ಬಂಟ್ವಾಳ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಸಿರೋಡಿನ ಪುರಸಭಾ ವ್ಯಾಪ್ತಿಯ ಅರ್ಬಿಗುಡ್ಡೆ ಎಂಬಲ್ಲಿ ಇಂದು ನಡೆದಿದೆ.
ಅರ್ಬಿಗುಡ್ಡೆ ನಿವಾಸಿ ಶಿವಕುಮಾರ್ (26) ಮೃತಪಟ್ಟ ಅವಿವಾಹಿತ ಯುವಕ.
ಮನೆಯಲ್ಲಿ ಯಾರು ಇಲ್ಲದ ರಾತ್ರಿ ವೇಳೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈತ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದು, ದೊಡ್ಡಮ್ಮ ನೆಂಟರ ಮನೆಗೆ ಹೋದ ದಿನದಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲಿಸರು ಬೇಟಿ ನೀಡಿದ್ದಾರೆ.