- ಸುಳ್ಯ ತಾಲೂಕಿನ ಪಕ್ಷದ ಕಚೇರಿಯಲ್ಲಿ ವಿದ್ಯಾರ್ಥಿ ಜನತಾದಳಕ್ಕೆ ಸೇರ್ಪಡೆ
- ಜನತಾ ದಳ (ಜಾತ್ಯತೀತ) ಪಕ್ಷದ ವತಿಯಿಂದ “ಜನತಾ ಸಮಾವೇಶ ಹಾಗೂ ಬೆಳ್ಳಿ ಹಬ್ಬ” ಕಾರ್ಯಕ್ರಮ ಅದ್ದೂರಿಯಾಗಿ, ಅಭೂತಪೂರ್ವ ಜನಸಾಗರದ ನಡುವೆ ಯಶಸ್ವಿ
- ಬೆಂಗಳೂರು ಜಿಬಿಎ ಚುನಾವಣೆ: ಜೆಡಿಎಸ್ಗೆ ಬೆಂಬಲ ನೀಡಿ – ಕುಮಾರಸ್ವಾಮಿ ಮನವಿ
- ಕರಂಬಾರಿನಲ್ಲಿ ನಾಗರಿಕ ಸೇವಾ ಸಮಿತಿ ಭವ್ಯವಾಗಿ ನೆರವೆರಿದ 12ನೇ ವಾರ್ಷಿಕೋತ್ಸವ
- ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಪಾತ ಪ್ರಕರಣ: ಶಿಕ್ಷಕ ಬಂಧನ
- ಹೆಬ್ರಿ: ರಸ್ತೆ ದಾಟುವ ವೇಳೆ ಮಿನಿ ಗೂಡ್ಸ್ ಡಿಕ್ಕಿ – ವಿದ್ಯಾರ್ಥಿನಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಸ್ಥಳೀಯರಿಂದ ಪ್ರತಿಭಟನೆ
- ಮಂಗಳೂರು: ಪ್ರೀತಿಯಲ್ಲಿ ಮನಸ್ತಾಪ – 22ರ ಯುವಕ ಆತ್ಮಹತ್ಯೆ, ಯುವತಿಯ ವಿರುದ್ಧ ಆರೋಪ
- ಉಡುಪಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಗ್ರ ಸಾಧನೆಗೆ ತುರವೇ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅಭಿನಂದನೆ
Author: Tulunada Surya
ಮಂಗಳೂರು : ನಾಟಕ ರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಪ್ರಯತ್ನದಲ್ಲಿ, ಮಂಗಳೂರಿನ ಸಾಯಿಶಕ್ತಿ ಕಲಾಬಳಗ ಈಗಾಗಲೇ ಸಾಕಷ್ಟು ಹೆಸರನ್ನು ಹುಟ್ಟುಹಾಕಿದೆ. ಈ ತಂಡ ಇದೀಗ ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆಯಲು ಮುಂದಾಗಿದೆ. ಇದು ನಾಟಕ ಕ್ಷೇತ್ರದಲ್ಲಿ ಅಪೂರ್ವ ಪ್ರಯತ್ನವಾಗಿದ್ದು , ನಾಟಕದ ಪ್ರಭಾವವನ್ನು ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆ ಎಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ಪ್ರಯತ್ನದ ಅಂಗವಾಗಿ, ತಂಡದ ಕಲಾವಿದರು ಕರ್ನಾಟಕ, ಕೇರಳ , ಮತ್ತು ಮುಂಬೈ ಮಹಾನಗರಿಯಲ್ಲಿ ಒಂದೇ ದಿನ ನಾಟಕ ಪ್ರದರ್ಶನ ನಡೆಸಲಿದ್ದಾರೆ. ತಂಡವು ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದು, ತಂತ್ರಜ್ಞಾನ ಮತ್ತು ಕ್ರಿಯಾತ್ಮಕತೆಯ ಸಹಾಯದಿಂದ ಈ ಮಹತ್ವಾಕಾಂಕ್ಷಿ ಪ್ರಯತ್ನವನ್ನು ತಲುಪಲು ಮುಂದಾಗಿದೆ. ಸಾಯಿಶಕ್ತಿ ಕಲಾಬಳಗ ಕಳೆದ ಕೆಲವು ವರ್ಷಗಳಿಂದ ನಾಟಕ ರಂಗದಲ್ಲಿ ಕ್ರಿಯಾಶೀಲವಾಗಿದ್ದು, ಪೌರಾಣಿಕ ನಾಟಕಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ತಂಡವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತಿಹಾಸಾತ್ಮಕ ಕಥಾಹಂದರವನ್ನು ಒಳಗೊಂಡ ನಾಟಕಗಳನ್ನು…
ಮಂಗಳೂರಿನ ಜನನಿಬಿಡ ಪ್ರದೇಶವಾಗಿರುವ ಹಂಪನಕಟ್ಟೆ ಪ್ರದೇಶವು ವಿಶ್ವವಿದ್ಯಾನಿಲಯ ಕಾಲೇಜು, ಮಿನಿ ವಿಧಾನಸೌಧ, ಪುರಭವನ ಸೇರಿದಂತೆ ಹಲವು ಸರಕಾರಿ ಕಛೇರಿ, ಬ್ಯಾಂಕ್ ಹಾಗೂ ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದು, ದಿನನಿತ್ಯ ಸಾವಿರಾರು ವಾಹನಗಳು ಹಾಗೂ ಸಾರ್ವಜನಿಕರು ನಡೆದಾಡುತ್ತಿರುತ್ತಾರೆ. ವಿಶ್ವವಿದ್ಯಾನಿಲಯ ಕಾಲೇಜಿನಿಂದ ಕ್ಲಾಕ್ ಟವರ್ ವರೆಗಿನ ರಸ್ತೆ ವಿಭಜಕದಲ್ಲಿ ಕೆಲವು ಕಡೆ ಬ್ಯಾರಿಕೇಡ್ ಅಳವಡಿಸದೆ ಇರುವುದರಿಂದ ಇಲ್ಲಿ ಶಾಲಾ ಕಾಲೇಜುಗಳ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವುದರಿಂದ ವಾಹನ ಚಾಲಕರಿಗೆ ತೊಂದರೆಯಾಗುತ್ತಿರುವುದಲ್ಲದೆ ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಇದಲ್ಲದೆ ಕ್ಲಾಕ್ ಟವರಿನ ಜಾಗದಲ್ಲಿ ಕೆಲವರು ವಾಹನಗಳನ್ನು ನಿಲ್ಲಿಸಿ ಸಮಸ್ಯೆ ತಂದೊಡ್ಡುತ್ತಿದ್ದಾರೆ.ಸಾರ್ವಜನಿಕರು ತುಳುನಾಡ ರಕ್ಷಣಾ ವೇದಿಕೆ ಗಮನಕ್ಕೆ ತಂದಿದ್ದರು. ಆದುದರಿಂದ ಕೂಡಲೇ ಜನರ ಮತ್ತು ವಾಹನ ಚಾಲಕರ ಸುರಕ್ಷತೆ ದೃಷ್ಟಿಯಿಂದ ವಿಶ್ವವಿದ್ಯಾನಿಲಯ ಕಾಲೇಜ್ ನಿಂದ ಕ್ಲಾಕ್ ಟವರ್ ವರೆಗಿನ ರಸ್ತೆ ವಿಭಜಕಕ್ಕೆ ಬ್ಯಾರಿಕೇಡ್ ಅಳವಡಿಸುವಂತೆ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡುವಂತೆ ದಿನಾಂಕ 04-03-2025 ರಂದು ಮಂಗಳೂರು ನಗರ ವಿಭಾಗ ಸಂಚಾರ ಮತ್ತು…
ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಠದಗುಡ್ಡೆಯಲ್ಲಿ ಸಿ.ಎಂ ಗ್ರಾಮ ವಿಕಾಸ ಯೋಜನೆ ಮತ್ತು ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು.ಶಾಸಕ ಡಾ.ಭರತ್ ಶೆಟ್ಟಿ, ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್, ಪಿಡಿಒ ಪಂಕಜಾ, ಉಪಾಧ್ಯಕ್ಷರಾದ ದಾವೂದ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ರವರು ಮಾತನಾಡುತ್ತಾ ಎಸ್.ಸಿ, ಎಸ್.ಟಿ ಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕನಸಾಗಿತ್ತು ಅವರ ಕನಸು ಇನ್ನೂ ನನಸಾಗಿಲ್ಲ, ಅವರು ರೂಪಿಸಿದ ಕಾಯ್ದೆಗಳು ಸರಿಯಾಗಿ ಪಾಲನೆಯಾಗದೆ ಮೀಸಲಾತಿ ಲಾಭ ಅಷ್ಟಕ್ಕಷ್ಟೇ ಇದೆ. ಶಿಕ್ಷಣ, ರಾಜಕೀಯ ಮಟ್ಟದಲ್ಲಿ ಅವರ ಕನಸು ಅನುಷ್ಠಾನಗೊಳ್ಳಬೇಕು.” ಎಂದು ಹೇಳಿದರು.
