ಬೆಂಗಳೂರು : ಇತ್ತೀಚೆಗೆ ಹೋಟೆಲ್ ಸ್ಯಾಂಕ್ ಹೋಟೆಲ್ ಗಾಂಧಿನಗರ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಎಂ ಬಸವರಾಜ್ ಪಡಕೋಟೆ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿಗಳಾದ ಸುಜಯ್ ಪೂಜಾರಿಯವರ ಸಮ್ಮುಖದಲ್ಲಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಲಕ್ಷ್ಮಿ ಇವರು ನಮ್ಮ ಕರ್ನಾಟಕ ಸೇನೆ ನೂತನ ಉಡುಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ಅನಿತಾ ಬಿವಿ ಅವರನ್ನು ಆಯ್ಕೆಮಾಡಲಾಯಿತು. ನಂತರ ಅವರಿಗೆ ಶಾಲು ಧರಿಸಿ ಸನ್ಮಾನಿಸಲಾಯಿತು. ನಮ್ಮಕರ್ನಾಟಕ ಸೇನೆಯ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿಯಾಗಿ ಸುಜಯ್ ಪೂಜಾರಿರವರನ್ನು ರಾಜ್ಯಾಧ್ಯಕ್ಷರಾದ ಶ್ರೀ ಎಂ ಬಸವರಾಜ ಪಡುಕೋಟೆ ಯವರು ರಾಜ್ಯಸಭೆಯಲ್ಲಿ ಹೂ ಕುಚ್ಚ ನೀಡಿ ಅಭಿನಂದನೆಸಿದ್ರು
ಉಡುಪಿ ಸಂಘಟನೆಯನ್ನು ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಅನಿತಾ ಬಿವಿ ನೇತೃತ್ವದಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಿರು ತ್ತಾರೆ.
ಈ ಸಂದರ್ಭದಲ್ಲಿ ಕರವೇ ರಾಜ್ಯ ಗೌರವಾಧ್ಯಕ್ಷರು ಹಾಗೂ ಕನ್ನಡ ಚಲನಚಿತ್ರ ಖ್ಯಾತ ನಟರು. ನಿರ್ಮಾಪಕರು ಶ್ರೀಯು ಗಣೇಶ್ ರಾವ್. ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನಾಗರಾಜ್ ಚಕನಹಳ್ಳಿ . ಪ್ರಧಾನ ರಾಜ್ಯ ಸಂಚಾಲಕರು ಶ್ರೀ ಭೀಮಣ್ಣ ಶಾಖಾಪುರ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬಿ.ಶೆಟ್ಟಿ. ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಸುನಿತ ಗೌಡ. ಮೊದಲಾದವರು ಉಪಸ್ಥಿತರಿದ್ದರು.








