ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಇದರ ಎನ್ಎಸ್ಎಸ್ ಘಟಕದ ವತಿಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ . ತಲಪಾಡಿ ಅವಿನಾಶಿ ಭಜನ ಮಂದಿರದ ಆವರಣದಲ್ಲಿ 02-03-2025 ರಂದು ಪ್ರಾರಂಭಗೊಂಡಿದ್ದು 7 ದಿನಗಳ ಕಾಲ ಶಿಬಿರ ನಡೆಯಲಿದೆ.

ದಿನಾಂಕ 03-03-2025 ರಂದು ಸೋಮವಾರ ಬೆಳಿಗ್ಗೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಧ್ವಜಾರೋಹಣಗೈದು ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯು ವಿಧ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ವಾಗಿ ಬೆಳೆಯಲು ಅವಕಾಶ ಕಲ್ಪಿಸುತ್ತದೆ. ಉಚಿತ ಆರೋಗ್ಯ ಶಿಬಿರ ಆಯೋಜನೆ ಮಾಡಿರುವುದರಿಂದ ಸಾರ್ವಜನಿಕರಿಗೆ ಪ್ರಕೃತಿ ಚಿಕಿತ್ಸೆ ಮೂಲಕ ತಮ್ಮ ಆರೋಗ್ಯವನ್ನು ಯಾವುದೇ ಜೌಷದವಿಲ್ಲದೇ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅರಿವು ಮೂಡಿಸುತ್ತದೆ.
ಬೆಳಿಗ್ಗೆ
6:೦೦ ರಿಂದ 7:೦೦ AM ಯೋಗಾಭ್ಯಾಸ
9:೦೦ ರಿಂದ 12:೦೦ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ
ಇದರ ಜೊತೆಯಲ್ಲಿ ಇನ್ನಿತರ ಆರೋಗ್ಯವರ್ಧಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ
ಉಚಿತವಾಗಿ ದೊರಕುವ ಚಿಕಿತ್ಸೆಗಳು :-
ಮಣ್ಣಿನ ಚಿಕಿತ್ಸೆ
ಯೋಗ ಚಿಕಿತ್ಸೆ
ಸೂಜಿ ಚಿಕಿತ್ಸೆ (acupuncture)
ಕಪ್ಪಿಂಗ್ ಚಿಕಿತ್ಸೆ
ಮಸಾಜ್
ಮಧುಮೇಹ
ರಕ್ತದೊತ್ತಡ
ಸ್ಥೂಲಕಾಯ
ಸಂಧಿವಾತ
ಜೀವನಶೈಲಿ ಸಂಬಂಧಿತ ಕಾಯಿಲೆಗಳ ಉಚಿತವಾಗಿ ತಪಾಸಣೆ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಂದರು. ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಎನ್.ಎಸ್.ಎಸ್ ಅಧಿಕಾರಿ ಡಾ. ಅನುಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

