ರಕ್ರಿಯೆಗೆ ಸಹಾಯ ಮಾಡುವ ಹೆಸರಿನಲ್ಲಿ ಇವರು ಸಂತ್ರಸ್ತರಿಂದ ಕೋಟಿಗಟ್ಟಲೆ ರೂಪಾಯಿಗಳನ್ನು ಸಂಗ್ರಹಿಸಿ ನಂತರ ಯಾವುದೇ ವೀಸಾ ನೀಡದೇ ಮೋಸ ಮಾಡಿದ್ದಾರೆ.
ಸಂತ್ರಸ್ತರು ಹಲವು ಬಾರಿ ಅವರೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಯಾವುದೇ ಸ್ಪಷ್ಟ ಉತ್ತರ ನೀಡದೆ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಈ ಕೃತ್ಯವು ನಂಬಿಕೆ ಭಂಗ (Breach of Trust), ವಂಚನೆ (Cheating), ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA act) ಮತ್ತು ಸೈಬರ್ ಮೋಸದ (Online Fraud) ವಿಭಾಗಕ್ಕೆ ಸೇರುತ್ತದೆ.
ಆರೋಪಿಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದಲ್ಲಿ ನಮ್ಮಲ್ಲಿ ಸಹಾಯ ಯಾಚಿಸಿದ ಸಂತ್ರಸ್ತರಂತೆ ವಿದೇಶಗಳಲ್ಲಿ ವೀಸಾ ಪಡೆಯಲು ಪ್ರಯತ್ನಿಸಿದ್ದ ನೂರಾರು ಜನರಿಂದ ಕೋಟಿಗಟ್ಟಲೆ ಹಣ ಪಡೆದು ವಂಚಿಸಿದ ವಿಷಯವು ಬಯಲಿಗೆ ಬರಬಹುದು. ಇಂತಹ ವೀಸಾ ವಂಚಕ ತಂಡದ ಹಿಂದಿರುವ ಕಾಣದ ಕೈಗಳನ್ನು ಕೂಡ ಬಂಧಿಸ ಬೇಕಾಗಿ ಸಂತ್ರಸ್ತರು
ತುಳುನಾಡ ರಕ್ಷಣಾ ವೇದಿಕೆ ಮುಖಂಡರ ಜೊತೆ ಈ ಕುರಿತು ಉಡುಪಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಹರಿರಾಮ ಶಂಕರ್ ರವರಿಗೆ ದೂರು ಸಲ್ಲಿಸಿ, ಮೇಲ್ಕಂಡ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲು ಹಾಗೂ ಸಂತ್ರಸ್ತರಿಗೆ ನ್ಯಾಯ ದೊರಕುವಂತೆ ಮಾಡುವಂತೆ ವಿನಂತಿಸಿದರು.
ಹಾಗೂ 1) ಸಂತ್ರಸ್ತರು ತುಳುನಾಡ ರಕ್ಷಣಾ ವೇದಿಕೆಗೆ ನೆರವು ಕೋರಿ ನೀಡಿರುವ ಪತ್ರದ ಪ್ರತಿ
2) ಸಂತ್ರಸ್ತರು ಹಣ ವರ್ಗಾವಣೆ ಅಥವಾ ಪಾವತಿ ರಶೀದಿಗಳ ಪ್ರತಿಗಳು
3) ಸಂದೇಶಗಳು / ಇಮೇಲ್ ಸಂವಹನದ ನಕಲು
4). ಸಂತ್ರಸ್ತರ ಗುರುತಿನ ದಾಖಲೆಗಳ ಪ್ರತಿಗಳು ನೀಡಿದರು.
ಇಂತಹ ಮೋಸಗಳು ಪುನಃ ಸಂಭವಿಸದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮನವಿ ತಕ್ಷಣವೇ ಸ್ಪಂದಿಸಿ ಕ್ರಮ ಜರುಗಿಸಿದರು.
ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ,
ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಮಹಿಳಾ ಅಧ್ಯಕ್ಷೆ ಸುನಂದ ಕೋಟ್ಯಾನ್, ಮಹಿಳಾ ಪ್ರಧಾನ ಕಾರ್ಯದರ್ಶಿ ಮಮತಾ ಆತ್ರಾಡಿ , ಜೊತೆ ಕಾರ್ಯದರ್ಶಿಗಳಾದ ಸುಭಾಷ್ ಸುದನ್, ಪ್ರೀತಮ್ ಡಿಕೋಸ್ತ, ಬೈರಂಪಳ್ಳಿ ಘಟಕ ಅಧ್ಯಕ್ಷ ಕೃಷ್ಣಾನಂದ, ಮಹಿಳಾ ಉಪಾಧ್ಯಕ್ಷೆ ಜ್ಯೋತಿ ಬನ್ನಂಜೆ, ಸಂಘಟನಾ ಕಾರ್ಯದರ್ಶಿ ಮಮತಾ ಅಮೀನ್ ,ಕ್ರೀಡಾ ಕಾರ್ಯದರ್ಶಿ ಸಂಗೀತ ಶೆಟ್ಟಿ, ಮುಖಂಡರುಗಳಾದ ಯಶೋಧ, ಕೃಷ್ಣ, ಶಂಕರ್, ರೋಷನ್, ಶ್ರೀನಿವಾಸ ಕೆ. ಜಿ ರೋಡ್ ಮತ್ತು ಹಣ ಕಳೆದುಕೊಂಡ ಸಂತ್ರಸ್ತರು ಉಪಸ್ಥಿತರಿದ್ದರು







