ಉಡುಪಿ : ದಿನಾಂಕ 30- 07- 20 23 ರಂದು ಸಂಜೆ 4:00ಗೆ ಉಡುಪಿ ಕಿದಿಯೂರು ಹೋಟೆಲ್ ತುಳುನಾಡು ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕದ ನೂತನ ಸದಸ್ಯರ ಸೇರ್ಪಡೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಲು ಯಾವುದೇ ತ್ಯಾಗಕ್ಕೂ ತುರವೇ ಕಾರ್ಯಕರ್ತರು ಸಿದ್ದರಾಗಬೇಕೆಂದು ಕರೆ ನೀಡಿದರು
ತುಳುನಾಡ ಅಭಿವೃದ್ಧಿ ತುಳುವರ ಹಿತ ರಕ್ಷಣೆಗೆ ಸದಾ ಸಿದ್ದರಾಗಿರುವುದಾಗಿ ಹೇಳಿದರು.
ಉಡುಪಿ ಜಿಲ್ಲಾ ವೀಕ್ಷಕರಾಗಿ ಸಮಾಜ ಸೇವಕರಾದ ಶ್ರೀ. ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ ಯವರನ್ನು ನೇಮಿಸಲಾಯಿತು.
ಚಿತ್ರ ನಿರ್ದೇಶಕ ಇಸ್ಮಾಯಿಲ್ ಮುಡುಶೆಡ್ಡೆ,ತಾಲೂಕು ಗೌರವಾಧ್ಯಕ್ಷ ಶ್ರೀ. ರವಿ ಆಚಾರ್ಯ, ಸಲಹೆಗರಾರ ಶ್ರೀ. ಸುಧಾಕರ್, ತಾಲೂಕು ಅಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಫೆರ್ನಾಂಡಿಸ್, ಉಪಾಧ್ಯಕ್ಷರುಗಳಾದ ಶ್ರೀ ಜಯರಾಮ್ ಪೂಜಾರಿ, ಗಣೇಶ್ ಮಲ್ಯ, ಮಾಧ್ಯಮ ಕಾರ್ಯದರ್ಶಿ ಶ್ರೀ. ರೋಷನ್ ಡಿಸೋಜಾ, ಯುವ ಘಟಕ ಅಧ್ಯಕ್ಷ ರಾಹುಲ್, ಮಹಿಳಾ ಅಧ್ಯಕ್ಷೆ ಶ್ರೀಮತಿ ಶೋಭಾ ಪಾಂಗಳ, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಾಗಲಕ್ಷ್ಮಿ, ಸಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು , ನೂತನ ಸದಸ್ಯರನ್ನು ಅಧಿಕೃತವಾಗಿ ಸಾಲು ಹಾಕುವ ಮೂಲಕ ಆತ್ಮೀಯವಾಗಿ ಸಂಘಟನೆ ಸೇರಿಸಿಕೊಳ್ಳಲಾಯಿತು.