ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸರ್ವ ತುಳು ಸಂಘಟನೆಗಳಿಂದ “ಟೈಮ್ಸ್ ಆಫ್ ಕುಡ್ಲ” ತುಳು ಪತ್ರಿಕೆಯ ಪ್ರಧಾನ ಸಂಪಾದಕ ದಿ. ಶಶಿರಾಜ್ ಬಂಡಿಮಾರ್ ಇವರಿಗೆ ಶ್ರದ್ಧಾಂಜಲಿ ಸಭೆ ಫೆ.7 ರಂದು ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಿತು

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ತಾರನಾಥ್ ಗಟ್ಟಿ ನುಡಿ ನಮನ ಸಲ್ಲಿಸಿ ಮಾತನಾಡಿ, ಶಶಿ ಬಂಡಿಮಾರ್ ತುಳು ಭಾಷೆ, ತುಳುವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಿಸ್ವಾರ್ಥ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರ ನಿಧನ ತುಳುವರಿಗೆ ದೊಡ್ಡ ನಷ್ಟ , ಇಡಿ ತುಳುನಾಡಿಗೆ ದುಃಖದ ಸಂಗತಿ ಎಂದು ಹೇಳಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ,
ತುಳು ರಾಜ್ಯದ ವಿಷಯ ಬಂದಾಗ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ದಿಟ್ಟವಾಗಿ ನುಡಿದವರು ಶಶಿ ಬಂಡಿಮಾರ್ ಎಂದು ಹೇಳಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ತುಳು ಭಾಷೆ ಅಧಿಕೃತ ಮಾಡುವ ಕೆಲಸಕ್ಕೆ ವೇಗ ಕೊಡಬೇಕೆಂದು ಶಶಿ ಬಂಡಿಮಾರ್ ಜತೆ ಹೇಳಿದ್ದೆ. ಅವರ ಸ್ನೇಹ ಪ್ರೀತಿ, ಮರೆಯಲಾಗದು ಎಂದರು.
ಶಶಿ ಬಂಡಿಮಾರ್ ಅವರ ಸಹೋದರ ವಿನೋದ್ , ಮಾತನಾಡಿ, ನನ್ನ ತಮ್ಮ ತುಳು ಭಾಷೆಗಾಗಿ ಹೋರಾಟ ಮಾಡಿದ ಒಬ್ಬ ವೀರ ಯೋಧ ಎಂದರು.

ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಮಾತನಾಡಿ, ಶಶಿ ಬಂಡಿಮಾರ್ ಅವರಿಗೆ ತುಳುವಿನ ತುಡಿತ ತುಂಬಾ ಇತ್ತು. ತುಳು ಅಭಿವೃದ್ಧಿಗಾಗಿ ಅವರು ಮಾಡಿದ ಸೇವೆಯ ನೆನಪಿಗಾಗಿ ಅವರ ಹೆಸರು ಶಾಶ್ವತವಾಗಿರಬೇಕೆಂದು ತಿಳಿಸಿದರು.
ತುಳು ಅಕಾಡೆಮಿ ಮಾಜಿ ಸದಸ್ಯ ಡಾ.ಆಕಾಶ್ ರಾಜ್ ಜೈನ್ ಮಾತನಾಡಿ,ತುಳುವಿಗಾಗಿ ಅವರು ಸಂಘರ್ಷಕ್ಕೂ ತಯಾರಿದ್ದರು ಎಂದು ಸ್ಮರಿಸಿಕೊಂಡರು.
ತುಳು ವಿದ್ವಾಂಸ ಡಾ.ವೈ.ಎನ್. ಶೆಟ್ಟಿ ಮಾತನಾಡಿ, ಬಂಡಿಮಾರ್ ಪತ್ರಿಕೆ ನಡೆಸುವಾಗ ಹಲವಾರು ಸವಾಲು ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗಿದ್ದರು. ಅವರ ತುಳು ಸೇವೆಗೆ ಹಾಕಿ ಕೊಟ್ಟ ಹೆಜ್ಜೆ ಗುರುತನ್ನು ಮುಂದುವರಿಸಬೇಕು ಎಂದರು.

ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ತುಳು ಭವನದ ರಂಗಮಂದಿರಕ್ಕೆ ಶಶಿ ಬಂಡಿಮಾರ್ ಹೆಸರಿಡಬೇಕು. ಶಶಿ ಬಂಡಿಮಾರ್ ಅವರ ಜನ್ಮದಿನವಾದ ಅಕ್ಟೋಬರ್ 20ರಂದು ಅವರ ನೆನಪು ಕಾರ್ಯಕ್ರಮ ಮಾಡಬೇಕೆಂದರು.
ತೀಯ ಸಮಾಜ ಮುಖಂಡ , ಸಮಾಜ ಸೇವಕ ದಿನೇಶ್ ಕುಂಪಲ ರವರು ಶಶಿ ಬಂಡಿಮಾರ್ ರವರ ಹೆಸರಿನಲ್ಲಿ ವರ್ಷದಲ್ಲಿ ಒಂದು ಬಾರಿ ಗೌರವ ಪ್ರಶಸ್ತಿ ನೀಡುವ ಕಾರ್ಯಕ್ರಮ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳುವಂತೆ ವಿನಂತಿಸಿದರು
ಮಂಗಳೂರು ತುಳು ಕೂಟದ ಅಧ್ಯಕ್ಷೆ ಪ್ರೇಮಾ ದಾಮೋದರ ನಿಸರ್ಗ, ಶಮೀನಾ ಆಳ್ವ , ತುಳುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ತುಳುನಾಡ ಧ್ವನಿ ಯಶೋದ ಕೇಶವ್, ಟೈಮ್ಸ್ ಆಫ್ ಕುಡ್ಲದ ಭುವನಾ ದಿನೇಶ್ , ಸಮಾಜಸೇವಕಿ ಬಬಿತಾ ಶೆಟ್ಟಿ ನುಡಿ ನಮನ ಸಲ್ಲಿಸಿದರು.
ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ, ಕನ್ನಡ ಸಂಸ್ಕೃತಿ ಇಲಾಖೆಯ ರಾಜೇಶ್, ತುಳು ಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ತುಳುನಾಡ ಟ್ರಸ್ಟ್ ನ ಜಿ.ವಿ.ಎಸ್. ಉಳ್ಳಾಲ್, ರತ್ನಾವತಿ, ಭಾರತಿ ಶೆಟ್ಟಿ, ವೈ.ವಿ. ಶೆಟ್ಟಿ, ಜೈ ತುಲುನಾಡ್ ಅಧ್ಯಕ್ಷ ಉದಯ ಪೂಂಜ, ಕಿರಣ್ ತುಳುವೆ, ತುಳುನಾಡ ರಕ್ಷಣಾ ವೇದಿಕೆಯ ಪ್ರಶಾಂತ್ ಭಟ್ ಕಡಬ, ಇಬ್ರಾಹಿಂ ಜಪ್ಪು ಪವನ್ ರಾಜ್ ಮತ್ತು ಅಪಾರ ಸಂಖ್ಯೆಯ ತುಳು ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ತುಳು ವರ್ಲ್ಡ್ ಫೌಂಡೇಶನ್ ನ ಡಾ.ರಾಜೇಶ್ ಆಳ್ವ ರವರು ಶಶಿ ಬಂಡಿಮಾರ್ ರವರಿಗೆ ತುಳು ಭಾಷೆ ಮೇಲಿನ ಇದ್ದ ಅಪಾರ ಪ್ರೀತಿ ಬಗ್ಗೆ ಸ್ಮರಿಸಿದರು. ಮತ್ತು ಈ ಕಾರ್ಯಕ್ರಮ ಆಯೋಜಿಸಲು ಮುಂದೆ ಬಂದ ಯೋಗೀಶ್ ಶೆಟ್ಟಿ ಜಪ್ಪು ರವರ ಮೆಚ್ಚುಗೆ ವ್ಯಕ್ತಪಡಿಸಿದರು.