- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ನಾಗೋರಿ, ಮಂಗಳೂರು: ಡಿ.ಕೆ. ಟ್ರಾನ್ಸ್‌ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ ಸಂಸ್ಥೆಯ ಹೊಸ ಕಚೇರಿ ಉದ್ಘಾಟನಾ ಹಾಗೂ ಆಶೀರ್ವಾದ ಸಮಾರಂಭವು ನವೆಂಬರ್ 29, 2025ರಂದು ನಾಗೋರಿ, ಕಂಕನಾಡಿ ‘ಬಿ’ ವಿಲ್ಲೇಜ್ ಪ್ರದೇಶದ ಏಂಜಲ್ ರೆಸಿಡೆನ್ಸಿಯಲ್ಲಿ ಭವ್ಯವಾಗಿ ನೆರವೇರಿತು. ಕಾರ್ಯಕ್ರಮವು ಬೆಳಿಗ್ಗೆ 10.30ಕ್ಕೆ ಗಾರ್ಡಿಯನ್ ಏಂಜಲ್ ಚರ್ಚ್ ಪಾರಿಷ್ ಪ್ರೀಸ್ಟ್ ರೆವ್. ಫಾ. ಫ್ರೆಡ್ರಿಕ್ ಮೋಂಟೆರೋ ಹಾಗೂ ಸೋಸಿಯಸ್ ವಿಕಾರ್ ರೆವ್. ಫಾ. ಸ್ಟ್ಯಾನಿ ಫರ್ನಾಂಡ್ಸ್ ಅವರ ಆಶೀರ್ವಾದದೊಂದಿಗೆ ಆರಂಭಗೊಂಡಿತು. ಧರ್ಮಗುರುಗಳು ಸಂಸ್ಥೆಯ ಪ್ರಗತಿ, ಸೇವಾ ನಿಷ್ಠೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳು ಮತ್ತು ಗೌರವ ಅತಿಥಿಗಳು ಕಾರ್ಯಕ್ರಮದಲ್ಲಿ ಡಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಶಾಂತ್ ಶೆಟ್ಟಿ, ಡಕ್ಷಿಣ ಕನ್ನಡ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಚಿತ್ರಂಜನ್, ಏಂಜಲ್ ರೆಸಿಡೆನ್ಸಿ ಮಾಲೀಕ ಯೋಗೀಶ್ ಪೂಜಾರಿ ಗೌರವ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು. ಹಾಜರಿದ್ದ ಗಣ್ಯರು ಎಂಸಿಸಿ ಬ್ಯಾಂಕ್ ನ ಅದ್ಯಕ್ಷ ಅನಿಲ್ ಲೋಬೊ, ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್…
ಮಂಗಳೂರು: ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಪಿಲಿಪಂಜ” ತುಳು ಚಲನಚಿತ್ರದ ಎರಡನೇ ಹಾಡಾದ ಫ್ರೆಂಡ್ಷಿಪ್ ಸಾಂಗ್, ಭಾನುವಾರ ಮಂಗಳೂರಿನ ಭಾರತ್ ಮಾಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿತು. ಪ್ರತೀಕ್ ಯು. ಪೂಜಾರಿ ಕಾವೂರು ಅವರ ನಿರ್ಮಾಣದ ಈ ಚಿತ್ರಕ್ಕೆ ಭರತ್ ಶೆಟ್ಟಿ ಕಥೆ, ಪರಿಕಲ್ಪನೆ ಹಾಗೂ ನಿರ್ದೇಶನ ನೀಡುತ್ತಿದ್ದಾರೆ. ಬಿಡುಗಡೆ ಸಮಾರಂಭಕ್ಕೆ ತುಳು ಚಿತ್ರರಂಗ ಮತ್ತು ಸಮಾಜದ ಗಣ್ಯರು ಹಾಜರಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದರು. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ‍್. ಧನರಾಜ್, ತುಳುನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಯೋಗೀಶ್ ಶೆಟ್ಟಿ ಜಪ್ಪು, ನಿರ್ದೇಶಕ ರಝಾಕ್ ಪುತ್ತೂರು, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದೀಪಕ್ ಪೂಜಾರಿ, ವೀಣಾ ಮಂಗಳ, ಕ್ಯಾಮ್ಕೋ ಮಾಜಿ ಅಧ್ಯಕ್ಷ ಪ್ರಮೋದ್ ರೈ, ಪ್ರೇಮ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಚಿತ್ರದ ನಿರ್ಮಾಪಕ ಪ್ರತೀಕ್ ಯು. ಪೂಜಾರಿ, ಸಹ-ನಿರ್ಮಾಪಕಿ ಬಿಂದಿಯಾ ಪ್ರತೀಕ್, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ರಮೇಶ್ ರೈ ಕುಕ್ಕುವಳ್ಳಿ, ಸಂಗೀತ ನಿರ್ದೇಶಕ…
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಹೆಲಿಕಾಪ್ಟರ್ ಮೂಲಕ ಇಂದು ಮಧ್ಯಾಹ್ನ ಉಡುಪಿಗೆ ಆಗಮಿಸಿದ್ದು, ಆಗಮನ ಕ್ಷಣದಿಂದಲೇ ನಗರದಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತು. ಉಡುಪಿ ಕರಾವಳಿ ಬೈಪಾಸ್‌ನಿಂದ ಬನ್ನಂಜೆ ಮಾರ್ಗವಾಗಿ ಕಲ್ಸಂಕದವರೆಗೆ ನಡೆದ ಭವ್ಯ ರೋಡ್ ಶೋದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು, ಸಾವಿರಾರು ಜನರ ಘೋಷಣೆಗಳು, ಹರ್ಷೋದ್ಗಾರಗಳು ಹಾಗೂ ಕೈ ಬೀಸುವ ಸಂಭ್ರಮದ ನಡುವೆ ಪ್ರಧಾನಿಯವರ ವಾಹನ ಮೆರವಣಿಗೆ ಮುಂದುವರಿಯಿತು. ರಸ್ತೆ ತುದಿಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಂಡವು ರೋಡ್ ಶೋ ಹಿನ್ನೆಲೆಯಲ್ಲಿ ಉಡುವಪಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯು ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನು ಹಮ್ಮಿಕೊಂಡಿತ್ತು. ಜನರ ಸುರಕ್ಷತೆ ಹಾಗೂ ನಿಯಂತ್ರಣಕ್ಕಾಗಿ ಸಂಪೂರ್ಣ ಮಾರ್ಗದ ಎರಡೂ ಬದಿಗಳಲ್ಲೂ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಸಾವಿರಾರು ಜನರು ಸರಿನಿಯಮದಲ್ಲಿ ನಿಂತು ಪ್ರಧಾನಿಯವರನ್ನು ನೋಡುವ ಅಪಾರ ಕುತೂಹಲ ತೋರಿದರು. ಪ್ರಧಾನಿಯವರಿಗೆ ಪುಷ್ಪಾರ್ಚನೆಯೊಂದಿಗೆ ಸ್ವಾಗತ ರೋಡ್ ಶೋ ಆರಂಭವಾದ ಕ್ಷಣದಿಂದಲೇ ಜನರು ಹೂಗುಚ್ಛಗಳು, ಪುಷ್ಪವೃಷ್ಠಿಯ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಸಲ್ಲಿಸಿದರು. ಪುಟ್ಟ ಮಕ್ಕಳಿಂದ…
ಅಮ್ಮಣ್ಣಾಯರ ಹಾಡುಗಳ ಡಿಜಿಟಲೀಕರಣವಾಗಲಿ : ಸೂಡ ಮಂಗಳೂರು: ‘ಭಾಗವತ ಅಮ್ಮಣ್ಣಾಯರು ಸ್ವ ಪ್ರತಿಭೆ ಉಳ್ಳವರಾಗಿದ್ದರು; ಅವರ ಹಾಡುಗಾರಿಕೆ ಅನುಕರಣೆಗೆ ನಿಲುಕುವುದಲ್ಲ. ಮಂಡೆಚ್ಚರ ದಾರಿಯಲ್ಲಿ ತನ್ನ ಸ್ವಂತಿಕೆಯನ್ನು ಕಾಣಿಸಿದ ಅವರದೇ ವಿಶಿಷ್ಟ ಶೈಲಿಯ ಹಾಡುಗಳ ಡಿಜಿಟಲೀಕರಣ ಆಗತಕ್ಕದ್ದು’ ಎಂದು ಯಕ್ಷಗಾನ ಭಾಗವತ ಮತ್ತು ಪ್ರಸಂಗಕರ್ತ ಹರೀಶ್ ಶೆಟ್ಟಿ ಸೂಡಾ ಹೇಳಿದ್ದಾರೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು ,ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ನಡೆಸಿದ ‘ಅಮ್ಮಣ್ಣಾಯೆರ್ನ ನೆಂಪು ಬೊಕ್ಕ ತುಳು ತಾಳಮದ್ದೊಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಕ್ಷಗಾನದಲ್ಲಿ ತುಳು ಸಂಸ್ಕೃತಿ ಅನಾವರಣ:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಅವರು ಮಾತನಾಡಿ ‘ಯಕ್ಷಗಾನದಲ್ಲಿ ತುಳುತಿಟ್ಟು ಆರಂಭವಾದ ಕಾಲದಲ್ಲಿ ಕಲ್ಲಾಡಿ ವಿಠಲ ಶೆಟ್ಟರ ಪ್ರೇರಣೆಯಿಂದ ಕರ್ನಾಟಕ ಮೇಳದಲ್ಲಿ ದಿ| ಮಂಡೆಚ್ಚರು ಮತ್ತು ಅಮ್ಮಣ್ಣಾಯರು ತುಳು ಪ್ರಸಂಗಗಳನ್ನು ಮೆರೆಸಿದ್ದರು.…
ಹಾಲು ಎಂದರೆ ಅದು ಸಂಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ. ಹಸುವಿನ ಹಾಲಿನಲ್ಲಿ ದೇಹವನ್ನು ಪೋಷಿಸುವ ಎಲ್ಲಾ ಪೂರಕ ಅಂಶಗಳಿವೆ ಎಂಬುದು ಜನಜನಿತ. ಹಸುವಿನ ಹಾಲು ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಗತ್ಯ ಆಹಾರ. ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ವೈದ್ಯರು ಪ್ರತಿನಿತ್ಯ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ. ಹಾಲಿನಿಂದ ನಮಗೆ ಸಿಗಬಹುದಾದ ಆರೋಗ್ಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ತಿಳಿಸಲು ಮತ್ತು ದೇಶದಲ್ಲಿ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಕ್ಷೀರಕ್ರಾಂತಿಯ ಪಿತಾಮಹರಾದ ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನವಾದ ನವೆಂಬರ್ 26ರಂದು ಭಾರತದಲ್ಲಿ ರಾಷ್ಟ್ರೀಯ ಹಾಲು ದಿನ ಎಂದು ಆಚರಿಸಲಾಗುತ್ತಿದೆ. 2023-24ರ ಅಂಕಿ ಅಂಶಗಳ ಪ್ರಕಾರ, ಭಾರತವು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಮೂಡಿಬಂದಿದೆ. ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇಕಡಾ 24ರಷ್ಟು ಪಾಲು ಭಾರತದ್ದೇ ಆಗಿದೆ. 2023-24ರ ಅವಧಿಯಲ್ಲಿ ಹಾಲು ಉತ್ಪಾದನೆಯು ಸುಮಾರು 4% ಹೆಚ್ಚಾಗಿದ್ದು, ಒಟ್ಟು 230.58 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು…
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ ಹಾಗೂ ಬಹಿರಂಗ ಅಧಿವೇಶನದ ಸಂದರ್ಭದಲ್ಲಿ ಪ್ರಮುಖ ಪತ್ರಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ಭವ್ಯವಾಗಿ ನೆರವೇರಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್, ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಇರಾ, ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ್ ಶೆಟ್ಟಿ ಬಿ.ಎನ್. ಬ್ರಹ್ಮರಕೂಟ್ಲು ಇವರನ್ನು ಒಕ್ಕೂಟದ ಪುನರಾಯ್ಕೆಯಾದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಮಾತೃ ಸಂಘದ ಹೊರ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಮಾಕೃಷ್ಣ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ, ಮೋಹನ್ ದಾಸ್ ಶೆಟ್ಟಿ, ಶಶಿಧರ್ ಶೆಟ್ಟಿ…
📰 ಕಾವೇರಿ ನದಿಯ ಸಂರಕ್ಷಣೆ ಹಾಗೂ ಕೊಡಗಿನ ಅಪರೂಪದ ಪರಿಸರ ವ್ಯವಸ್ಥೆಯನ್ನು ಉಳಿಸುವ ಅಗತ್ಯತೆಯನ್ನು ಸರ್ಕಾರದ ಗಮನಕ್ಕೆ ತರಲು ನಡೆಸಲಾಗುತ್ತಿರುವ ಹೋರಾಟಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಕೃತಿ, ನದಿ, ಅರಣ್ಯ ಮತ್ತು ಸಂಸ್ಕೃತಿಯನ್ನು ಕಾಪಾಡುವ ಈ ಚಳವಳಿಯು ಕೇವಲ ಒಂದು ಕಾರ್ಯಕ್ರಮವಲ್ಲ; ಇದು ನಾಡಿನ ಭವಿಷ್ಯವನ್ನು ಸುರಕ್ಷಿತಗೊಳಿಸುವ ಜನಚಳವಳಿ ಎಂಬ ಸಂದೇಶ ಸಮಾಜದಲ್ಲಿ ಪ್ರತಿಧ್ವನಿಸುತ್ತಿದೆ. ಈ ಹೋರಾಟಕ್ಕೆ ಪರಿಣಾಮಕಾರಿ ಮುಖವನ್ನು ನೀಡುತ್ತಿರುವ ಕೊಡಗು ಅಭಿವೃದ್ಧಿ ಸಮಿತಿಯ ನಿಸ್ವಾರ್ಥ ಪರಿಶ್ರಮ ಶ್ಲಾಘನೀಯವಾಗಿದ್ದು, ಇವರ ಪರಿಸರಪರ ಧ್ವನಿಗೆ ಬೆಂಬಲ ಸೂಚಿಸಿರುವ ತುಳುನಾಡ ರಕ್ಷಣಾ ವೇದಿಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. “ನೆಲ–ಜಲ–ನುಡಿ–ಸಂಸ್ಕೃತಿಗಳನ್ನು ಉಳಿಸುವ ಪ್ರತಿಯೊಂದು ಹೋರಾಟವೂ ನಮ್ಮದೇ ಹೋರಾಟ. ಪ್ರಕೃತಿ ಉಳಿದಾಗ ಮಾತ್ರ ನಾಡು ಉಳಿಯುತ್ತದೆ. ನಾಡು ಉಳಿದರೆ ನಾವೆಲ್ಲರೂ ಉಳಿಯುತ್ತೇವೆ,” ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಹೇಳಿದ್ದಾರೆ. ಕೊಡಗಿನ ಪರಿಸರ ನಾಶ, ಕಾವೇರಿ ನೀರು ಸಂಕಷ್ಟ ಮತ್ತು ಪಶ್ಚಿಮ ಘಟ್ಟದ ಸಂವೇದನಾಶೀಲ ಪರಿಸರದ ರಕ್ಷಣೆಯು ಅತ್ಯಂತ ತುರ್ತು…
ಬೆಳ್ತಂಗಡಿ: ಎಂಸಿಸಿ ಬ್ಯಾಂಕ್ ಮಂಗಳೂರಿನ ಬೆಳ್ತಂಗಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ರೂ.10 ಕೋಟಿ ವ್ಯವಹಾರ ವಹಿವಾಟಿನ ಮೈಲಿಗಲ್ಲು ಸಾಧನೆಯ ಅಂಗವಾಗಿ, ಬ್ಯಾಂಕ್‌ನ 14ನೇ ಎಟಿಎಂ ಅನ್ನು ನವೆಂಬರ್ 22, 2025ರಂದು ಬೆಳ್ತಂಗಡಿ ಚರ್ಚ್ ರಸ್ತೆಯ ವೈಭವ್ ಆರ್ಕೇಡ್‌ನಲ್ಲಿ ಉದ್ಘಾಟಿಸಲಾಯಿತು. ಎಟಿಎಂ ಉದ್ಘಾಟನೆಯನ್ನು ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಶ್ರೀ ಸುಮಂತ್ ಕುಮಾರ್ ಜೈನ್ ನೆರವೇರಿಸಿದರು. ಬದ್ಯಾರ್ ಫಾ. ಎಲ್.ಎಂ. ಪಿಂಟೊ ಹೆಲ್ತ್ ಸೆಂಟರ್ ಚಾರಿಟೇಬಲ್ ಟ್ರಸ್ಟಿನ ಆಡಳಿತಾಧಿಕಾರಿ ವಂದನೀಯ ಫಾ. ರೋಶನ್ ಕ್ರಾಸ್ತಾ ಶುಭಾಶಯ, ಆಶೀರ್ವಾದ ಅರ್ಪಿಸಿದರು. ಹೊಸ ಎಟಿಎಂನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಉಜಿರೆ ಅನುಗ್ರಹ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲ ಫಾ. ವಿಜಯ್ ಲೋಬೊ ನೆರವೇರಿಸಿದರು. ಕಾರ್ಯಕ್ರಮಕ್ಕೆ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.ಹೋಲಿ ರಿಡೀಮರ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲ ಫಾ. ಕ್ಲಿಫರ್ಡ್ ಪಿಂಟೊ ಅತಿಥಿಯಾಗಿದ್ದರು. ಅಧ್ಯಕ್ಷ ಅನಿಲ್ ಲೋಬೋ: “ಮುಂದಿನ ವರ್ಷ ಗುರಿ ₹25 ಕೋಟಿ” ಅಧ್ಯಕ್ಷರಾಗಿ…
ಮಂಗಳೂರು: ಸಹಕಾರ ಸಪ್ತಾಹ–2025ರ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪತ್ರಿಕೆ ಸಂಯುಕ್ತಾಶ್ರಯದಲ್ಲಿ, ಮಂಗಳೂರಿನ ಉರ್ವಸ್ಟೋರ್ ತುಳುಭವನದ ‘ಸಿರಿ ಚಾವಡಿ’ಯಲ್ಲಿ ನವೆಂಬರ್ 16ರಂದು ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನೆರವೇರಿತು. ವೇದಿಕೆಯ ಸ್ಥಾಪಕ ಅಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮಾಜಿ ಸಚಿವ ಶ್ರೀ ಕೃಷ್ಣ ಪಾಲೆಮಾರ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ, ಧರ್ಮವಲೋಕನದ ಗಡಿಕಾರರು ಮತ್ತು ಅಧ್ಯಕ್ಷರಾದ ಶ್ರೀ ದೋಣಿಂಜೆ ಗುತ್ತು ಪ್ರಮೋದ್ ಕುಮಾರ್ ರೈ ಸೇರಿದಂತೆ ಪ್ರಮುಖ ಗಣ್ಯರು ಹಾಜರಿದ್ದರು. ಪರಿಶಿಷ್ಟ ಜಾತಿ–ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ಮೋಹನಂಗಯ್ಯ ಸ್ವಾಮಿ, ಕೆದಂಬಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಶ್ರೀ ಕಿರಣ್ ಬುಡ್ಲೆಗುತ್ತು, ವೇದಿಕೆಯ ವಕೀಲರ…
ಮಂಗಳೂರು: ಸಹಕಾರ ಸಪ್ತಾಹ–2025ರ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ ಮತ್ತು ತುಳುನಾಡ ಸೂರ್ಯ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 16ರಂದು ಮಂಗಳೂರಿನ ಉರ್ವಸ್ಟೋರ್ ತುಳುಭವನದ ‘ಸಿರಿ ಚಾವಡಿಯಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ವೇದಿಕೆಯ ಸ್ಥಾಪಕ ಅಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೆ ಮಾಜಿ ಸಚಿವ ಶ್ರೀ ಕೃಷ್ಣ ಪಾಲೆಮಾರ್, ಮಂಗಳೂರು ದಕ್ಷಿಣ ಶಾಸಕ ಶ್ರೀ ವೇದವ್ಯಾಸ್ ಕಾಮತ್, ಅದಾನಿ ಗ್ರೂಪ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಕಿಶೋರ್ ಆಳ್ವ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ, ಧರ್ಮವಲೋಕನದ ಗಡಿಕಾರರು ಮತ್ತು ಅಧ್ಯಕ್ಷ ಶ್ರೀ ದೋಣಿಂಜೆ ಗುತ್ತು ಪ್ರಮೋದ್ ಕುಮಾರ್ ರೈ, ಪರಿಶಿಷ್ಟ ಜಾತಿ–ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ಮೋಹನಂಗಯ್ಯ ಸ್ವಾಮಿ, ಕೆದಂಬಡಿ ರಾಮಯ್ಯಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಶ್ರೀ ಕಿರಣ್ ಬುಡ್ಲೆಗುತ್ತು, ತುಳುನಾಡ ರಕ್ಷಣಾ ವೇದಿಕೆಯ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
