ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಮಂಗಳೂರು ಯುವ ಘಟಕ ವತಿಯಿಂದ ಇಂದು 28-10-2023 ರಂದು ಬೆಳ್ಳಗೆ 10.00 ಗಂಟೆಗೆ ಲೇಡಿಗೋಷನ್ ಆಸ್ಪತ್ರೆ ಯ ಆವರಣದಲ್ಲಿರುವ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಕೇಂದ್ರದಲ್ಲಿ ರಕ್ತದಾನ ಶಿಬಿರ
ನಡೆಯಿತು
ನಾಳೆ (ಅ.29) ಮಂಗಳೂರು ನಗರ ಘಟಕ ವತಿಯಿಂದ ಬೆಳ್ಳಗೆ 8.00 ಗಂಟೆಗೆ ಬಿಜೈ ಸ್ನೇಹದೀಪ ಆಶ್ರಮದ ಮಕ್ಕಳಿಗೆ ಬೆಳಗ್ಗಿನ ಉಪಹಾರ ಹಾಗೂ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ನಡೆಯಲಿದೆ.
ಅದೇ ರೀತಿ ಕಾಪು ತಾಲೂಕು ಮಹಿಳಾ ಘಟಕದ ವತಿಯಿಂದ ಮದ್ಯಹ್ನ ಗಂಟೆ 10.00 ಕ್ಕೆ ಪಂಚನ ಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಗೆ ಅಕ್ಕಿ ಹಾಗೂ ದಿನ ಬಳಕೆ ಸಾಮಾಗ್ರಿಗಳನ್ನು ಮತ್ತು ಸಿಹಿತಿಂಡಿ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಉಡುಪಿ ತಾಲೂಕು ಘಟಕದ ವತಿಯಿಂದ ಮದ್ಯಹ್ನ ಗಂಟೆ 10.00 ಕ್ಕೆ ಉಪ್ಪೂರು ಸ್ಪಂದನ ವಿಶೇಷ ಚೇತನರ ಶಾಲೆ ಸಾಲ್ಮರ ಇಲ್ಲಿಗೆ ಹಣ್ಣು ಹಂಪಲು ಮತ್ತು ಕೇಕ್ ವಿತರಣಾ ಕಾರ್ಯಕ್ರಮ ನಡೆಯಲಿದೆ.
ನಂತರ ಉಡುಪಿ ಜಿಲ್ಲೆ ವತಿಯಿಂದ ಮದ್ಯಹ್ನ 1.00 ಗಂಟೆಗೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರ ಉಪಸ್ಥಿತಿಯಲ್ಲಿ ಹುಟ್ಟು ಹಬ್ಬ ಆಚರಣೆ ಉಡುಪಿ ಜಿಲ್ಲಾ ಕಚೇರಿ ಕ್ಲಾಸಿಕ್ ಕಾಂಪ್ಲೆಕ್ಸ್ ನಲ್ಲಿ ನಡಯಲಿದೆ.
ನಂತರ ಸಂಜೆ 5.30 ಕ್ಕೆ ತುಳುನಾಡ ರಕ್ಷಣಾ ವೇದಿಕೆ ವಿವಿಧ ಘಟಕಗಳ ವತಿಯಿಂದ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಉಪಸ್ಥಿತಿಯಲ್ಲಿ ಜಪ್ಪು ಮಾರುಕಟ್ಟೆ ಬಳಿ ಇರುವ ಭಗಿನಿ ಸಮಾಜ ಶಿಶು ನಿಲಯದ ಮಕ್ಕಳಿಗೆ ಉಪಹಾರ ಮತ್ತು ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ತು.ರ.ವೇ ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.