- ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆ ಖಂಡನೀಯ: ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಉಡುಪಿ ಪತ್ರಕರ್ತರ ಸಂಘ ಆಗ್ರಹ
- ಆರೂರು ಅಡ್ಜಿಲು ಭಾಗದ ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಮೆಸ್ಕಾಂ ಒಂದು ತಿಂಗಳೊಳಗೆ ಹೊಸ ಟಿಸಿ ಅಳವಡಿಸುವ ಭರವಸೆ – ತುಳುನಾಡು ರಕ್ಷಣಾ ವೇದಿಕೆ ಆಗ್ರಹ
- ಆಗಸ್ಟ್ 23ರಂದು ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ “ಮರಿಯಾಳದ ಮಿನದನ” ಪೂರ್ವಭಾವಿ ಸಭೆ
- ₹5 ಕೋಟಿ ನಕಲಿ ಔಷಧಿ ಜಾಲ ಬಯಲು: ಫಾರ್ಮ್ಹೌಸ್ನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಅಧಿಕಾರಿಗಳ ದಾಳಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಲೇಬಲ್ ಅಂಟಿಸಿ ಔಷಧಿಗಳ ಮರುಪ್ಯಾಕಿಂಗ್ – ಅವಧಿ ಮೀರಿದ ಔಷಧಿಗಳೂ ಪತ್ತೆ
- ಉಡುಪಿ: ತುಳುನಾಡಿನ ಸಂಸ್ಕೃತಿ, ಪರಂಪರೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಸೂರಜ್ ನಾಯಕ್ ಸೋನಿ
- INDIA through my EYES’ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯಿ ಎಸ್. ವಿಜೇತೆ
- ಕರಂಬಾರು ಶಾಲೆಯಲ್ಲಿ ಸಂಭ್ರಮ ಸಡಗರದಿಂದ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ
- ಕೋರ್ದಬ್ಬು ದೈವದ ಪಾತ್ರಿ ಸೀನ ಪಾತ್ರಿ ನಂದಿಕೂರು ಮೆರೆಗ್ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ದ “ತುಳುವಾಲ ಕುಲಸಿರಿ – 2026” ಪ್ರಶಸ್ತಿ ಘೋಷಣೆ
Author: Tulunada Surya
ಮಂಗಳೂರು : ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮತ್ತೋರ್ವ ಕಾರ್ಯಾಧ್ಯಕ್ಷರಾಗಿ ಶ್ರೀ ಇಕ್ಬಲ್ ಅಹಮದ್ ಮುಲ್ಕಿ ಅವರನ್ನು ನೇಮಕ ಮಾಡಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ H. D. Kumaraswamy ಅವರು ಇಕ್ಬಲ್ ಅಹಮದ್ ಮುಲ್ಕಿ ಅವರಿಗೆ ಅಧಿಕೃತ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಶ್ರೀ ಶಶಿರಾಜ್ ಶೆಟ್ಟಿ ಕೊಳಂಬೆ ಹಾಗೂ ಶ್ರೀ ವಸಂತ್ ಪೂಜಾರಿ ಅವರು ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು, ಇದೀಗ ಇಕ್ಬಲ್ ಅಹಮದ್ ಮುಲ್ಕಿ ಅವರ ಸೇರ್ಪಡೆಯಿಂದ ಜಿಲ್ಲಾ ಜೆಡಿಎಸ್ ಸಂಘಟನೆಗೆ ಮತ್ತಷ್ಟು ಬಲ ದೊರೆತಿದೆ. ಇವರ ನೇಮಕಾತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳೂರು : ಉರ್ವ ಶೇಡಿಗುರಿ ಪ್ರದೇಶದಲ್ಲಿ ನಡೆಯುತ್ತಿರುವ ಬಹುಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ಪಕ್ಕದ ಮನೆಯ ಕಂಪೌಂಡ್ ಕುಸಿದು ಅಪಾಯಕರ ಪರಿಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಈ ಘಟನೆ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿತು. ಸಂತ್ರಸ್ತ ಮನೆಯವರು ಕರೆ ಬಂದ ತಕ್ಷಣ ರಾತ್ರಿಯೇ ಸ್ಥಳಕ್ಕೆ ಧಾವಿಸಿದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಅವರು ಪರಿಸ್ಥಿತಿಯನ್ನು ಪರಿಶೀಲಿಸಿ ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಕಟ್ಟಡ ನಿರ್ಮಾಣದ ಮಾಲೀಕರು ಹಾಗೂ ಗುತ್ತಿಗೆದಾರರೊಂದಿಗೆ ತುರ್ತು ಚರ್ಚೆ ನಡೆಸಿ, ಅಪಾಯದಲ್ಲಿದ್ದ ಕುಟುಂಬದ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮಳೆ ಮುಂದುವರಿದಿರುವ ಹಿನ್ನೆಲೆ ಮನೆ ಮತ್ತಷ್ಟು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ, ಕುಟುಂಬದವರನ್ನು ಮುಂಜಾಗ್ರತಾ ಕ್ರಮವಾಗಿ ಸಮೀಪದ ಹೋಟೆಲಿಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಅಲ್ಲದೆ ಮನೆಗೆ ಯಾವುದೇ ಹಾನಿಯಾಗದಂತೆ ತಾತ್ಕಾಲಿಕ ರಕ್ಷಣಾತ್ಮಕ…
ಮಂಗಳೂರು, ಮೇ 20 : ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ವ್ಯಾಪ್ತಿಯ ಎಪಿಸ್ಕೋಪಲ್ ಸಿಟಿ ವರಾಡೊಗೆ ನಡೆದ ಚುನಾವಣೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ನಗರ ಕಾರ್ಯದ್ಯಕ್ಷ ಕ್ಲೀಟಸ್ ಲೋಬೊ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೇ 13ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯೊಂದಿಗೆ ವರಾಡೊಗೆ ಹೊಸ ನಾಯಕತ್ವ ದೊರೆತಿದೆ.ನೂತನ ಕಾರ್ಯಕಾರಿ ಸಮಿತಿಯಲ್ಲಿ ಜೆಸಿಂತಾ ಲೋಬೊ ಕಾರ್ಯದರ್ಶಿಯಾಗಿ ಹಾಗೂ ಸ್ಟೀವನ್ ರೋಡ್ರಿಗ್ಸ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಮಾಜಿ ಅಧ್ಯಕ್ಷೆ ಐಡಾ ಫುರ್ಟಾಡೊ ಸದಸ್ಯೆಯಾಗಿ ಮುಂದುವರಿಯಲಿದ್ದು, ತಮ್ಮ ಅನುಭವದ ಮೂಲಕ ಸಂಘಟನೆಯ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಇನ್ನೂ ಏಳು ಮಂದಿ ಸದಸ್ಯರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಸಮಗ್ರ ಕಾರ್ಯಕಾರಿ ತಂಡ ರಚನೆಯಾಗಿದೆ.ಆಧ್ಯಾತ್ಮಿಕ ನಿರ್ದೇಶಕರಾಗಿ ವಂದನೀಯ ಫಾ. ಜಾನ್ ವಾಸ್ ನೇಮಕಗೊಂಡಿದ್ದು, ವರಾಡೊದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಆಧ್ಯಾತ್ಮಿಕ ದಿಕ್ಕು ನೀಡಲಿದ್ದಾರೆ. ಸಂಘಟನೆಯ ಮೌಲ್ಯಾಧಾರಿತ ಸೇವಾ ಕಾರ್ಯಗಳಿಗೆ ಅವರು ಮಾರ್ಗದರ್ಶಕರಾಗಲಿದ್ದಾರೆ.ಚುನಾವಣಾ ಪ್ರಕ್ರಿಯೆಯಲ್ಲಿ ಕ್ಯಾಥೋಲಿಕ್ ಸಭೆಯ ಕೇಂದ್ರ ಸಮಿತಿಯನ್ನು ಪ್ರತಿನಿಧಿಸಿ ಸ್ಟ್ಯಾನಿ ಲೋಬೊ ವೀಕ್ಷಕರಾಗಿ…
ಮಂಗಳೂರು : ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮತ್ತೋರ್ವ ಕಾರ್ಯಾಧ್ಯಕ್ಷರಾಗಿ ಶ್ರೀ ವಸಂತ್ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರು ನಗರದ ಜೆಪಿ ಭವನದಲ್ಲಿರುವ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ವಸಂತ ಪೂಜಾರಿಯವರಿಗೆ ಅಧಿಕೃತ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಈ ಹಿಂದೆ ಶ್ರೀ ಶಶಿರಾಜ್ ಶೆಟ್ಟಿ ಕೊಳಂಬೆ ಅವರು ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದು, ಇದೀಗ ಮತೊರ್ವ ಕಾರ್ಯದ್ಯಕ್ಷರಾಗಿ ವಸಂತ್ ಪೂಜಾರಿ ಅವರು ನೇಮಕಗೊಂಡಿದ್ದು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮಂಗಳೂರು : ಜನತಾದಳ (ಸೆಕ್ಯುಲರ್) ಪಕ್ಷದ ರಾಜ್ಯ ಮೀನುಗಾರರ ಘಟಕದ ಅಧ್ಯಕ್ಷರಾಗಿ ಶ್ರೀ ರತ್ನಾಕರ ಸುವರ್ಣ ಅವರು ಮರು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ H. D. Kumaraswamy ಅವರು ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. .
ಮಂಗಳೂರಿನ ಎಜೆ ಆಸ್ಪತ್ರೆಯ ಮುಂಭಾಗದಲ್ಲಿರುವ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ಇನ್ಟಾಮಾರ್ಟ್ ಸಂಸ್ಥೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಬೆಳಲು ಪೂಂಜಕೆರೆ ನಿವಾಸಿ ಅವಿವಾಹಿತ 28 ವರ್ಷದ ಯುವಕ ನೌಫಲ್ ಎಂಬುವರು ಸಂಸ್ಥೆಯ ಅವೈಜ್ಞಾನಿಕವಾಗಿ ಯಾವುದೇ ಪರವಾನಿಗೆ ಪಡೆಯದೆ ನಿರ್ಮಿಸಿದ ಲಿಫ್ಟ್ ನಲ್ಲಿ ಸಿಲುಕಿ ಅವಘಡದಿಂದ ಸಾವನ್ನಪ್ಪಿದ್ದು ಈ ಘಟನೆಯು ಅತ್ಯಂತ ದುಃಖಕರ ಹಾಗೂ ಆತಂಕಕಾರಿ ಘಟನೆ ಎಂದು ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಿರಂತರವಾಗಿ ನಿರ್ಮಾಣ ಕಾಮಗಾರಿಗಳು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿರುವ ಪರಿಣಾಮ ಅಮಾಯಕ ಕಾರ್ಮಿಕರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾರ್ಮಿಕರ ಸುರಕ್ಷತೆಗಾಗಿ ಅಗತ್ಯವಾದ ತಾಂತ್ರಿಕ ವ್ಯವಸ್ಥೆಗಳು, ನಿಯಮಿತ ಪರಿಶೀಲನೆ ಮತ್ತು ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ ಇರುವ ಸಂಸ್ಥೆಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವಾಗಿದೆ.ಮೃತ ಕಾರ್ಮಿಕನ ಕುಟುಂಬಕ್ಕೆ ತಕ್ಷಣವೇ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆ ವತಿಯಿಂದ ಸೂಕ್ತ ಪರಿಹಾರ ಘೋಷಿಸಬೇಕು ಮತ್ತು…
ಬೆಂಗಳೂರು, ಮೇ 20 : ಆನ್‌ಲೈನ್ ಮೂಲಕ ನಡೆಯುತ್ತಿರುವ ನಿಯಂತ್ರಣರಹಿತ ಔಷಧ ಮಾರಾಟ ವ್ಯವಸ್ಥೆ ವಿರುದ್ಧ ದೇಶದಾದ್ಯಂತ ಔಷಧ ವ್ಯಾಪಾರಿಗಳು ನಡೆಸಿದ ಮೆಡಿಕಲ್ ಶಾಪ್ ಬಂದ್‌ಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. All India Organisation of Chemists and Druggists (AIOCD) ನೇತೃತ್ವದಲ್ಲಿ ನಡೆದ ಈ ಹೋರಾಟ ಕೇವಲ ವ್ಯಾಪಾರಿಗಳ ಹಿತಾಸಕ್ತಿಗೆ ಸೀಮಿತವಾಗಿಲ್ಲದೆ, ಸಾರ್ವಜನಿಕ ಆರೋಗ್ಯ ಮತ್ತು ಔಷಧ ಸುರಕ್ಷತೆಯನ್ನು ಕಾಪಾಡುವ ಮಹತ್ವದ ಜನಆಂದೋಲನವಾಗಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಮೆಡಿಕಲ್ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ವಿಶೇಷವಾಗಿ Dakshina Kannada ಜಿಲ್ಲೆಯಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಸುಮಾರು 1100ಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಸ್ವಯಂಪ್ರೇರಿತವಾಗಿ ಬಂದ್ ಪಾಲ್ಗೊಂಡು ಆನ್‌ಲೈನ್ ಔಷಧ ಮಾರಾಟದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿವೆ. ರಾಜಧಾನಿ Bengaluru ಸೇರಿದಂತೆ ಕೆಲವು ನಗರ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಸೇವೆ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ಕೆಲವು ಅಂಗಡಿಗಳು ತೆರೆಯಲ್ಪಟ್ಟಿದ್ದರೂ, ಬಹುತೇಕ…
ಉಡುಪಿ : ಕಟಪಾಡಿ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕಾಗಿ ರಸ್ತೆ ಭಾಗವನ್ನು ಆಳವಾಗಿ ಅಗೆಯಲಾಗಿದ್ದು, ಮೇಲ್ಭಾಗದ ರಸ್ತೆಯಲ್ಲಿ ಪ್ರತಿದಿನ ಭಾರೀ ವಾಹನಗಳು, ಬಸ್‌ಗಳು ಹಾಗೂ ಇತರೆ ಘನ ವಾಹನಗಳು ನಿರಂತರವಾಗಿ ಸಂಚಾರ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಉಡುಪಿ ಜಿಲ್ಲಾದ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ತಿಳಿಸಿದ್ದಾರೆ. ಈಗಾಗಲೇ ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಪ್ರದೇಶದ ಸುತ್ತಮುತ್ತ ಮಣ್ಣು ಸಡಿಲಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಯಾವುದೇ ಕ್ಷಣದಲ್ಲಿ ರಸ್ತೆ ಕುಸಿತ ಅಥವಾ ಭೂಕುಸಿತದಂತಹ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಎದುರಾಗಿದೆ. ಮೇಲ್ಭಾಗದಲ್ಲಿ ವಾಹನ ಸಂಚಾರ ನಡೆಯುತ್ತಿರುವಾಗ ಕೆಳಭಾಗದಲ್ಲಿ ಆಳವಾದ ತೋಡಿಕೆ ಇರುವುದರಿಂದ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ನಿರಂತರ ಮಳೆಯಿಂದಾಗಿ ರಸ್ತೆ ಬದಿಗಳ ಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರ ಪ್ರಾಣಾಪಾಯ ಸಂಭವಿಸಬಹುದಾಗಿದ್ದು, ಭವಿಷ್ಯದಲ್ಲಿ…
ಮಂಗಳೂರು : ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ಪಕ್ಷದ ವರಿಷ್ಠ ನಾಯಕ, ರಾಜಕೀಯ ಭೀಷ್ಮ, ಹಿರಿಯ ಮುತ್ಸದ್ದಿ ಹಾಗೂ “ಮಣ್ಣಿನ ಮಗ” ಎಂದೇ ಖ್ಯಾತರಾಗಿರುವ ಕರ್ನಾಟಕ ರತ್ನ ಶ್ರೀ ಹೆಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯತೀತ) ವತಿಯಿಂದ ನಿರಾಶ್ರಿತರಿಗೆ ಊಟ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲಾಯಿತು. ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ನಗರದಲ್ಲಿರುವ ನಿರಾಶ್ರಿತರಿಗೆ ಅನ್ನಸಂತರ್ಪಣೆ ನಡೆಸಿ, ಸಮಾಜಮುಖಿ ಕಾರ್ಯದ ಮೂಲಕ ದೇವೇಗೌಡರವರ ಜನ್ಮದಿನಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರು, “ಈ ದೇಶದ 11ನೇ ಪ್ರಧಾನಮಂತ್ರಿಯಾಗಿ ಹೆಚ್.ಡಿ. ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ರೈತಪರ, ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳಾ ಮೀಸಲಾತಿ, ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳು, ರೈತರಿಗೆ ರಸಗೊಬ್ಬರ ಸಬ್ಸಿಡಿ, ಕಾವೇರಿ ಹಾಗೂ ಮಹಾದಾಯಿ ನೀರಿನ…
ಕಾಪು : ಮಜೂರು ಪ್ರೀಮಿಯರ್ ಲೀಗ್ -2026 ಎಂ.ಪಿ.ಎಲ್ ಸೀಸನ್ 05 ಇದರ ಉದ್ಘಾಟನೆಯನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಆಜ್ಮತ್ ಆಲಿರವರು ನೆರವೇರಿಸಿದರು ನೆರವರೆಸಿ ಮಾತನಾಡಿದ ಅವರು ಈ ರೀತಿಯ ಕ್ರೀಡಾಕೂಟ ಆಯೋಜಿಸಿದ ಯುವಕರ ಬಗ್ಗೆ ಮೆಚ್ಚುಗೆ ವಹಿಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಇಲ್ಲಿಯಯುವಕರು ಸಾಮಾಜಿಕ ಕಳಕಳಿ ಹಾಗೂ ಕ್ರೀಡಾಕೂಟಕ್ಕೆ ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಸ್ಲಾಘನೀಯ ಎಂದು ಪ್ರೋತ್ಸಹಿಸಿ ಮಾತನಾಡಿದರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಪ್ರಥಮ ಬಹುಮಾನ ಪಡೆದ ಫೈಝಿ ಬಾಯ್ಸ್ ಹಾಗೂ ದ್ವಿತೀಯ ಬಹುಮಾನ ಪಡೆದ ಫ್ರೆಂಡ್ಸ್ ಮಜೂರು ತಂಡಕ್ಕೆ ಶುಭ ಹಾರೈಸಿದರು ಅತಿಥಿಗಳಾಗಿ ಭಾಗವಹಿಸಿದ ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಅಧ್ಯಕ್ಷರಾದ ಡಾ.ಫಾರೂಕ್ ಚಂದ್ರನಗರ ಮಾತನಾಡಿ ಈ ಕ್ರೀಡಾಕೂಟಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು ಅನಿವಾಸಿ ಭಾರತೀಯ ಉದ್ಯಮಿ ರೈಟ್ ಚಾಯ್ಸ್ ಇದರ ಮಾಲಕರಾದ ಆಯಾಜ್ ಕೈಕಂಬ,…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
