Thursday, April 18, 2024
spot_img
More

  Latest Posts

  ವಿಶ್ವ ಕಪ್ ನಲ್ಲಿ ಭಾರತ ಗೆಲುವಿಗೆ ತುಳುನಾಡ ರಕ್ಷಣಾ ವೇದಿಕೆ ದೇವರ ಮೊರೆ

  ಉಡುಪಿ: ಭಾರತದ ಕ್ರಿಕೆಟ್ ತಂಡ ಆಸ್ಟೇಲಿಯದ ವಿರುದ್ಧ ಫೈನಲ್ ಗೆ ಬಂದಿದ್ದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ವಿಶ್ವ ಕಪ್ ನಲ್ಲಿ ಭಾರತ ಗೆದ್ದು ಬರಲಿ ಎಂದು ಉಡುಪಿ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

  ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜಾ ರವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಅಂಬಲಪಾಡಿ ದೇವಸ್ಥಾನಕ್ಕೆ ತೆರಳಿ ವಿಶ್ವಕಪ್ ಫೈನಲ್ ನಲ್ಲಿ ಭಾರತ ದೇಶವು ವಿಜಯವಾಗಬೇಕೆಂದು ದೇವರಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

  .

  ಈ ಸಂದರ್ಭದಲ್ಲಿ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಕೃಷ್ಣಕುಮಾರ್ ಮಹಿಳಾ ಅಧ್ಯಕ್ಷೆ ಶೋಭಾ ಪಾಂಗಳ, ಉಪಾಧ್ಯಕ್ಷ ಜಯ ಪೂಜಾರಿ, ಮಹಿಳಾ ಕಾರ್ಯದರ್ಶಿ ನಾಗಲಕ್ಷ್ಮಿ, ಗೌರವ ಸಲಹೆಗಾರ ಸುಧಾಕರ ಅಮಿನ್, ರಿಕ್ಷಾ ಮಾಲಕರ ಮತ್ತು ಚಾಲಕರ ಅಧ್ಯಕ್ಷ ಅನಿಲ್ ಪೂಜಾರಿ, ಸುನಂದ, ಹರೀಶ್, ಗುಣವತಿ, ಗುಲಾಬಿ ,ಅಭಿಷೇಕ್ , ಸಂದೇಶ್, ಹೇಮಾ ,ನಳಿನಿ ಗಣೇಶ್ ಮಲ್ಯ, ಸಂಜೀವ ಪೂಜಾರಿ, ಸಾಧನ ಮತ್ತಿತರರು ಉಪಸ್ಥಿತರಿದ್ದರು

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss