Sunday, November 3, 2024
spot_img
More

    Latest Posts

    ಮಂಗಳೂರು: ರೈಲಿನಲ್ಲಿ ಮಹಿಳೆಯ ಬ್ಯಾಗ್‌ ಕಳವು

    ಮಂಗಳೂರು: ಮಂಗಳೂರಿನಿಂದ ಮುಂಬಯಿಗೆ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸೇರಿದ ಬ್ಯಾಗನ್ನು ಎಗರಿಸಿ ಅದರಲ್ಲಿದ್ದ ಹಣ ಮತ್ತು ದಾಖಲೆಪತ್ರಗಳನ್ನು ಕಳವುಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮೂಲತಃ ಮುಂಬಯಿ ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿ ವಾಸವಾಗಿದ್ದ ಎಲಿಜಬೆತ್‌ಗೆ ಸೇರಿದ ಬ್ಯಾಗ್‌ ಇದಾಗಿದ್ದು, ಇದರಲ್ಲಿ 15 ಸಾವಿರ ರೂ., ಎಟಿಎಂ, ಆಧಾರ್‌, ಪಾನ್‌ಕಾರ್ಡ್‌ ಮತ್ತಿತರ ದಾಖಲೆ ಪತ್ರಗಳಿದ್ದವು.

    ಆರೋಪಿಗಳು ಇವೆಲ್ಲವನ್ನು ತೆಗೆದು ಬ್ಯಾಗ್‌ ಎಸೆದು ಪರಾರಿಯಾಗಿದ್ದಾರೆ.

    ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಮುಂಬಯಿಗೆ ತೆರಳುವ ರೈಲಿಗೆ ಆ. 4ರಂದು ಸಂಜೆ 5.30ಕ್ಕೆ ಎಲಿಜೆಬೆತ್‌ ಮತ್ತವರ ಸಹೋದರರು ಹತ್ತಿದ್ದರು. ರಾತ್ರಿ ಸುಮಾರು 10ಕ್ಕೆ ಇಬ್ಬರು ನಿದ್ದೆಗೆ ಜಾರಿದ್ದು, ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗ್‌ ಕಳವಾಗಿತ್ತು. ಹುಡುಕಾಡಿದಾಗ ಬ್ಯಾಗ್‌ ರೈಲಿನ ಬೋಗಿಯೊಂದರ ಟಾಯ್ಲೆಟ್‌ನಲ್ಲಿ ಕಂಡುಬಂದಿತ್ತು. ಮಹಿಳೆ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss