Wednesday, February 21, 2024
spot_img
More

  Latest Posts

  ಮಂಗಳೂರು: ರಾಡ್ ನಿಂದ ಚುಚ್ಚಿ ಯುವಕನ ಹತ್ಯೆ

  ಮಂಗಳೂರು: ರಾಡ್ ನಿಂದ ಚುಚ್ಚಿ ಯುವಕನನ್ನು ಬರ್ಬರ‌ವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಕೂಳೂರು ರಾಯಿಕಟ್ಟೆಯಲ್ಲಿ ನಡೆದಿದೆ. ಪಶ್ಚಿಮ‌ ಬಂಗಾಳದ ನಿವಾಸಿ ಬಿಕಾಸ್ ಗುನಿಯಾ(22) ಮೃತ ದುರ್ದೈವಿ. ವಾಸುದೇವ ಗುನಿಯಾ(33) ಕೊಲೆ ಮಾಡಿದಾತ. ಈತನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ‌ ರಾಡ್‌ನಿಂದ ಎದೆಗೆ ಚುಚ್ಚಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಕೊಲೆ‌ಯಾದವರು & ಕೊಲೆ ಆರೋಪಿ ಇಬ್ಬರು ಕೂಡ ಬಂಗಾಳದವರು. ಇಬ್ಬರು ಕೂಡ ಕುಳೂರಿನಲ್ಲಿ ಗಾರೆ ಕೆಲಸ ಮಾಡಿ ಕೊಂಡಿದ್ದರು. ಆರೋಪಿ ವಾಸುದೇವ ಗುನಿಯಾನಿಗೆ ಮೃತ ಬಿಕಾಸ್ ಗುನಿಯಾ ಊರಿನ ಯುವತಿಯ ಜೊತೆ ಮದುವೆಯಾಗಿತ್ತು. ಆತನ ಪತ್ನಿ ಜೊತೆ ಬಿಕಾಸ್ ಗೆ ಅಕ್ರಮ‌ ಸಂಬಂಧ ಇದೆ ಎಂದು ಶಂಕಿಸಿ ಭಾನುವಾರ ಮಧ್ಯಾಹ್ನ ವಾಸುದೇವ ಗುನಿಯಾ ಪಾನಮತ್ತನಾಗಿ ಅಕ್ರಮ ಸಂಬಂಧದ ಬಗ್ಗೆ ಗಲಾಟೆ ಮಾಡಿ ಬಿಕಾಸ್‌ನ ಎದೆಗೆ ರಾಡ್ ನಿಂದ ಚುಚ್ಚಿದ್ದಾನೆ ಎನ್ನಲಾಗಿದೆ.‌ ಇದರಿಂದ ಗಂಭೀರ ಗಾಯಗೊಂಡ ಬಿಕಾಸ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಬಂಧಿಸಿ ಪೊಲೀಸರು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss