Wednesday, February 21, 2024
spot_img
More

  Latest Posts

  ಬಂಟರ ಸಂಘ ಮೈಸೂರಿನಲ್ಲಿ “ವಿಶ್ವ ಬಂಟರ ಕ್ರೀಡಾಕೂಟ” ಹಾಗೂ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ”ದ ಕರಪತ್ರ ಬಿಡುಗಡೆ

  ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಆಕ್ಟೋಬರ್ 28 ಮತ್ತು 29 ರಂದು ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಮರ್ಥ ಸಾರಥ್ಯದಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ “ವಿಶ್ವ ಬಂಟರ ಕ್ರೀಡಾಕೂಟ” ಹಾಗೂ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ” ಕಾರ್ಯಕ್ರಮದ ಕರಪತ್ರವನ್ನು ಬಂಟರ ಸಂಘ ಮೈಸೂರಿನ ಶ್ರೀಮತಿ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆoಷನ್ ಸಭಾಭವನದಲ್ಲಿ ಬಂಟರ ಸಂಘದ ಅಧ್ಯಕ್ಷ ಶ್ರೀ ಟಿ. ಪ್ರಭಾಕರ್ ಶೆಟ್ಟಿ ಮತ್ತು ಇತರ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.


  ವಿಶ್ವ ಬಂಟರ ಸಮ್ಮಿಲನದ ಕಾರ್ಯಕ್ರಮಗಳಿಗೆ ಮೈಸೂರ್ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರು ಹಾಗೂ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಪ್ರಿತಿಪೂರ್ವಕವಾಗಿ ಆಹ್ವಾನಿಸಿದರು.


  ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಹಾಗೂ ಉಪಾಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿಯವರನ್ನು ಮೈಸೂರ್ ಬಂಟರ ಸಂಘದ ಅಧ್ಯಕ್ಷ ಶ್ರೀ ಟಿ.ಪ್ರಭಾಕರ್ ಶೆಟ್ಟಿಯವರು ಸನ್ಮಾನಿಸಿದರು.


  ಈ ಸಂದರ್ಭದಲ್ಲಿ ಮೈಸೂರ್ ಬಂಟರ ಸಂಘದ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಕೆ. ಗಣೇಶ್ ನಾರಾಯಣ ಹೆಗ್ಡೆ, ಉಪಾಧ್ಯಕ್ಷ ಶ್ರೀ. ಕೆ. ಹೆಚ್. ಸರ್ವೋತ್ತಮ ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀ ಎಂ. ನಂದ್ಯಪ್ಪ ಶೆಟ್ಟಿ,ಕೋಶಾಧಿಕಾರಿಗಳಾದ ಶ್ರೀ ಪಿ. ತುಕಾರಾಮ ರೈ, ಶ್ರೀ ವೈ. ಬಿ. ಸತೀಶ್ ಶೆಟ್ಟಿ,ಜೊತೆ-ಕಾರ್ಯದರ್ಶಿಗಳಾದ ಶ್ರೀ ಪಿ ಹರೀಶ್ ಆಳ್ವಾ, ಶ್ರೀಮತಿ ಸೌಮ್ಯ ವಿ. ಶೆಟ್ಟಿ,ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಕೆ. ಭಾಸ್ಕರ್ ಕೆ.ಶೆಟ್ಟಿ, ಶ್ರೀ ವೆಂಕಪ್ಪ ರೈ, ಶ್ರೀ ರವಿಚಂದ್ರ ಶೆಟ್ಟಿ, ಡೆಪ್ಯೂಟಿ ಮ್ಯಾನೇಜರ್ ಟ್ರಸ್ಟಿ ಶ್ರೀಮತಿ ವೇದಾ ರೈ, ಕಲ್ಚರಲ್ ಚೇರ್ ಪರ್ಸನ್ ಶ್ರೀಮತಿ ಸೌಮ್ಯ ವಿ. ಶೆಟ್ಟಿ,ಶ್ರೀಮತಿ ಅಲಕಾರಣಿ ಎಸ್. ಶೆಟ್ಟಿ ಜಂಟಿ ಕೋಶಾಧಿಕಾರಿ,ಒಕ್ಕೂಟದ ವಿಶೇಷ ಆಹ್ವಾನಿತ ಸದಸ್ಯ ಶ್ರೀ ರವಿರಾಜ್ ಶೆಟ್ಟಿ ಜತ್ತಬೆಟ್ಟು ಮತ್ತು ಇನ್ನಿತರರು ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss