ಬೆಂಗಳೂರು: ನೂತನವಾಗಿ ಆಯ್ಕೆಗೊಂಡಿರುವ ಎಲ್ಲ ಶಾಸಕರಿಗೂ ವಿಧಾನಸಭೆಯಲ್ಲಿ ಪ್ರಮಾಣವಚನ ಬೋಧನೆ ಕಾರ್ಯಕ್ರಮದಲ್ಲಿ ಇಂದು ನಡೆಯಿತು.
2 ನೇ ಭಾರಿ ಶಾಸಕರಾಗಿ ಆಯ್ಕೆಯಾದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ರವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ತುಳುನಾಡ ಶಾಲು ಧರಿಸಿ ಪ್ರಮಾಣ ವಚನ ಮಾಡಿದರು.
ಶಾಸಕ ವೇದವ್ಯಾಸ್ ಕಾಮತ್ ರವರು ತುಳು ನೆಲ, ಸಂಸ್ಕ್ರತಿಯ ಬಗ್ಗೆ ಅಪಾರ ಗೌರವ ಹೊಂದಿರುವವರು. ಈ ಹಿನ್ನಲೆ ಇಂದು ಸದನದಲ್ಲಿ ತುಳು ಶಾಲು ಧರಿಸಿ ಮತ್ತೊಮ್ಮೆ ತುಳುನಾಡಿಗೆ ಮತ್ತು ತುಳು ಜನತೆಯ ಗೌರವಕ್ಕೆ ಪಾತ್ರರಾದರು.