ಶಿರ್ವ ಕಳತ್ತೂರು ಸಪ್ತಋಷಿ ಜ್ಞಾನ ಮಂಟಪದಲ್ಲಿ ಚತುರ್ಥ ವಾರ್ಷಿಕ ಮಹಾಶಿವರಾತ್ರಿಯ ಶಿವ ಸಂಕೀರ್ತನೆ ಯು ಉತ್ತಮ ರೀತಿಯಲ್ಲಿ ದಿನಾಂಕ 26-032025 ರಂದು ನಡೆಯಿತು.ತುಳು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಯೋಗಿಶ್ ಶೆಟ್ಟಿ ಜೆಪ್ಪು ದೀಪ ಬೆಳಗಿ ಚಾಲನೆ ನೀಡಿದರು. ಗಣ್ಯರಾದ ಶ್ರೀ ರಾಘವೇಂದ್ರ ಭಟ್ ಕಳತ್ತೂರು, ಉದ್ಯಮಿ ಮಧು ಆಚಾರ್ಯ ಮೂಲ್ಕಿ, ಕುಣಿತ ಭಜನ ಸಂಯೋಜಕ ಶ್ರೀ ಶ್ರೀಧರ್ ಪಡುಬಿದ್ರಿ ದೀಪ ಬೆಳಗಲು ಜೊತೆಯಾದರು. ಧಾರ್ಮಿಕ ಮಾರ್ಗದರ್ಶಕ ಸಂತೋಷ ಆಚಾರ್ಯ ಉಡುಪಿ ಉಪಸ್ಥಿತರಿದ್ದರು. ಮಾಜಿ ಸಂಸದ ವಿನಯಕುಮಾರ್ ಸೊರಕೆ, ವೇದ ಮೂರ್ತಿ ಶ್ರೀ ಕಳತ್ತೂರು ಶ್ರೀ ಉದಯ ತಂತ್ರಿಗಳು ಮಹಾಪೂಜೆ ನೇರವೆರಿಸಿದರು. ಯುವ ಉದ್ಯಮಿ ಶ್ರೀ ಪ್ರಶಾಂತ್ ಕಾಮತ್ ಬೋಳ ಹಾಗೂ ಶಿರ್ವ ವ್ಯವಸಾಯ ಬ್ಯಾಂಕ್ ಅದ್ಯಕ್ಷರು ಶ್ರೀ ಪ್ರಸಾದ್ ಶೆಟ್ಟಿ ಕುತ್ಯಾರು ಅನುಗ್ರಹ ಪ್ರಸಾದ ಪಡೆದರು.ಹಾಗೂ ಹಲವಾರು ಗಣ್ಯರು ಮತ್ತು ಭಕ್ತರು ಕೀರ್ತನ ಸೇವೆಯಲ್ಲಿ ಭಾಗಿಯಾದರು.
ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಇದರ ಎನ್ಎಸ್ಎಸ್ ಘಟಕದ ವತಿಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ . ತಲಪಾಡಿ ಅವಿನಾಶಿ ಭಜನ ಮಂದಿರದ ಆವರಣದಲ್ಲಿ 02-03-2025 ರಂದು ಪ್ರಾರಂಭಗೊಂಡಿದ್ದು 7 ದಿನಗಳ ಕಾಲ ಶಿಬಿರ ನಡೆಯಲಿದೆ. ದಿನಾಂಕ 03-03-2025 ರಂದು ಸೋಮವಾರ ಬೆಳಿಗ್ಗೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಧ್ವಜಾರೋಹಣಗೈದು ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯು ವಿಧ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ವಾಗಿ ಬೆಳೆಯಲು ಅವಕಾಶ ಕಲ್ಪಿಸುತ್ತದೆ. ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಿರುವುದರಿಂದ ಸಾರ್ವಜನಿಕರಿಗೆ ಪ್ರಕೃತಿ ಚಿಕಿತ್ಸೆ ಮೂಲಕ ತಮ್ಮ ಆರೋಗ್ಯವನ್ನು ಯಾವುದೇ ಜೌಷದವಿಲ್ಲದೇ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅರಿವು ಮೂಡಿಸುತ್ತದೆ.ಬೆಳಿಗ್ಗೆ6:೦೦ ರಿಂದ 7:೦೦ AM ಯೋಗಾಭ್ಯಾಸ9:೦೦ ರಿಂದ 12:೦೦ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಇದರ ಜೊತೆಯಲ್ಲಿ ಇನ್ನಿತರ ಆರೋಗ್ಯವರ್ಧಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆಉಚಿತವಾಗಿ ದೊರಕುವ ಚಿಕಿತ್ಸೆಗಳು :-ಮಣ್ಣಿನ ಚಿಕಿತ್ಸೆಯೋಗ ಚಿಕಿತ್ಸೆಸೂಜಿ ಚಿಕಿತ್ಸೆ (acupuncture)ಕಪ್ಪಿಂಗ್ ಚಿಕಿತ್ಸೆಮಸಾಜ್ಮಧುಮೇಹರಕ್ತದೊತ್ತಡಸ್ಥೂಲಕಾಯಸಂಧಿವಾತಜೀವನಶೈಲಿ ಸಂಬಂಧಿತ ಕಾಯಿಲೆಗಳ…
ಮಂಗಳೂರು ; ಕಳೆದ 4 ವರ್ಷಗಳಿಂದ ನಮ್ಮ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭದಲ್ಲಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿ ಸನ್ನಿಧಿಗೆ ಪಾದಯಾತ್ರೆ ನಡೆಸುವುದರ ಮೂಲಕ ದೈವ ದೇವರುಗಳ ಬಗ್ಗೆ ಭಕ್ತಿ, ಶ್ರದ್ಧೆ ಮೂಡಿಸುವ ಪವಿತ್ರ ಕಾರ್ಯ ಮಾಡಿದ್ದು. ಹಿಂದೂ ವಿರೋಧಿ ಕೃತ್ಯಗಳು ಮಾಯವಾಗಿ, ಸಮಸ್ತ ಹಿಂದೂ ಸಮಾಜ ಐಕ್ಯತೆಯ ಜೊತೆಗೆ ಲೋಕಕಲ್ಯಾಣದ ಸದುದ್ದೇಶದಿಂದ ತಾ. 9-3-2025 ಆದಿತ್ಯವಾರ ಬೆಳಿಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಿಂದ ಕೊರಗಜ್ಜನ ಆದಿಕ್ಷೇತ್ರ ಕುತ್ತಾರಿನ ವರೆಗೆ ನಡೆಯುವ ಪಾದಯಾತ್ರೆ ನಡೆಸಲಾಗುತ್ತದೆಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರ್ ತಿಳಿಸಿದ್ದಾರೆ. ”ನಮ್ಮ ಸಂಘಟನೆಯ ಕಾರ್ಯಕರ್ತರು ಪಾದಯಾತ್ರೆ ಸಾಗಿಬರುವ ವಿವಿಧ ಕಡೆಗಳಲ್ಲಿ ಚಹಾ ತಿಂಡಿ ವ್ಯವಸ್ಥೆ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ದಿಕ್ಸೂಚಿ ಭಾಷಣವನ್ನು ಚಕ್ರವರ್ತಿ ಸೂಲಿಬೆಲೆ ಮಾಡಲಿದ್ದಾರೆ. ಕಾರ್ಯಕ್ರಮದ ಬಳಿಕ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ತಂಡದಿಂದ ಕೊರಗಜ್ಜನ ಕಾರಣಿಕ ಕುರಿತ ಯಕ್ಷಗಾನ ನಡೆಯಲಿದೆ“…
*ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಸಭೆಯು ದಿನಾಂಕ 9-2-25 ಆದಿತ್ಯವಾರ ಬೆಳಿಗ್ಗೆ 10:30ಕ್ಕೆ ಉಡುಪಿ ಜಿಲ್ಲಾ ಕಛೇರಿಯಲ್ಲಿ. ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆ ಸಂಪಾದಕ ಶಶಿ ಬಂಡಿಮಾರ್ ರವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಶಿ ಬಂಡಿಮಾರ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಶಶಿ ಬಂಡಿಮಾರ್ ರವರು ತುಳು ಭಾಷೆಗಾಗಿ ಅವರು ಮಾಡಿದ ತ್ಯಾಗ ಕುರಿತು ವಿವರಿಸಿ ಶಶಿ ಬಂಡಿಮಾರ್ ರವರ ಹೆಸರಿನಲ್ಲಿ ತುಳು ಭವನದಲ್ಲಿ ಯಾವುದಾದರೂ ಒಂದು ವೇದಿಕೆ ಅಥವಾ ಸಭಾಂಗಣಕ್ಕೆ ಹೆಸರು ಇಡುವಂತೆ ಪ್ರಯತ್ನಿಸಬೇಕು ಎಂದರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಶಶಿ ಬಂಡಿಮಾರ್ ರವರು ತುಳು ಭಾಷೆಗಾಗಿ ಅವರು ಕಂಡ ಕನಸುಗಳನ್ನು ಈಡೇರಿಸಲು ಎಲ್ಲಾ ತುಳು ಸಂಘಟನೆಗಳು ಒಟ್ಟಾಗಿ ಶ್ರಮಿಸಬೇಕು ಎಂದರು.ತುಳುನಾಡ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಕೃಷ್ಣ ಕುಮಾರ್,…
ದಿನಾಂಕ: 12-02-2025 ರಂದು ಬೆಳಿಗ್ಗೆ 11-00 ಗಂಟೆಯಿಂದ ಅಪರಾಹ್ನ 1.00 ಗಂಟೆಯವರೆಗೆ ಸುಳ್ಯ ತಾಲೂಕು ಕಛೇರಿ, ಸುಳ್ಯ ಇಲ್ಲಿ “ಲೋಕಾಯುಕ್ತ ಜನ ಸಂಪರ್ಕ ಸಭೆ” ಕಾರ್ಯಕ್ರಮಮನ್ನು ಆಯೋಜಿಸಲಾಗಿರುತ್ತದೆ. ಬಳಿಕ ಅಪರಾಹ್ನ 2.00 ಗಂಟೆಯಿಂದ ಅಪರಾಹ್ನ 3.00 ಗಂಟೆಯವರೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮ ಪಂಚಾಯತ್ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಸದರಿ ದಿನಾಂಕದಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ. ಭರ್ತಿ ಮಾಡಿ, ಅಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದರ…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸರ್ವ ತುಳು ಸಂಘಟನೆಗಳಿಂದ “ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ದಿ. ಶಶಿರಾಜ್ ಬಂಡಿಮಾರ್ ಇವರಿಗೆ ಶ್ರದ್ಧಾಂಜಲಿ ಸಭೆ ಫೆ.7 ರಂದು ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಿತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ತಾರನಾಥ್ ಗಟ್ಟಿ ನುಡಿ ನಮನ ಸಲ್ಲಿಸಿ ಮಾತನಾಡಿ, ಶಶಿ ಬಂಡಿಮಾರ್ ತುಳು ಭಾಷೆ, ತುಳುವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಿಸ್ವಾರ್ಥ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರ ನಿಧನ ತುಳುವರಿಗೆ ದೊಡ್ಡ ನಷ್ಟ , ಇಡಿ ತುಳುನಾಡಿಗೆ ದುಃಖದ ಸಂಗತಿ ಎಂದು ಹೇಳಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ,ತುಳು ರಾಜ್ಯದ ವಿಷಯ ಬಂದಾಗ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ದಿಟ್ಟವಾಗಿ ನುಡಿದವರು ಶಶಿ ಬಂಡಿಮಾರ್ ಎಂದು ಹೇಳಿದರು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ತುಳು ಭಾಷೆ ಅಧಿಕೃತ ಮಾಡುವ ಕೆಲಸಕ್ಕೆ ವೇಗ ಕೊಡಬೇಕೆಂದು ಶಶಿ ಬಂಡಿಮಾರ್ ಜತೆ ಹೇಳಿದ್ದೆ.…
ಬಂಟ್ವಾಳ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಅಂಗವಾಗಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ, ತುಳು ಸಾಹಿತ್ಯ ಸಮ್ಮೇಳನ ಫೆಬ್ರವರಿ 6 ರಂದು ನಡೆಯಿತು. ಫೆಬ್ರವರಿ 6ರಂದು ಬೆಳಗ್ಗೆ ದೀಪೋಜ್ವಲನ ಮೂಲಕ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆಯನ್ನು ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನೆರವೇರಿಸಿದರು. ಸಾಧ್ವಿ ಮಾತಾನಂದಮಯೀ ದಿವ್ಯ ಸಾನ್ನಿಧ್ಯದಲ್ಲಿ ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನ ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಯಾವುದೇ ಸಮಸ್ಯೆಗಳಿಗೆ ಪರಿಹಾರವಿರುವುದು ಆಧ್ಯಾತ್ಮಿಕತೆಯಲ್ಲಿ. ಅದರ ಉದ್ದೇಶದಲ್ಲಿ ಇಂದು ಆಧ್ಯಾತ್ಮ ಕೇಂದ್ರದ ಲೋಕಾರ್ಪಣೆಯಾಗಿದೆ ಅದು ಸದುಪಯೋಗವಾಗಬೇಕಾದರೆ ಭಕ್ತರ ಸಹಕಾರ ಅಗತ್ಯ ಎಂದು ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ, ಡಾ ರಾಮಾನಂದ ಶೆಟ್ಟಿ, ಹರೀಶ್ ಶೆಟ್ಟಿ ಐಕಳ, ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಕಡಂಜಾರು…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
