Saturday, July 27, 2024
spot_img
More

    Latest Posts

    ಇನ್ನೂ IPC 420 ವಂಚನೆಯಲ್ಲ, 302 ಮರ್ಡರ್ ಅಲ್ಲ: ‘ಹೊಸ ಸೆಕ್ಷನ್’ಗಳು ಯಾವುವು..? ಇಲ್ಲಿದೆ ಮಾಹಿತಿ

    ನವದೆಹಲಿ: ಲೋಕಸಭೆಯ ಮಾನ್ಸೂನ್ ಸಂಸತ್ತಿನ ಸದನದಲ್ಲಿ ಶುಕ್ರವಾರದ ನಿನ್ನೆಯ ಕೊನೆಯದಿನದಂದು ಮಹತ್ವದ ಮೂರು ಕಾನೂನು ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಈ ತಿದ್ದುಪಡಿ ಮಸೂದೆಯಂತೆ ಇನ್ಮುಂದೆ ಐಪಿಸಿ 420 ವಂಚನೆಯಲ್ಲ, 302 ಮರ್ಡರ್ ಅಲ್ಲ.

    ಹಾಗಾದ್ರೇ ಹೊಸ ಸೆಕ್ಷನ್ ಗಳು ಯಾವುವು ಅನ್ನೋ ಬಗ್ಗೆ ಮುಂದೆ ಓದಿ.

    ಶುಕ್ರವಾರದಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಗೆ ಹೊಸ ರೂಪ ನೀಡುವ ಉದ್ದೇಶದಿಂದ ಮೂರು ವಿಧೇಯಕಗಳನ್ನು ಮಂಡಿಸಿದರು. ಅವುಗಳಲ್ಲಿ ಐಪಿಸಿಯಲ್ಲಿರುವಂತ ಸಾಕಷ್ಟು ಸೆಕ್ಷನ್ ಗಳನ್ನು ಅದಲು, ಬದಲು ಮಾಡಲಾಗಿದೆ.

    ಭಾರತೀಯ ನ್ಯಾಯ ಸಂಹಿತೆ 2023ರ ತಿದ್ದುಪಡಿ ವಿಧೇಯಕದಂತೆ ಈಗಿರುವ 420 ಸೆಕ್ಷನ್ ಹಾಗೂ 302 ಮರ್ಡರ್ ಸೆಕ್ಷನ್ ಗಳು ಕೂಡ ಬದಲಾವಣೆಯಾಗಿವೆ ಎನ್ನಲಾಗುತ್ತಿದೆ.

    ಹೀಗಿವೆ ಹೊಸ ಸೆಕ್ಷನ್

    420 ಸೆಕ್ಷನ್ ವಂಚನೆ ಪ್ರಕರಣ ಬದಲಾವಣೆ ಮಾಡಲಾಗಿದ್ದು, ಈ ಕೃತ್ಯಕ್ಕೆ 316(2), (3) ಮತ್ತು (4) ಸೆಕ್ಷನಗಳಿಗೆ ಸೇರಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ವಂಚನೆ ಅಪರಾಧಕ್ಕಾಗಿ 3, 5 ಅಥವಾ 7 ವರ್ಷಗಳವೆರೆಗೆ ದಂಡ ಸಹಿತ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

    ಇನ್ನೂ 302 ಸೆಕ್ಷನ್ ಅಡಿಯಲ್ಲಿ ಕೊಲೆ ಕೇಸ್ ದಾಖಲಾಗುತ್ತಿದ್ದದ್ದು ಬದಲಾಗಿದೆ. ಈಗ 302 ಕೊಲೆಗಲ್ಲ. ಸ್ನ್ಯಾಚಿಂಗ್ ಗೆ ಅಪ್ಲೈ ಆಗಲಿದೆ. 302 ಸೆಕ್ಷನ್ ಅನ್ನು 101ಗೆ ಬದಲಾವಣೆ ಮಾಡಲಾಗಿದೆ. 302 ಸ್ನ್ಯಾಚಿಂಗ್ ಆದ್ರೇ, ಇದರ ಅಡಿಯಲ್ಲಿ 302(1) ಕಳ್ಳತನ ಮಾಡುವ ವಿವಿಧ ಉಪಕ್ರಮಗಳನ್ನು ಸೇರಿಸಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss